ನನಗೆಂದೂ ಅದೃಷ್ಟ ಒಲಿದಿಲ್ಲ
ಈಗಲೂ ಸಹ ನಾನದನ್ನು ಪಡೆಯಬಯಸಿಲ್ಲ
ನಿಜವಾಗಿ ಅದರಿಂದ ನನಗೇನೂ ಆಗಬೇಕಿಲ್ಲ
ಯಾಕೆನ್ನಿ ನಾನೀಗ ಸುಖಿಯಾಗಿಯೇ ಇದ್ದೇನಲ್ಲ !

ಸಾಗುತಿರುವ ನನ್ನೀ ಪಯಣದ ದಾರಿಯಲಿ
ಬಿತ್ತಿದ್ದಕ್ಕಿಂತ ಹೆಚ್ಚಿನದನ್ನೇ ಬೆಳೆದಿದ್ದೇನೆ.
ನಾ ಬಸಿಯಿಂದಲೇ ಕುಡಿಯುತಿರುವೆ,
ಯಾಕೆನ್ನಿ,ನನ್ನ ಕಪ್ಪು ತುಂಬಿ ತುಳುಕಿದೆ !

ನಾನೇನು ಮಹಾ ಸಿರಿವಂತನೇನಲ್ಲ;
ಅಗೊಮ್ಮೆ ಈಗೊಮ್ಮೆ ದುರ್ಭರ ಎನಿಸಿದೆ
ಆದರೂ,ಸಂಬಂಧಿಕರ,ಸ್ನೇಹಿತರ ಒಲವಿನಿಂದಾಗಿ,
ನಾನೂ, ಸಾಕಷ್ಟು ಸಿರಿವಂತ ಎಂದೆನಿಸುತಿದೆ !

ಆ ದೇವನ ಆಶೀರ್ವಾದಕೆ ಧನ್ಯವಾದಗಳು
ಅವನ ಕೃಪೆ ಎನ್ನ ಮೇಲೆ ಪೂರ್ಣ ಇದೆ
ನಾ ಬಸಿಯಿಂದಲೇ ಕುಡಿಯುತಿರುವೆ
ಯಾಕೆನ್ನಿ ನನ್ನ ಕಪ್ಪು ತುಂಬಿ ತುಳುಕಿದೆ !

ಧೈರ್ಯ, ಸಾಮರ್ಥ್ಯ ಗಳು ಅವನವೇ ಬಳುವಳಿ
ಸಾಗುವ ದಾರಿ,ಏರು ದುರ್ಗಮ ಎನಿಸಿದಾಗೆಲ್ಲ,
ಮತ್ತೊಮ್ಮೆ,ಹಾರೈಸು ಎಂದು ನಾ ಬೇಡುವುದೇ ಇಲ್ಲ
ಈಗಾಗಲೇ ಸಾಕಷ್ಟು ಹರಸಿರುವ ಅವನು !

ನಾವು ಎಂದೂ ನಿರತರಾಗದೇ ಇರೋಣ
ಮತ್ತೊಂದು ಸಹಾಯಕ ಭಾರ ಭರಿಸೋಣ
ಆಗ ನಾವೆಲ್ಲರೂ ಬಸಿಯಿಂದಲೇ ಕುಡಿಯೋಣ
ನಮ್ಮೆಲ್ಲರ ಕಪ್ಪುಗಳು ತುಂಬಿ ತುಳುಕಿದಾಗ !

ನಿಮ್ಮೆಲ್ಲರ ಕಪ್ಪುಗಳು ತುಂಬಿ ತುಳುಕುವಂತಾಗಲಿ

ಮೂಲ: ಜಾನ್ ಪಾಲ್ ಮೂರ್
Drinking From The Saucer by John Paul Moore


Latest posts by ಗೋನವಾರ ಕಿಶನ್ ರಾವ್ (see all)