
ಜಟಿಲ ಬದುಕಿನ ಯಕ್ಷ ಪ್ರಶ್ನೆಗಳು ಹೊಡೆಮರಳಿ ಕಾಡುವವು ಯಾಕೋ? ಸಮೃದ್ಧ ಸಂಸಾರ ಎಂದುಕೊಂಡರೂ ಅತೃಪ್ತಿ ಅನಾಸಕ್ತಿ ಮುಲುಗುವುದು ಯಾಕೋ? ಬಿಗಿವ ಬಿಗಿಸುವ ಬಗಿವ ಬಗ್ಗಿಸುವ ಸಂಬಂಧ ಅನುಬಂಧಗಳು ಬಾಯಾರಿ ಕಾಂಚಣಕ್ಕೆ ಕುಣಿಯುವವು ಯಾಕೋ? ಜನನ ಮರಣದ ಗುಟ್ಟ...
ತಾರೆಯರೇ ಮಿಣುಮಿಣುಕಿ ಅಣಕಿಸಿದ್ದು ಸಾಕು. ಚಂದ್ರಮನೇ, ನಿನ್ನ ನಗುವಿಗೆ ಮೂರು ಕಾಸು. ಕೋಲ್ಮಿಂಚುಗಳೇ ಎಷ್ಟು ಬಗೆಯ ಚಿತ್ತಾರ ಬರೆಯುತ್ತೀರಿ ನೀವು? ಚಣಕೊಮ್ಮೆ ವೇಷ ಬದಲಾಯಿಸಲೇಬೇಕೆ, ಮೋಡಗಳೇ? ಕಲಕಲಿಸದಿದ್ದರೆ ನಿದ್ದೆ ಬರುವುದಿಲ್ಲವೆ, ಜಲವೆ? ಕು...
ಪಂಚ ಕಳ್ಳರ ತಂದು ಮಂಚದಾ ಮೇಲಿರಿಸಿ ಈ ಮುಗ್ಧ ಗೋವುಗಳು ಮೆರೆಸಿರುವವು ಪಂಚ ಪೀಠವ ಕಟ್ಟಿ ಪಂಚ ಪಾಲಕಿ ಕಟ್ಟಿ ಅಡ್ಡಾಗಿ ಉದ್ದಾಗಿ ಎತ್ತಿರುವವು ಓ ಮುಗ್ಧ ಸೋದರರೆ ಅತಿಮುಗ್ಧ ಭಾವುಕರೆ ಈ ಚರ್ಮ ಚೀಲಗಳ ಹೊರುವಿರೇಕೆ ಆರತಿಯ ತಂದಿರುವ ಓ ಅಕ್ಕ ತಾಯಿಗಳೆ...
ಹಳೆಬಾಳಿಗೆ ಹೊಸ ಅರ್ಥವ ತಾ ಸಂಕ್ರಾಂತಿಯ ಸೂರ್ಯ, ಹೊಸ ಬೆಳಕಲಿ ತೊಳೆ ಈ ಜಗವ ಮೊಳಗಿಸು ನವತೂರ್ಯ. ಕಾಲದ ಬೆಂಕಿಯ ಹಾಯ್ದುಳಿದ ಅಪರಂಜಿಯನುಳಿಸು, ಚಿತ್ತದ ಕತ್ತಲೆಗಳ ಅಳಿಸಿ ಭಾವಶುದ್ಧಿ ಹರಸು. ಅಂತರ್ಮುಖಿ ಆಗಲಿ ಈ ಬಾಳು ತನ್ನ ನಿಜಕೆ ಒಲಿದು, ಹತ್ತಲ...
ಅಲ್ಲಿ ಗುಹೆ ಅಂತಹ ಕತ್ತಲು ಒಂಟಿಯಾಗಿ ಕುಳಿತಿದ್ದಾನೆ ಅವನು ಏನೇನೋ ಯೋಚನೆಗಳು ಹೆದರಿಕೆಗಳು ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ ಆಗಾಗ ಬರುವ ಚಳಿ ಮಳೆಗೆ ಮುದುರಿ ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ. ಊರಿಗೆ ಹೋಗುವ ಗಾಡಿ ಕಾಯುತ್ತ ಕುಳಿತಿ...
ರೂಪಮಹಲಿನ ರಾಣಿ! ತಂದಿರುವೆನಿದೊ ನೂಲೇಣಿ ಬಿಡಿಸಲೆಂದೆ ನಿನ್ನ ಸೆರೆ ಬಂದಿರುವೆ ಕಿಟಕಿ ತೆರೆ ಇಳಿದು ಬಾ ಒಂದೊಂದೆ ಮೆಟ್ಪಲನು ನನ್ನ ಹಿಂದೆ ಹಿಡಿ ನನ್ನ ಕೈಯ ಇದು ಕೋಳಿ ಕೂಗುವ ಸಮಯ ತಲ್ಲಣಿಸದಿರಲಿ ಮನ ಉಳಿದುದೆಲ್ಲವು ಮೌನ ಬಿದ್ದು ದಾರಿಯುದ್ದಕು ತ...
ನನ್ನ ಸೌಂದರ್ಯವನ್ನು ಮೆಚ್ಚಿಕೊಂಡ ಜನ ನನ್ನ ಸರಳತೆಯನ್ನು ಮೆಚ್ಚಿಕೊಂಡ ಜನ ನನ್ನ ದುಃಖ ಎಷ್ಟೆಂದು ಕೇಳಲಿಲ್ಲ. ನನ್ನನ್ನು ಪ್ರೀತಿಸಿದ ತಂದೆ ನನ್ನನ್ನು ಸಲಹಿದ ತಾಯಿ ನನ್ನ ಆಸೆಗಳೇನು ಎಂದು ಕೇಳಲಿಲ್ಲ. ನಾನು ನೀಲಿ ನಕಾಶೆಯೊಳಗೆ ಹೊಳೆಯುವ ಕನಸುಗಳನ...













