Home / ಕವನ / ಕವಿತೆ

ಕವಿತೆ

ಸೂಳೆವ್ವ ನಾನೂ ಹುಚಬೋಳೆ ||ಪಲ್ಲ|| ಗಂಡನ ಸೀರ್‍ಯಾಗ ಮಿಂಡನ್ನ ಮಾಡ್ಕೊಂಡೆ ಗಂಡುಳ್ಳ ದಾರಿ ನೋಡ್ಕೊಂಡೆ ಯಾಗಂಡ ಛೂಗಂಡ ಫೂಗಂಡ ಪಡಪೋಶಿ ಪುರಮಾಶಿ ಮುದುವನ್ನ ಮಾಡ್ಕೊಂಡೆ ||೧|| ಹೊಸಗಂಡ ಹುಚಗಂಡ ಪಂಚೇರು ಪಡಿಗೋದಿ ಹೋಳೀಗಿ ಮ್ಯಾಗ ಹೆರತುಪ್ಪೋ ತಾಳೀಯ...

ಅಲ್ಪ ತೃಪ್ತನಾಗಿರೆ ಹೆಚ್ಚು ಸುಖವು ಜೀವನವು| ಬಾಳು ಸುಗಮ ಸುಂದರ ಬದುಕು ಬಲು ಹಗುರ| ಇಲ್ಲದಿರೆ ಎಲ್ಲದಕೂ ಬೇಸರ ವಿಷಮಸ್ಥಿತಿ, ಬದುಕು ಭೀಕರ|| ಇತಿಮಿತಿಯಲ್ಲಿರುವುದೇ ಬಲು ಸೊಗಸು, ನನಸಾಗುವುದೆಲ್ಲಾ ಕಂಡ ಕನಸು| ಮಿತಿ ಮೀರಿದರೆಲ್ಲಾ ಬರೀ ಕೆಡಕು||...

ಏನು ಬೇಕಾಗಿದೆ? ಜೀವದಾಯಿ ನೆಲ, ಜಲ, ಗಾಳಿ, ಬೆಳಕು ಚೇತೋಹಾರಿ ಬೆಟ್ಟ, ಗುಡ್ಡ, ಹಳ್ಳ, ಕೊಳ್ಳ, ಕಣಿವೆ ಭಾವ, ಬದುಕು ತುಂಬುವ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ ಸಂಜೀವಿನಿ ಸಸ್ಯರಾಶಿ ಒಡನಾಡಲು ಪ್ರೀತಿಯ ಮಾನವ ಸಂಕುಲ ಬೇಕಾದುದಿದೆ. ಇರುವುದೆಲ್ಲಾ ಗ...

ಒಂದು ಗಂಟೆ ಪುಟ್ಟ ಕೋಣೆಯ ಬೆಳಗಿದೆ ಗೋಡೆಯ ಮೇಲೆ ಸುಂದರಿಯ ಪಟವಿತ್ತು ಪರಿಶೀಲಿಸಿದೆ ಹೂದಾನಿಯಲ್ಲಿ ತಾಜಾ ಹೂಗುಚ್ಚವಿತ್ತು ಆಘ್ರಾಣಿಸಿದೆ ಮರುಳೆ… ಬೂದಿಯಾಗಿರು ಎಂದು ಬೆಂಬತ್ತಿದ ಪತಂಗಕ್ಕೆ ತಿಳಿಯ ಹೇಳಿದೆ ಮೂಲೆಯಲ್ಲಿ ಮುದುಡಿ ಮಲಗಿದ್ದ ಮ...

ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್‍ಡು ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ ನಾನು ಹೆಂಡತಿಯಾಗಲಾರೆ. ಸಂಕೇತಗಳ ಬೇಡಿಯನ್ನು ಅಂಗಾಂಗಗಳ ಮೇಲೆಲ್ಲಾ ಹೇರಿ ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ ಎಂದೆಲ್ಲ ಊದುವ ಶಂಖನಾ...

ಎಲೆ ಕರ್ಣಾಟದೀಂದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ| ಗಾ | ವಿಲನಾದೆನ್ನ ಬಳಲ್ದ ಬಂಜೆ ನುಡಿಯಂ ನೀನಾಲಿಸೈ ಲಾಲಿಸೈ! | ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್, | ಹುಲುಮಾತಿಂ ಪೊಗಳಿರ್ಪ ಮೂಢ ಕವಿಯುಂ ಪಕ್ಕಾಗನೇ ನಿಂದೆಗಂ? ...

ನೀರು ಕಾಯುತ ನೋಡಲು ಬಚ್ಚಲಿಗೆ ಹೋದೆ ಉರಿ ಕೊನೆತನಕ ಬಂದು ಕಟ್ಟಿಗೆ ಕೈಹಿಡಿಯಷ್ಟು ಉಳಿದು ಒಲೆಯಿಂದ ಹೊರಗೆ ಬಿದ್ದಿದೆ; ಥಟ್ಟನೆ ವಯಸ್ಸಾಯಿತೆನ್ನಿಸಿತು ಸರಿದ ಬದುಕ ತಲೆಗೆ ಕರೆದು ದುರ್ಬೀನಡಿಗೆ ದಬ್ಬಿ ಹುಡುಕಿದೆ. ಒಂದು ಮಲ್ಲಿಗೆ ಒಂದು ಗುಲಾಬಿ ಇ...

ಅವ್ವನ ಹಸಿರ ರೇಶಿಮೆ ಸೀರೆ ನೆರಿಗೆಯ ನಕ್ಷತ್ರಗಳು ನಾವು || ಮೇಘವರ್‍ಣಗಳ ನಡುವೆ ಹೂವು ಗೊಂಚಲುಗಳಾಗೆ ಅವಳ ಸೆರಗ ಬಳ್ಳಿಗಳು ನಾವು || ಅವಳ ತನುಮನದ ಹೊಲಗದ್ದೆ ಗಳ ಉಳುಮೆ ಗರಿಯಲಿ ಗರಿಗೆದರಿದ ನವಿಲುಗಳು ನಾವು || ಸಾವಿರದ ಸಹಸ್ರ ಕಣ್ಣುಗಳ ಸಹಸ್ರ ...

ಅಮ್ಮ ನಿನ್ನ ಮಡಿಲಲ್ಲೊಮ್ಮೆ ಮಗುವಾಗಿ ತಲೆಯನಿಟ್ಟು ತೂಗುವಾಸೆ| ಆ ನಿನ್ನ ಲಾಲಿಹಾಡ ನೆನೆದು ಮಗುವಾಗಿ ಮರಳುವಾಸೆ|| ಅಮ್ಮ ನಿನ್ನ ಮಡಿಲಲ್ಲೊಮ್ಮೆ ನಾನೂ ಅಮ್ಮನಾಗಭರವಸೆಯಲಿ ಹುಟ್ಟುವ ಮಗುವಿಗಾಗಿ ಕುಲಾಯಿ ಹೆಣೆಯುತಿರುವಾಗ ನನ್ನಲೇಕಿಂತ ಮುಗ್ದ ಆಸೆ|...

ಮುಡಿಯ ಸಿಂಗರಿಸಿದ ಹೂವುಗಳು…. ಕೆನ್ನೆಯ ನುಣುಪಾಗಿಸಿದ ಬಣ್ಣಗಳು… ಮೂಗನು ಸೆಳೆದ ಸುಗಂಧಗಳು… ನಾಲಗೆಯ ಮುದಗೊಳಿಸಿದ ರಸಗಳು… ಕಿವಿಯ ತಣಿಸಿದ ಸ್ವರಗಳು… ಕಣ್ಣನು ಅರಳಿಸಿದ ನೋಟಗಳು… ಎಲ್ಲಿ ಹೋದವೋ? ಎಣ್ಣ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...