ಭಾವಗೀತೆಯ ಮೆರಗು
ಹಸಿರ ನೇಸರದಾ ಸೆರಗು
ಮನ ಮನ್ವಂತರವೆ ನೀನು
ನೀನು ನೀನಾಗಿರಲೇನು ಚೆನ್ನ
ತೆರೆಯೆ ಬಾಗಿಲ ಪೊರೆಯೆ ತಾಯೆ
ಕನ್ನಡಾಂಬೆಯೆ ನಿನಗೆ ನನ್ನ ನಮನ||

ಸುಮಬಾಲೆ ಬಾಳೆ
ಹೊಂಬಾಳೆ ಕಾಯೆ ನಮಗೆ
ಚೇತನವೇ ಬಾಳಿಂದು ಮುಡಿಪು
ದೇವಿಯೆ ಕರುನಾಡು ತಾಯೆ
ನೀನು ನೀನಾಗಿರಲೇನು ಚೆನ್ನ
ನಮಿಸುವೆ ನಿನಗೆ ತೆರೆಯೆ ಬಾಗಿಲ
ಕನ್ನಡಾಂಬೆಯೆ ನಿನಗೆ ನನ್ನ ನಮನ||

ಬೇಗುದಿಯ ಬೆಳಕಲ್ಲಿ
ಹೂಗಳರಳಿದ ಹಾಗೆ
ಸಾಂತ್ವಾನಕೆ ತಂಗಾಳಿ ಬೀಸಿ
ತಂಪ ನೀಡುವ ಹಾಗೆ
ಕಗ್ಗತ್ತಲಾ ಬಾಳಿಗೆ ಬೆಳಕಾಗಿ ಬಾ
ನೀನು ನೀನಾಗಿರಲೇನು ಚೆನ್ನ
ತೆರೆಯೆ ಬಾಗಿಲ ಪೊರೆಯೆ ನನ್ನ
ಕನ್ನಡಾಂಬೆಯೆ ನಿನಗೆ ನನ್ನ ನಮನ
*****