ಹೂಡುಗಾಡಿ ಬಂಡಿಗಾಡಿ
ಸತ್ಯಕಾಯಕ ತೋಟಕೆ ||

ಬೆವರ ಹೊಳೆಯಲಿ ಜಾರಿ ಈಜದೆ
ಖೀರು ಪಾಯಸ ಏತಕೆ
ಹೆಂಟೆ ಪೆಂಟೆಯ ಎದೆಯ ಒಡೆಯದೆ
ಗಾದಿ ಮಂಚಾ ಯಾತಕೆ

ಕಲ್ಲು ಮಣ್ಣಿನ ಹಣ್ಣು ಹುಡಿಯಲಿ
ಕಣ್ಣು ಪಟಪಟ ತೋಯಲಿ
ಮೈಯ ಕೂದಲ ಕುಳಿಯ ಹೊಂಡದಿ
ಬೆಮರು ಚಟಚಟ ಸಿಡಿಯಲಿ

ಆಗು ಶಾವಿಗೆ ಲಲಿತ ಹೋಳಿಗೆ
ಸತ್ಯ ಶಿವನಾ ಸಂಡಿಗೆ
ನೀನೆ ಸಾರೈ ನೀನೆ ಖೀರೈ
ಆತ್ಮ ದೇವನ ಪಾನಕೆ