
ದೇವ ದೇವನ ಮಾತು ಕೇಳಲಿ ಹೂವು ಹೂವಿಗೆ ಹೇಳಲಿ || ಕೊಳಲ ಗಾನಕೆ ಮಳಲು ಕರಗಲಿ ಮುಳ್ಳು ಮಲ್ಲಿಗೆಯಾಗಲಿ ಬಿಸಿಲು ತಣ್ಣಗೆ ತಂಪು ತುಂಬಲಿ ಚಂದ್ರಬಿಂಬವ ಕುಡಿಯಲಿ ಸ್ವೈರ ಕೇಳಿ: ವೈರ ಹೋಳಿ ಗೈರು ಹಾಜರಿ ಹಾಕಲಿ ಕಣ್ಣು ತುಂಬಲಿ ಗಲ್ಲ ತುಂಬಲಿ ನಗೆಯು ತುಟ...
ಗಾಳ ಬೀಸಿ ಕೊಳಕ್ಕೆ ದಡದಲ್ಲಿ ಕಾಯುತ್ತ ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ. ಸಾಕುಹಕ್ಕಿಯ ಮೇಲೆ ತೂರಿ, ಹೊಸಹಕ್ಕಿಯನು ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ ಹಿಂದೆ ಬಾವಿಗೆ ಜಾರಿ ತಳಕಿಳಿದು ಮರೆತ ಸರಕುಗಳ ತರುವ ಪಾತಾಳಗರಡಿ. ಸ್ವಾತಿ ಹನಿ ಹೀರಿ ಮುತ...
ದೀಪವಾರಿಸಿದ ಕತ್ತಲೆ ಕೋಣೆಯಲಿ ಕಣ್ಣಿಗೆ ಏನೂ ಕಾಣಿಸುವುದಿಲ್ಲ ಬರೀ ನಿಟ್ಟುಸಿರು ಕೇಳುತ್ತದೆ. ಮಲಿನಗೊಂಡ ರಾತ್ರಿ ಕಪ್ಪಿನಲಿ ಹೂಗಳು ಅದ್ದಿ ಒದ್ದೆಯಾಗಿವೆ ಕಣ್ಣೀರಿನಲಿ ಇಬ್ಬನಿ ಹನಿಗಳು ಮಾಯವಾಗಿವೆ. ಕಣ್ಣಿನ ಕಾಡಿಗೆ ಕರಗಿ ಹೋಗಿಕೆನ್ನೆ ತುಂಬ ವಿ...
ಅಲ್ಪ ನುಡಿಯಲ್ಲಿ ತತ್ವ ವಿಚಾರ ಪುರಾಣಗಳ ಪಠಣ, ನಿತ್ಯ ವಾಚನ ವಾಚಾಳಿತನವಿಲ್ಲ-ವಚನ ಬಲು ಭಾರ ಮಿತ ಭಾಷಿ ನಾನೆಂಬ ಕೀಟಕೊರೆತ-ಮೆದುಳು ಊತ ಎಲ್ಲ ದುರ್ಗಮ ದಾರಿ ಕ್ರಮಿಸಿ ಬಂದಿಹೆ ಏರುವ ಮೊದಲು ಗದ್ದುಗೆ ನನಗಾರು ಸಮನಿಲ್ಲ ನನ್ನಿಂದಲೆ ಎಲ್ಲ ಸರ್ವಥಾ ಸ...
ಬಣ್ಣದ ಸಂಜೆಯನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ಸಿಡಿಲ ಚೂರೊಂದು ಉರಿದು ಕಪ್ಪಾಯಿತು. ಮೊರೆಯುವ ಕಡಲನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ತತ್ತರಿಸುವ ಅಲೆಯೊಂದು ಎತ್ತರಕೆ ನೆಗೆದು ಕೆಳಗೆ ಬಿತ್ತು. ಹೆಮ್ಮರವೊಂದನ್ನು ...
ಇಲ್ಲಕಲ್ಲ ಜಾತ್ರ್ಯಾಗ ಕೊಂಡೇನ ಈ ಗಡಿಗಿ ಜ್ವಾಕೆವ್ವ ತಂಗೆವ್ವ ಜಾರಿಬಿಟ್ಟಿ ಚಂದೇನ ಚಾರೇನ ಚಕ್ರದುಂಡಿನ ಗಡಿಗಿ ಜೋಲ್ಹೋಗಿ ಜಲ್ಲೆಂದು ಚಲ್ಲಿಬಿಟ್ಟಿ ಹಾಡು ಹಾಡಿನ ವಳಗ ಬೋರಂಗಿ ಈ ಹುಡುಗಿ ಹೊಕ್ಕಾಳ ಗುಂಯ್ಯಂತ ಗುನಗತಾಳ ಗಡಗೀಯ ಮಾರ್‍ಯಾಳ ಪುರಿಭಾಜ...
ನೋವಿನ ಹೇಳಿಗೆ ಹೊತ್ತ ಭಾರಕ್ಕೆ ಬಾಗಿದೆ ಲೋಕದ ಬೆನ್ನು ಹಸಿದ ಹೊಟ್ಟೆಯಲಿ ತತ್ತರಿಸುತ್ತಿದೆ ಕಂಗಾಲಾಗಿದೆ ಕಣ್ಣು ಕೊರಳನು ಬಿಗಿಯುವ ಕಣ್ಣಿಯ ಕಳಚಲು ಬರುವನು ಯಾರೋ ಧೀರ, ಎಂಬ ಮಾತನ್ನೆ ನಂಬಿ ಕಾಯುತಿದೆ ಜೀವಲೋಕಗಳ ತೀರ. ಯಾರ ಬೆರಳುಗಳು ಯಾವ ಕೊರಳಿ...
ಅಂಥ ಮಾಂತ್ರಿಕ ಹೆಸರಿದ್ದ ಮೇಲೆ ಅದು ಬರೇ ಗಾಡಿಯಲ್ಲ ಸಾರೋಟು ಸಾಗುವುದು ಅಪರಿಚಿತ ಸ್ಥಳಗಳಿಗೆ ಆ ಅಕ್ಷರಗಳೇ ಹಾಗೆ ಒಂದನ್ನೊಂದು ಬಳಸುತ್ತ ಬೆಳೆಯುತ್ತ ಮುಗಿಲ ಕಡೆ ಕೈಚಾಚುತ್ತ ಹೇಳಿ ಮುಗಿಸುವ ಹೊತ್ತಿಗೆ ಎಷ್ಟೊಂದು ಬಾರಿ ಎಷ್ಟೊಂದು ಗಾಲಿಗಳು ಎಷ್ಟ...













