
ಏನು ಸಂಯಮ ನಿನ್ನದು ಎಂಥ ತಾಳ್ಮೆಯು ನಿನ್ನದು! ಎಲ್ಲ ಕಡೆಯೂ ಇರುವ ನಿನ್ನನೆ ಅಲ್ಲಗಳೆದರೂ ತಾಳ್ವುದು, ನಿನ್ನ ಕಾಣದ ಬೆರಳು ಸೋಕದೆ ಹೂವು ದಳಗಳ ತೆರೆವುದೇ? ನಿನ್ನ ಸನ್ನೆಯ ಆಜ್ಞೆ ಬಾರದೆ ಗಾಳಿ ಕಂಪನು ಹೊರುವುದೇ? ಗಿರಿಯು ನಿಲುವುದೆ, ಹೊನಲು ಹರಿವ...
ಕುಲಗೆಟ್ಟ ಹೆಣ್ಣಿವಳು ಅಂಟದಿರಿ ಜೋಕೆ ಹುಳುಕು ತುಂಬಿಹುದಂತೆ ಗೊಡವೆ ನಮಗೇಕೆ ಪತಿಹೀನೆಯಾದವಳು ಗತಿಹೀನೆಯಾದವಳು ಸುತರಿಲ್ಲದೇ ಮುಕ್ತಿ ಹೀನೆಯಾದವಳು ಮತಿ ಇಲ್ಲವೋ, ಅಕಟ ದೇಹವನು ಧರಿಸಿಹಳು ಹಿತವಿಲ್ಲದಾ ಜನಕೆ ಮುಖವ ತೋರುವಳು ಸಮಾಜದೊಳಗೆಲ್ಲ ಏನೇನೊ...
ಅಣ್ಣ ಬಸವಣ್ಣ ಇದೆಲ್ಲ ಏನಣ್ಣ? ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ? ಜಾತಿ ಹೀನನಾ ಮನೆಯ ಜ್ಯೋತಿ ನೀ… ಹೀನ ಜಾತಿಗಳ ಪೊರೆದ ದೊರೆ ನೀ…! * ಕಲ್ಯಾಣದ ಬೆಂಕಿ ನೀ ಕೆಳ ಜಾತಿ, ಮತ, ವರ್ಗಗಳಿಗೆ, ಕಣ್ಣು ನೀ ‘ಹೌದು! ಮಾದಿಗರ ಮನೆ ಮಗ ...
ಶಶಿಯವರನ್ನು ಭಾರತ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯೆಂದು ಹೆಸರಿಸಿದ್ದು ನನಗೇನೋ ತುಂಬಾ ಖುಷಿ ಗೆದ್ದವರು ಬಾನ್ ಕಿ ಮೂನು ಯಾರು ಗೆದ್ದರೇನು? ನಂದೇ ಹೆಸರಲ್ಲವೇನು? ಭೂಮಿಯ ಮೇಲೆ ನನ್ನ ಪ್ರಭಾವವೇನು ಈಗಲಾದರೂ ನಿಮಗೆ ಅರ್ಥವಾ...
ಮಣ್ಣಿನ ಮಕ್ಕಳ ಮಣ್ಣಿನ ಬದುಕನು ಕಣ್ಣೆತ್ತಿ ನೋಡದ ಹಾಗೆ ಮಾಡುವ ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ ಜೀವನವೆಂದರೆ ಬದುಕೇನೆಂದರೆ ಗೊತ್ತೇ ಇಲ್ಲದ ಮುಗುದ ಮಕ್ಕಳು ಅನಂತ ವಿಶ್ವದ, ಅರಿಯದ ಭವಿಷ್ಯ ಕಲ್ಪನೆ ಕನಸಿನ ಕಣ್ಣುಗಳು ಬುರುಗು ಜೀವನಕೆ ಒಗ್...
ಸರಿದೀತೇ ಕಾರಿರುಳು ಈ ದೇಶದ ಬಾಳಿಂದ? ಸುರಿದೀತೇ ಹೂ ಬೆಳಕು ಈ ಭೂಮಿಗೆ ಬಾನಿಂದ? ಅಲುಗಾಡಿದ ಛಾವಣಿ ಮೇಲೆ ಬಿರುಕಾಗಿವೆ ಗೋಡೆಗಳು, ನಡುಗುತ್ತಿದೆ ಕಾಲಡಿ ನಲವೇ ಗುಡುಗುತ್ತಿವೆ ಕಾರ್ಮುಗಿಲು, ಕೆಳಸೋರಿದೆ ಮಳೆಧಾರೆಯು ಹರಕಲು ಸೂರಿಂದ, ಕೊನೆಯೆಂದಿಗೆ...
ಬಿಸಿಲು ಸುಟ್ಬು ಬಿರುಕು ಬಿಟ್ಟು ಮಳೆಯ ನೀರನೆ ಕುಡಿದು ಹಸಿರು ತೊಟ್ಟ ಕಲ್ಲುಬೆಟ್ಟ ನನ್ನಪ್ಪ ಒಡಲು ಮೆಟ್ಟಿ ಸುತ್ತುಗಟ್ಟಿ ಮೇಯುವ ದನ ಕರು ಕುರಿಗಳಿಗೆ ಹಸಿರು ಹುಲ್ಲು ಕೊಟ್ಟ ಕಲ್ಲುಬೆಟ್ಟ ನನ್ನಪ್ಪ ತೊಡೆಯ ಸಂದಿಯಲಿ ಕಳ್ಳು ಬಳ್ಳಿಯ ತೆರದಿ ಬೇರು ...
ಬಾನಿಂದೇನೋ ಇಳಿಯುತಿದೆ ಬುವಿಯೆದೆಯೊಳಕ್ಕೆ ಕಲ್ಪನೆ ಏನನೊ ಸೇರಿಸಿದೆ ಕಾಣುವ ದೃಶ್ಯಕ್ಕೆ ನದಿಯೆದೆಯಲ್ಲಿ ಮುಗಿಲಿನ ಕವಿತೆ ಹುಣ್ಣಿಮೆ ಇರುಳಲ್ಲಿ, ಬಾನಿನ ಹಾಡು ಮೂಡಿತು ಹೇಗೆ ಭೂಮಿಯ ಶ್ರುತಿಯಲ್ಲಿ? ನೋಟಕೆ ಶ್ರವಣಕೆ ತಿಳಿಯದ ಏನೋ ಕಾಡಿದೆ ಎದೆಯಲ್ಲ...
‘ಅಸ್ಪೃಶ್ಯ ಚಂಡಾಲ ಪಂಚಮ ಹೊಲೆಯ’ರೆಂದು ದೂರವಿಟ್ಟಿಹೆವಲ್ಲ ನಮ್ಮ ಸಮ ಸೋದರರ? ಅನ್ಯತ್ರವಿಲ್ಲದಿಹ ಹೊಲೆಯದೇನವರ? ನಾವೆ ಮಾಡಲು ಹೇಸುವೆಮ್ಮ ಸೇವೆಯನಿಂದು ಅವರು ಮಾಡುತಲಿಹುದೆ ಅವರಿಗಂಟಿದ ಹೊಲೆಯೆ? ಸಲ್ಲದಿಲ್ಲದ ಸತ್ತ ಶಾಸ್ತ್ರದಾಧಾರವನು ಕೊಟ್ಟು, ಅ...













