(ಮಕ್ಕಳ ಗೀತೆ)

ಪಕ್ಕ ತೊಟ್ಟು ಚುಕ್ಕಿಯತ್ತ
ಹಕ್ಕಿಯಾಗಿ ಹಾರುವೆ

ರಾಮ ಲೋಕ ಹನುಮ ಲೋಕ
ದೇವಲೋಕ ಸೇರುವೆ
ಜನ್ಮ ಲೋಕ ಜಡದ ಲೋಕ
ಪರ್ಣ ಕುಟಿರ ಮಾಡುವೆ

ಚಂದ್ರ ಲೋಕ ಸೂರ್ಯ ಲೋಕ
ಶಿವನ ಲೋಕ ಸೇರುವೆ
ವರ್ಣ ವಿರಸ ವರ್ಗ ವಿರಸ
ಜೇನುತುಪ್ಪ ಮಾಡುವೆ

ಪ್ರೇಮ ಭಾಷೆ ಶಾಂತಿ ಭಾಷೆ
ವಿಶ್ವ ಭಾಷೆ ಕಲಿಯುವೆ
ತಲೆಯ ಮೊಗ್ಗು ಹಿಗ್ಗಿ ಅರಳಿ
ಜ್ಞಾನ ಪುಷ್ಪ ಮುಡಿಯುವೆ