
ಬೆಳಗುತ ಬಂದಿತು ದೀವಿಗೆ ಹರುಷವ ತಂದಿತು ಬಾಳಿಗೆ ಕತ್ತಲನು ಓಡಿಸಿ ಮತ್ತೆ ಹಸನಾಗಿ ಬೆಳಕಾಗಿ ಬಂದೇ ಬಂದಿತು ಬಾಳಿಗೆ || ಬದುಕಿನ ಹಾದಿಯಲಿ ಸಂಬಂಧಗಳ ನಗೆಬೀರಲು ಚಿನಕುರುಳಿ ಹೂಬಾಣಗಳ ಹೂಡಿತು ದೀವಿಗೆ || ಅಂಬರದಲಿ ಅಪ್ಸರೆಯರ ಆಹ್ವಾನ ಚುಕ್ಕಿ ಚಂದ್...
ಓ ಎನ್ನ ಸೋದರಿ! ವೀರ ಭಾರತದ ನಾರಿ ! ಬಾ ಇಲ್ಲಿ ಹೊರಜಗಕೆ, ಶಾಂತಿ ಸಮತೆಯ ಎಡೆಗೆ ಹೋಗುವಾ ನಾವೆಲ್ಲ ಗಗನ ಗಡಿಯ ಮೀರಿ ಕರೆಯುತಿಹುದು ನೋಡಲ್ಲಿ ! ಬಾ ಭಾವಿನಾಡಿನೆಡೆಗೆ ನಿನಗಂದರವರಾರು ಅಬಲೆ ನೀನಿರುವಿ ಎಂದು ಅರಿಯಲಾರರೇ ಆದಿ ಅವತಾರ ಶಕ್ತಿ ಯಾರು ?...
ಬಾಗಿಲ ಬಡಿದಿದೆ ಭಾವೀ ವರ್ಷ ಬಗೆ ಬಗೆ ಭರವಸೆ ನೀಡಿ, ಭ್ರಮೆ ನಮಗಿಲ್ಲ ನೋವೋ ನಲಿವೋ ಬರುವುದ ಕರೆವೆವು ಹಾಡಿ. ಎಲ್ಲ ನಿರೀಕ್ಷೆ ಸಮಯ ಪರೀಕ್ಷೆಗೆ ಕೂರದೆ ವಿಧಿಯೇ ಇಲ್ಲ, ಕೂತದ್ದೆಲ್ಲ ಪಾಸಾದೀತೆ? ಜೊತೆ ಜೊತೆ ಬೇವೂ ಬೆಲ್ಲ ಕಾಲದ ಚೀಲದೊಳೇನೇ ಇರಲಿ ಕ...
ಮಧ್ಯಾಹ್ನದ ಬಿರು ಬಿಸಿಲು ಹೊರಗೆ ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ ಅಡುಗೆ ಮನೆಯಿಂದ ಪರಿಮಳ ಸೂಸಿ ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ. ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ. ಹೃದಯ ಮನಸ್ಸು ತಣ್ಣಗೆ ಹೈರಾಣ ಗೋಡೆಯ ಗಡಿಯಾರ ಸುಮ್ಮನೆ ಚಲಿ...
ಬಿಗುಮಾನ ಒಂದೆಡೆಗೆ ; ಬಿಂಕ ಮತ್ತೊಂದೆಡೆಗೆ. ಬೇರಾವುದೋ ಹೊಸತು ಭಾವನಾವರಿಸಿರಲು ಮೊದಲ ಪರಿಚಯದಂದು ಕಣ್ಣೆತ್ತಿ ನೋಡದೆಯೆ ಮೌನದಲಿ ಮಾತುಗಳ ಮುಳುಗಿಸುತ ಹಿಗ್ಗಿದೆವು. ಚಪಲ ಚಂಚಲ ಕಣ್ಣು ನೋಡಲೆಳಸುತಲಿತ್ತು! ಹೃದಯ ಹರಿಯುತಲಿರಲು ಒಲವ ಹೊನಲಾಗುತಲಿ ...
ತದೇಕ ಚಿತ್ತದಿಂದ ಎಲಾ ಯುವಕ ನೀನು ಅದೇನ ನೋಡುತ್ತಿರುವೆ ಗಾದೆಮಾತಿನ ಮೀನ ಹೆಜ್ಜೆಗಳನ್ನೋ ಅಥವ ನೀನು ಪ್ರೀತಿಸುವ ಹೆಣ್ಣಿನ ನಿಗೂಢ ಒಳದಾರಿಗಳನ್ನೋ? ತಳಮಳಿಸುವ ಸರೋವರದ ತೆರೆಗಳ ಮೇಲೆ ತೇಲಿ ಬರುತಿರುವ ಛಿದ್ರ ಚಿತ್ರ ತಳೆಯುವುದಾವ ರೂಪ ತಿಳಿಯಲು ನಾ...
ಪುಟಿದೇಳುವ ರಾಗದುಸಿರ ಭಾವದೆಳೆಯ ಮಧುರ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಹಸಿರಾಗಿಹ ನೆಲದನುಭಾವ ತುಂಬಿ ಕಂಪ ಬೀರುವ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಸದ್ವಿಚಾರ ತಾಳದಗಲ ಮಾನಭಿಮಾನದಿಂ ಮೆರೆದ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಕಲೆಯದನುರಾಗಲ...
ಹರನ ನಾಮವ ಹಿಡಿದು ದಿನಬೆಳಗು ಹಾಡುವಿ ಆ ಹರನು ಇನ್ನಾರು ತಿಳಿಯಲಾರಿ ಹೃದಯ ಗಂಗೆಯ ಹೊಳೆಯಲ್ಲಿ ತೇಲಿಬಿಟ್ಟಿರುವಿ ನಿಜಭಕ್ತಿ ತೊರೆದೀಶನನು ಕಾಣಲಾರಿ ಹರನೆಲ್ಲಿ; ನೀನೆಲ್ಲಿ; ಅವನ ಹುಡುಕುವಿಯೆಲ್ಲಿ ? ಅಹಂಕಾರದೊಳು ನೀ ಮರೆದು ಪೂಜಿಸಲು ನಿನ್ನ ಪತ್ರ...
ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ, ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ, ಮಾತಾಡದೆ ಸಂಭ್ರಮದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿಗೂಡುತ್ತಿದೆ ಬೆಳುದಿಂಗಳ ಕೊರಳು! ದಡವ ಕೊಚ್ಚಿ ಹರಿಯುತಿದೆ ನದಿಗೆ ಮಹಾಪೂರ, ಗ...













