ಕುಂಟನಾಗಿ ಕುರುಡನಾಗಿ
ಗುರುವ ಕಂಡು ಉಳಿದೆನೆ
ಮುಗ್ಧನಾಗಿ ದಗ್ಧನಾಗಿ
ಲಿಂಗ ಬೆಳಕು ಪಡೆದೆನೆ
ಎಲ್ಲ ಇಲ್ಲಿದೆ ಶಿವನ ಮನೆಯಿದೆ
ತಾಯ ತೊಟ್ಟಿಲು ತೂಗಿದೆ
ಇದೆ ಗುರುಮನೆ ನಿಜದ ಅರಮನೆ
ಜ್ಯೋತಿ ಸಂಗಮವಾಗಿದೆ
ಇಲ್ಲಿ ಅರಳಿದ ಹೂವು ಎಂದಿಗು
ಬಾಡಿ ಹೋಗದು ಬೀಳದು
ಇಲ್ಲಿ ಹಸಿರು ಚಿಗುರು ಚಲುವು
ಲಿ೦ಗ ತತ್ವವ ಮರೆಯದು
ನಿತ್ಯ ಹೂಮನೆ ರಸದ ರುಚಿತೆನೆ
ನಿಜ ನಿರಂತರ ಸುಂದರಾ
ಜ್ಞಾನಯೋಗದ ಪ್ರೇಮ ರಾಜ್ಯದ
ಲಿಂಗಯೋಗವೆ ಮಂದಿರಾ
*****



















