ಅಪ್ಪನ ಮಠ ನೋಡಿದೆ

ಹಡೆದಪ್ಪ ಪಡೆದಪ್ಪ ಪಟ್ಟದ ಮಠದಪ್ಪ
ಅಪ್ಪನಽ ಮಠ ನೋಡಿದೆ
ಮಠದ ಮ್ಯಾಲಿನ ಮಠವು ಘಟದ ಮ್ಯಾಲಿನ ಘಟವು
ದಿಟಪುಟ ಮಠ ನೋಡಿದೆ

ಹೊಟ್ಟಿ ತುಂಬಾ ಉಂಡ ಗಟ್ಟಿ ಅಮೃತ ಲಿಂಗ
ಮಠಸಾಮಿ ನಾ ನೋಡಿದೆ
ಲಂಡ ಭಂಡರ ಹಿಡಿದು ಬೆತ್ತ ಬೀಸಿದ ಅಪ್ಪ
ಗುರುಸ್ವಾಮಿ ನಾ ನೋಡಿದೆ

ಗಡಿಗಿ ಮಡಿಕಿಯ ಒಟ್ಟಿ ಫಡಫಡ್ಡ ಒಡೆದಂತ
ದೊಡ್ಡ ಅಪ್ಪನ ನೋಡಿದೆ
ಚರ್‍ಮ ದೇಹವ ಹಿಡಿದು ಚರಚರ ಚರ ಸುಲಿದ
ಧರ್‍ಮ ದೇವರ ನೋಡಿದೆ

ಎಲುಬು ಲಟಲಟ ಮುರಿದು ನರವ ತಂತಿಯ ಗೈದ
ಓಂಕಾರ್‍ನಾದವ ಕೇಳಿದೆ
ಅತ್ತ ಹೋದರು ಬೆಂಕಿ ಇತ್ತ ಬಂದರು ಬೆಂಕಿ
ಜ್ಞಾನ ಬೆಂಕಿಗೆ ಹಾರಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣಿನ ಭಿನ್ನತೆ – ತಾಯ್ತನ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…