
ನಿನ್ನುಸಿರು ಬೆರೆತಿದೆ ಈ ಮನೆಯಲ್ಲಿ ಹಾಗಾಗಿ ಎದೆಯಲ್ಲಿ ಸಂತಸವಿದೆ ನೀನುಲಿದ ಶಬ್ದಗಳು ಪ್ರೀತಿಯ ಅಕ್ಷರಗಳ ಬರೆದಿವೆ ಹಾಗಾಗಿ ಹೂಗಳು ನಗುತ್ತಿವೆ ನಿಂಜೊತೆ ಹಾಕಿದ ಹೆಜ್ಜೆಗಳು ಮನೆಯಿಂದ ಕಡಲದಂಡೆತನಕ ಹರಡಿಕೊಂಡಿವೆ ಹಾಗಾಗಿ ದಾರಿಗಳಿಗೂ ನೆನಪು ಅಂಟ...
ಹಸಿರು ಎಲೆಗಳ ಎಳೆಯಲಿ ಹಸಿರು ಉಸಿರಿನ ನರ್ತನ ಪ್ರಕೃತಿ ಇತ್ತಿಹ ದಿವ್ಯಕೊಡುಗೆಯ ಜೀವ ಜೀವದಾ ಚೇತನ || ಸುಪ್ರಭಾತದ ತನಿಯ ಚೆಲುವಲಿ ಹೂವು ಹೂವಿನ ಮೊಗದಲಿ ತುಂತುರು ನೀರ ಮಣಿಯರೂಪವು ಹೊಳೆಯುವ ಸಂಭ್ರಮ || ನಗುವ ಚೆಲ್ಲಿ ಬರುವ ದುಂಬಿಯ ಸಾಲು ಚೆಲುವಿ...
ಒಳಬನ್ನಿ ಗೆಳೆಯರೆ ಇದು ಒಬ್ಬ ಕವೀಂದ್ರನ ಗೋರಿ ಹುಸಿದಿದ್ದರೆ ಕಸಿದಿದ್ದರೆ ಮಾತಿಗೆ ತಪ್ಪಿ ತಪಿಸಿದ್ದರೆ ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ ರಾತ್ರಿ ರಾಮಾಯಣ ಹಗಲು ಭಾರತ ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ...
ನಂಬು ನಂಬೆಲೆ ಮನವೆ ನಿನ್ನನು ನಂಬದಿದ್ದರೆ ನಶ್ವರಾ ತುಂಬು ಎದೆಯಲಿ ವಿಶ್ವಮೂರ್ತಿಯ ಇಲ್ಲದೆಲ್ಲವು ಅಪಸ್ವರಾ || ಪ|| ನಂಬಿ ನಿನ್ನನು ಸುಖವ ಕಂಡರು ತುಂಬು ಹೃದಯದಿ ಶರಣರು ನಂಬಿ ನಿನ್ನಯ ಹೊಗಳಿ ದಣಿಯದೆ ಹಾಡಿ ಕುಣಿದರು ದಾಸರು || ೧ || ಹುಟ್ಟಿ ಸಾ...
ಸದಾ ಬ್ರಹ್ಮವಿಚಾರಿ ಏಕ ಜನಿವಾರಧಾರಿ ಕೆಲವೊಮ್ಮೆ ಮಾತ್ರ ಶನಿವಾರ ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ ಒತ್ತಾ...
ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ ಪೂಜಾರಿ ನಾನಽ ಪರಮೇಶಿ ||ಪಲ್ಲ|| ಕಲ್ಲಾಗಿ ನೀ ಕೂಡ ಬೆಲ್ಲಾ ನಾ ಕೊಡತೇನ ಬಕುತರು ಬರಲೇ ನಿನಗುಡಿಗೆ ಗಂಟಿ ಗುಗ್ಗುಳ ನಿನಗ ಹುಗ್ಗಿ ಹೋಳಿಗಿ ನನಗ ಬಂಗಾರ ಕಳಸಾ ನಿನಮುಡಿಗೆ ||೧|| ನೀ ಕಲ್ಲು ಆದರ ಕಲ್ಲೆಲ್ಲ ಕೈವಲ್...
ಮಾನವನ ಬೆವರು ಬಾಳಿನ ತವರು ಅರಿವಾಗಿ ಅರಳಿ ಬೆಳಕಾಯಿತು ಸಂಸ್ಕೃತಿಗೆ ದುಡಿಮೆ ಬೇರಾಯಿತು || ಬಂಡೆಗಟ್ಟಿದ ಬೆಟ್ಟ ಹಸಿರು ತುಂಬಿದ ಘಟ್ಟ ಮಾನವನು ಮೈ ಏರಿ ಮಾತಾಡಿದ ಹೋರಾಟ ನಡೆಸುತ್ತ ಒಂದಾಗಿ ಬದುಕುತ್ತ ಹೊಸ ಗೂಡು ಹುಡುಕುತ್ತ ನಡೆದಾಡಿದ || ಕಾಡು ...
ಮಲಗು ಮುದ್ದಿನ ಕಣ್ಮಣಿ ಮಲಗು ಪ್ರೀತಿಯ ಚಿನ್ಮಯಿ| ಮಲಗೂ ಮಲಗೆನ್ನ ಅರಗಿಣಿ ಜೋಗುಳವ ಹಾಡುತಲಿ ತಂಪೆಲರ ಬೀಸುತಲಿದೆ ತಂಗಾಳಿ || ನಿದಿರೆಯು ನಿನ್ನನು ಕರೆದೊಯ್ಯುವಳು ಚಂದ್ರನ ಜೊತೆಗೂಡಿ ಆಟವನಾಡುವಳು| ಬಣ್ಣಬಣ್ಣದಗೊಂಬೆಗಳ ಕೊಡುವಳು ಮುಗಿಲ ಜೋಕಾಲಿ ...
ಇದುವೆ.. ಇದುವೆ.. ನಮ್ಮ ಕನ್ನಡ ನಾಡು ಸರ್ವರ ಸುಖವ ಬಯಸಿದ ನಾಡು ಸಾಮಾಜಿಕ ನ್ಯಾಯ; ಕಾಯಕ, ಭಕ್ತಿಯ ಬಸವನ ಬೀಡು ದಿಕ್ಕು, ದಿಕ್ಕಲಿ ಜ್ಯೋತಿಯ ಹೊತ್ತಿಸಿ ಧರ್ಮ, ಸಂಸ್ಕೃತಿ ಬೆಳಗಿದ ನಾಡು. ಅಂಧಾನುಕರಣೆ, ಆಚರಣೆಗಳ ಬುಡವನು ಅಲುಗಿಸಿ, ಕ್ರಾಂತಿಯ ಮೊ...













