ಬೇರಿಂದ ರೆಂಬೆಯಲಿ
ಚಿಗುರು ಚೈತ್ರ ವನವಾಯಿತು
ಎಲೆ ನಡುವೆ ಮೊಗ್ಗಾಗಿ
ಹೂವರಳಿ ಸ್ವರ್ಗವಾಯಿತು
ಮೋಡದಲಿ ಹನಿಯಾಗಿ
ಅಮೃತ ವರ್ಷವಾಯಿತು
ಚಂದ್ರನಲಿ ಬೆಳದಿಂಗಳು
ಬೆಳ್ಳಿ ಲಿಪಿ ಬರೆಯಿತು
ಎನ್ನೆದೆಯ ವೀಣೆಯಲಿ
ಕವಿತೆ ತಂತಿ ಮೀಟಿತು
*****
ಬೇರಿಂದ ರೆಂಬೆಯಲಿ
ಚಿಗುರು ಚೈತ್ರ ವನವಾಯಿತು
ಎಲೆ ನಡುವೆ ಮೊಗ್ಗಾಗಿ
ಹೂವರಳಿ ಸ್ವರ್ಗವಾಯಿತು
ಮೋಡದಲಿ ಹನಿಯಾಗಿ
ಅಮೃತ ವರ್ಷವಾಯಿತು
ಚಂದ್ರನಲಿ ಬೆಳದಿಂಗಳು
ಬೆಳ್ಳಿ ಲಿಪಿ ಬರೆಯಿತು
ಎನ್ನೆದೆಯ ವೀಣೆಯಲಿ
ಕವಿತೆ ತಂತಿ ಮೀಟಿತು
*****