
ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತ್ತಿದ್ದರೂ ಅನ್ಯರ ಬಾಯಿಗೆ ಉಣಿಸುತಿಹ ಹೀನರನ...
ಕನ್ನಡ ತುತ್ತೂರಿ ಊದುವ ಬನ್ನಿ ಕನ್ನಡ ಜ್ಯೋತಿಯ ಬೆಳಗುವ ಬನ್ನಿ ನಿತ್ಯ ಉತ್ಸವದನಡೆಯಲ್ಲಿ ಜಯಕಾರವ ಮೊಳಗುವ ಬನ್ನಿ ವನರಾಶಿಯ ಕಲೆ ತಾಣದ ಸಿಂಹಸ್ವಪ್ನ ಕಲ್ಪಧಾರೆಯಲ್ಲಿ ||ನಿತ್ಯ|| ಕತ್ತಲಲ್ಲಿ ಬೆಳಕಾಗಿ ಬಂದ ಮಿಂಚು ಸ್ನೇಹ ಅಧರದಲ್ಲಿ ಶೃಂಗ ತಣಿರ ಬ...
ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ ಕತ್ತಲೆಯನರಸಿಗರು ತಾರೆಗಳು ಚಮಕಿಸುವ ತಮ್ಮ ಕಿರುವೆರಳನ್ನು, ನಲಿಯುವವು. ಮೆ...
ನರಸತ್ತ ಶಿವಧರ್‍ಮ ಬ್ಯಾಡ ಬ್ಯಾಡೋ ಯಪ್ಪ ಸತ್ತವನು ಶಿವಯೋಗಿ ಆಗಲಾರ ಇದ್ದವನು ಬಿದ್ದವನು ಎದ್ದೋಡಿ ಹೋದವನು ಶಿವಶಿವಾ ಶಿವಯೋಗಿ ಆಗಲಾರ ಪಟ್ಟೆ ಭಸಿತವ ಇಟ್ಟು ಲಿಂಗಬೆಟ್ಟವ ಕಟ್ಟಿ ಕಟ್ಟೀಯ ವಾಚಾಳಿ ಶರಣನಲ್ಲ ಹಗಲೊಂದು ಪರಿನಿದ್ರಿ ಇರುಳೊಂದು ಪರಿನಿದ...
ನಂಜಿ ರತ್ನ ತೋಟ್ಕ್ ಓಗಿದ್ರು ಒಂದಾರ್ ಮಾತಾಡ್ನಿಲ್ಲ; ಔರ್ಗೊಳ್ ಮಾತಾಡ್ನಿಲ್ಲಾಂತಲ್ಲ- ಆಡೋಕ್ ಮನಸಾಗ್ನಿಲ್ಲ. ೧ ನಂಜಿ ರತ್ನಂಗ್ ತೋರಿದ್ಲೊಂದು ದುಂಬಿ ತಬ್ಬಿದ್ ಊವ! ರತ್ನನ್ ಮನಸಿನ್ ಅಡಗ್ ಸೇರಿತ್ತು ನಂಜಿ ಮನಸಿನ್ ರೇವ! ೨ ಮನಸಿನ್ ಜೋಡಿ ಯೀಣೆ...
ಎಂಥ ಗಾಳಿ ಎಷ್ಟೊಂದು ಗಾಳಿ ಬೆಟ್ಟದ ಮೇಲಿಂದ ಬೀಸ್ಯಾವೆ ಗಾಳಿ ಬಯಲ ಮೇಲಿಂದ ಬೀಗ್ಯಾವ ಗಾಳಿ ಎತ್ತರದ ಗಾಳಿ ಉತ್ತರದ ಗಾಳಿ ಉತ್ತರ ಧ್ರುವದಿಂದ ನಿರುತ್ತರ ಗಾಳಿ ಗುಡುಗು ಮಿಂಚುಗಳ ಮುಟ್ಟಿದ ಗಾಳಿ ಸಾಗರದಲೆಗಳ ಅಟ್ಟಿದ ಗಾಳಿ ಸುಳಿಸುಳಿವ ಗಾಳಿ ಸುಳಿಯದ...
ಭವದುರ್ಗವಿಪಿನದೊಳು ಗಮ್ಯವರಿಯದೆ ತೊಳಲಿ ಶ್ರಾಂತಿಯಿಂ ಭ್ರಾಂತಿಯಿಂ ಗತಿಗೆಟ್ಟು ಮತಿಗೆಟ್ಟು ಮುಂತನರಿಯದೆ ನಿರಿಹಪರನಾಗಿ, ಅಂದಾರ್ತ ಪ್ಲವಗವಾಹಿನಿ ವಿಂಧ್ಯಕಾನನದಿ ಬಳಿಗೆಟ್ಟು ನಿರೀಹಮಾಗಿ ಋಕ್ಷ ಬಿಲಮುಖದಿ ನಿಂದವೊಲು, ಧರ್ಮಗಹ್ವರ ಮುಖದಿ ಶಂಕಿಸುತ...
ಧರ್‍ಮದ ಠೇಕೇದಾರರಿಂದ ಭೂಮಿಯ ಮೇಲೆ ದೆವ್ವದ ಕುಣಿತ ನೋಡಿದ್ದೇನೆ ನಾನು! ಗುಜರಾತಿನ ನರಮೇಧದಲ್ಲಿ ಮನುಷ್ಯತ್ವದ ಕತ್ತು ನಾಚಿಕೆಯಿಂದ ಕೆಳಗಾಗಿದ್ದನ್ನು ಕಂಡಿದ್ದೇನೆ ನಾನು! ಧರ್‍ಮ ರಾಜಕೀಯದಲಿ ಅಧರ್‍ಮದ ಕತ್ತಿ ಝಾಳಪಿಸಿದ ಗುಜರಾತನು ಕಣ್ಣಾರೆ ಕಂಡಿ...













