ನೀವೇಕೆ ಬೇಕು?

ತಾರೆಯರೇ ಮಿಣುಮಿಣುಕಿ
ಅಣಕಿಸಿದ್ದು ಸಾಕು.
ಚಂದ್ರಮನೇ, ನಿನ್ನ ನಗುವಿಗೆ
ಮೂರು ಕಾಸು.
ಕೋಲ್ಮಿಂಚುಗಳೇ
ಎಷ್ಟು ಬಗೆಯ ಚಿತ್ತಾರ ಬರೆಯುತ್ತೀರಿ ನೀವು?
ಚಣಕೊಮ್ಮೆ ವೇಷ
ಬದಲಾಯಿಸಲೇಬೇಕೆ, ಮೋಡಗಳೇ?
ಕಲಕಲಿಸದಿದ್ದರೆ ನಿದ್ದೆ ಬರುವುದಿಲ್ಲವೆ, ಜಲವೆ?
ಕುಹೂ – ಕುಹೂ ಎಂದು ಕಿರುಲಬೇಡ, ಕೋಗಿಲೆಯೇ…
ಖುಷಿಯಿಂದ ಕೂಗುತ್ತೇನೆ ಕಿವಿಗೊಟ್ಟು ಕೇಳಿ-
‘ಕವನ ಹೊಸೆಯಲಿಕ್ಕೆ ಬೇಡ… ನೀವಿನ್ನು’


ಇಲ್ಲಿ…..
ನನ್ನ ನೆಲೆಯಲ್ಲಿ, ಕೆಂಪೆಲೆಗಳ ನಡುವೆ
ಅರಳುತ್ತವೆ ಹಸಿರು ಹೂಗಳು.
ಹೆಪ್ಪುಗಟ್ಟಿದ ಮೌನದಲ್ಲಿ
ಗುಣುಗುಣುಸಿ ಹಾಡುತ್ತವೆ ಗೂಬೆಗಳು.
ಹೆಜ್ಜೆ ಹಾದಿಯ ತುಂಬ
ಕುಲುಕುಲು ನಗುತ್ತದೆ ಇರುಳು.
ಇಲ್ಲಿ….. ಕನಸುಗಳೂ ಕಾಡುವುದಿಲ್ಲ.
ನೆನಪುಗಳು ಮರುಕಳಿಸುವುದಿಲ್ಲ.
ಕಲ್ಪನೆಗೂ ಮೀರಿದ ಬದುಕು,
ಕವನಿಸಲಿಕ್ಕೆ ಕೈ ತುಂಬ ಸರಕು.
ಹೀಗಿರುವಾಗ ನೀವೇಕೆ ಬೇಕು ಹೇಳಿ?


Previous post ರಾಮ ರಾಮ
Next post ಯಕ್ಷ ಪ್ರಶ್ನೆಗಳು

ಸಣ್ಣ ಕತೆ

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…