
ಎಂದೋ-ಯಾರೋ ಉರುಳಿಸಿದ ಖಂಡಿತ ಮಂದಿರ, ಮಸೀದಿಗಳ ಅಡಿಪಾಯದಡಿಯಲ್ಲಿ ನನ್ನನ್ನೇಕೆ ಸಿಕ್ಕಿಸುವಿರಿ ಯಾರೋ ಉರುಳಿಸಿದ ಮಂದಿರಗಳ ಭಾರ ನನ್ನ ಹೆಗಲಿಗೇಕೆ ಹೊರಿಸುವಿರಿ? ಯಾರೋ ಮಾಡಿದ ತಪ್ಪಿಗೆ ನನಗೇಕೆ ಬರೆ? ಛಿದ್ರಗೊಂಡ ಮಂದಿರದ ಕಲ್ಲುಗಳನ್ನೆತ್ತಿ ನನ್ನ...
ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್ಮ ಪುರುಷನಿಗ್ಯಾವುದು ಧರ್ಮ ಧರ್ಮವ ಹೇರಿದ ತಪ್ಪಿಗೆ ಕಾವಲು ಇವನ ಕರ್ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ ಬಾಯಿಂದ ಈ ಮಾತ...
ತಿರುಗಿ ಬಾ! ಹೃದಯವೇ! ಹುಲ್ಲುಮಾನವರೊಡನೆ ದಂದುಗವು ಸರಿಬರದು. ನಿನ್ನ ಪಲ್ಲವನೇತ್ರ ಬೆಳಗುಜಾವವಿದೆಂದು ಮೋಹಗೊಂಡಿತು ಮಾತ್ರ. ಅಲ್ಲಿಹುದು ಕತ್ತಲೆಯ ಮೊನೆ, ಹೇಯವಿಹ ನಟನೆ! ತಿರುಗಿ ಬಾ: ತ್ಯಜಿಸಿಬಿಡು ರಜನಿಯನು, ಆ ಮೃಡನೆ ಮುಟ್ಟದಿಹ ಬೂದಿಯನು. ಇನ...
ಎಲ್ಲಿ ಮನುಕುಲ ಕೆರಳಿ ನಿಂತಿದೆ ಅಲ್ಲಿ ಗುರುಕುಲ ಅರಳಿದೆ ಎಲ್ಲಿ ಜನಮನ ಜಾರಿ ಬಿದ್ದಿದೆ ಅಲ್ಲಿ ಜಂಗಮ ಬೆಳಗಿದೆ ಐದು ನಡೆಮಡಿ ಎಂಟು ಉಡುಗೊರೆ ಆರು ಅಟ್ಟದ ಗುಡಿಯಿದು ಗುರುವು ಮುಟ್ಟಿದ ಮಂತ್ರ ಪೀಠದ ನೂರ ಒಂದರ ಮಠವಿದು ಯಾಕೆ ತಳಮಳ ಸಾಕು ಕಳವಳ ಕೇಳ...
“ಪುಷ್ಪವಿದ್ದಂತೆ ಮೊಗ್ಗೆಯನರ್ಪಿಸಿಕೊಂಡ ಶಿವನು! ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ಯನು ಶಿವನು! -(ಬಾಲ ಸಂಗಯ್ಯನ ಮರಣ ಕಾಲಕ್ಕೆ ಬಸವದೇವನ ವಿಲಾಪ) ಕೊಳಲಾಗಬಹುದಾಗಿತ್ತು, ಕಳಿಲಿದ್ದಾಗಲೇ ಕಡಿದ ಕಾಳ! ದೇವ! ಮಗುವೆಂದು ತಿಳಿದಿದ್ದೆ ಆದಾ...
ನಾನು ಕವಿಯಲ್ಲ; ಆದರೆ ಕವನಗಳನ್ನು ಬರೆಯಬಲ್ಲೆ ಒಂದಿಷ್ಟು ಕುತೂಹಲದಿಂದ, ನನ್ನ ಮನದ ಸಂತೋಷಕ್ಕಾಗಿ ಪದಪುಂಜವ ಜೋಡಿಸಿ ಭಾವನೆಯೆಳೆಯನ್ನು ಬಿಡಿಸಿ ಪದಗಳಿಗೆ ಭಾವನೆಯೆಂಬ ವಸ್ತ್ರವನ್ನು ತೊಡಿಸುತ್ತೇನೆ ಕವನದ ರೂಪದಲ್ಲಿ ಮನದ ಮೂಲೆಯಲ್ಲೆಲ್ಲೋ ಅಡಗಿದ ಕ...
ಯಾರು ಏನು ಯಾಕೆ ಎಂದು ಹೇಳುವವರು ಯಾರು ಇಲ್ಲ ಕೇಳುವವರೆ ಎಲ್ಲರು ಮರವು ತಾನೆ ಏರದು ದಾರಿ ತಾನೆ ನಡೆಯದು ಕತೆಯು ತಾನೆ ಹೇಳದು ಕವಿತೆ ತಾನೆ ಹಾಡದು ಎಲ್ಲಿ ಕಾರ್ಯ ಕಾರಣ ಮಳೆಯು ತಾನೆ ಸುರಿಯದು ನದಿಯು ತಾನೆ ಹರಿಯದು ಕಡಲು ತಾನೆ ಉಕ್ಕದು ನೌಕೆ ತಾನ...
ರೂವಾರಿ ರೂವಿಟ್ಟ ಕಲ್ಲಲ್ಲ, ಮೂರ್ತಿಯಿದು, ಎಂತೆಂದರಂತಾಗಬಲ್ಲ ಬಯಲಲ್ಲ, ಮನುಜನಳಲಿಂ ಮೂಡಿದೊಲುಮೆಮಾತ್ರವಿದಲ್ಲ, ನ್ಯಾಯನಡೆಸುವ ನಿಷ್ಠುರದ ನಿಯತಿಯಲ್ಲ. ಜಡದಿಂದ ಜೀವಕ್ಕೆ ಜೀವದಿಂದಾತ್ಮಕ್ಕೆ ಆತ್ಮದಿಂ ರಸಪದಕೆ ಇರವನಿದ ಸೆಳೆವ ಚೇತನಾಯಸ್ಕಾಂತ ಜಾನ...
ಖುರಪುಟದ ಹೆಜ್ಜೆ ಬಡಿತದ ಶಬ್ದ, ಭಗ್ನ ಅವಶೇಷಗಳಡಿ ಕಾಲನ ಉಸಿರು ಮುರಿದು ಬಿದ್ದಚಕ್ರದ ಗಾಲಿ, ಗಡಿಯಾರ ಮುಳ್ಳಿನ ರಿಂಗಣ ಕಾಮನ ಬಿಲ್ಲಿನ ನೆರಳು ಸಿಗದು. ಆಗಸದಲಿ ಹರಡಿದ ಬಟ್ಟೆಯಲ್ಲಿ ತೆಗೆದಿಟ್ಟ ಚುಕ್ಕಿಗಳ ಮೂಟೆ ಮೌನ ಬಿಕ್ಕುವ ಮಾತುಗಳನ್ನು ಕೊಳೆಹ...













