ಗಾಳ ಬೀಸಿ ಕೊಳಕ್ಕೆ
ದಡದಲ್ಲಿ ಕಾಯುತ್ತ
ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ.

ಸಾಕುಹಕ್ಕಿಯ ಮೇಲೆ ತೂರಿ,
ಹೊಸಹಕ್ಕಿಯನು
ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ

ಹಿಂದೆ ಬಾವಿಗೆ ಜಾರಿ
ತಳಕಿಳಿದು ಮರೆತ
ಸರಕುಗಳ ತರುವ ಪಾತಾಳಗರಡಿ.

ಸ್ವಾತಿ ಹನಿ ಹೀರಿ
ಮುತ್ತನು ಬೆಳೆದ
ಚಿಪ್ಪುಗಳ ಎತ್ತಿ ಹೊರತರುವ ನೋಡಿ.
*****