ಸಂಸಾರವೆಂಬುದೊಂದು
ನೀರಿನ ತೊಟ್ಟಿ
ತುಂಬಲು
ಒಂದೇ ನಲ್ಲಿ
ಖಾಲಿ ಮಾಡಲು
ಹಲವು.
ತುಂಬಲು
ದೊಡ್ಡ ನಲ್ಲಿ
ಖಾಲಿ
ಮಾಡಲು
ಸಣ್ಣ ನಲ್ಲಿಗಳು
ಅವು
ಭಾರಿ ಚುರುಕು
ಕ್ಷಣದಲ್ಲಿ
ತೊಟ್ಟಿ ಖಾಲಿ.
ಎಲ್ಲೆಡೆ
ಹಾಗೇ ಅಲ್ಲ.
ಒಂದೆಡೆ
ಉಪಯೋಗಿಸದೆ
ತೊಟ್ಟಿ
ತುಂಬಿ
ಹರಿಯುತ್ತಿದೆ.
ಮತ್ತೊಂದೆಡೆ
ಉಪಯೋಗಿಸಲು
ನೀರೇ ಇಲ್ಲದೆ
ಖಾಲಿ ತೊಟ್ಟಿ.
ಸಮಾನತೆಯಲ್ಲಿ
ಆಸಮಾನತೆ!
*****
೨೬-೦೩-೧೯೯೨