ಪೊಸಗಾರ

ಮೋಡನ ಮನೆಯೊಳಗೆ
ಸರಿಗಮ ಸ್ವರ ಏರಿಳಿತ
ಕಪ್ಪು ಬಿಳಿ ಚಿತ್ತಾರ
ಆಗಾಗ ನೇಸರನ ಕಣ್ಣು ಮುಚ್ಚಾಲೆ
ಕೆಂಬಣ್ಣ ರಾಚಿದ ಚಿತ್ರದಲಿ ಭೂಮಿ ವಧು

ಸುಳಿಗಾಳಿ ಬೀಸುತಿದೆ
ಬಿಸಿಲ ಕಾವಿಗೆ ಹುಡಿ
ನೆಲ ಗರ್ಭದಿ ಏರಿ ಮುಗಿಲ ತಬ್ಬಿ

ಆಹಾ! ಎದೆಯಲ್ಲಿ ಏನೋ ಸುಳಿದಂತೆ
ತುಯ್ದಾಟ, ಓಲಾಟ ಸೃಷ್ಟಿ
ಅಮಲುಗೊಂಡಂತೆ!

ಚಳಕ್! ಸಿಡಿಲು ಹೊಡೆದಂತೆ
ಮಿಂಚು ಜಗಮಗಿಸಿ
ಜಗವ ಕೋರೈಸಿದೆ-ಬೆಳಕುಗುಳಿ

ಸೌಮ್ಯವದನೆ ಭೂ ವಧು
ರಜಸ್ವಾಲೆ ದಾಟಿ
ಚಾತಕ ಪಕ್ಷಿ-ಪಲ್ಲಕ್ಕಿ ಏರಿ
ಗುಡುಗು ಸಿಡಿಲ ಗುದಮುರಿಗೆ ರುದ್ರ ನರ್ತನ

ಹನಿಹನಿ ಆಪೋಶನ
ಉರಿಬಿದ್ದ ಒಡಲಿಗೆ
ಮಂದಸೌರಭ ಮಣ್ಣ
ಮಧುರ ಗಂಧ

ಬಸಿರು ನಿಲ್ಲುವ ಸಮಯ
ಉತ್ತಿಟ್ಟು ಬಿತ್ತಿದರೆ ಚಿನ್ನವದು ಬೆಳೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಡು ನಿನ್ನ ದುಃಖ
Next post ರೂಪಮಹಲಿನ ರಾಣಿ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…