ಇಷ್ಟಲಿಂಗ

ಇಷ್ಟ ಲಿಂಗದ ಸ್ಪಷ್ಟತೆ ಇಲ್ಲಿ ಕಾಣುವುದು
ಕಗ್ಗತ್ತಲೆಯ ಗೂಡಿನ ಬ್ರಹ್ಮಾಂಡವಿದು
ಅಜ್ಞಾನದ ಪರದೆಯಿಂದ ಸುತ್ತಿಹುದು
ಜ್ಞಾನ ಜೋತಿಯ ಚೇತನ ಒಳಗಿಹುದು
ಇಷ್ಟಲಿಂಗ ಎನ್ನುವ ಭೂಮಂಡಲವಿದು.

ಸಾಮಾನ್ಯರ ಕೈಗೆಟುಕದ ದಿವ್ಯ ಚೇತನವು
ಧ್ಯಾನದ ಮೂಲಕವೇ ದಿವ್ಯ ಜೋತಿಯ ದರ್ಶನವು
ಕೆದಕಿದಷ್ಟು ಉದ್ಬವಿಪ ಜ್ಞಾನ ಅಕ್ಷಯ ಪಾತ್ರೆಯಿದು
ಜೀವನ ಪೂರ್ತಿ ಶೋಧಿಸಿದರೂ ಸಿಗದು ಪೂರ್ಣತೆಯು
ಅಲ್ಪ ಜ್ಞಾನವನರಸಿಯೂ ಧನ್ಯ ನಿನ್ನ ಜೀವನವು.

ಅಂಗದೊಳಗಿಟ್ಟು ನೇರ ದೃಷ್ಟಿಯನೆಟ್ಟು
ಶಾಂತ ಚಿತ್ತದಿ ಸಂಚರಿಸಿದರೆ ಮನದೊಳು
ಜ್ಞಾನ ಜ್ಯೋತಿ ಗೋಚರಿಸುವುದು ಆತ್ಮ ಸಾಕ್ಷಿಗೆ
ಕೆದಕಿ ಪಡೆದು ನೀನಾಗು ಜ್ಞಾನದ ಬೆಳಕು
ಆ ಜ್ಯೋತಿಯಿಂದ ತೊಲಗಿಸು ಜಗದ ತಮಂಧತೆಯನ್ನು.

ಇಷ್ಟ ಲಿಂಗದೊಳ್ ಹುಟ್ಟುವುದು ಸಹಜ
ಜ್ಞಾನವಿಲ್ಲದ ಬಾಳದು ಎಣಿಸುವುದು ಅಸಹಜ
ಬಾಳಿಗೆ ಬೇಕು ಜ್ಞಾನ ಜೋತಿಯ ಬೆಳಕು
ನೀನೇ ಆಗು ಆ ಜ್ಞಾನ ಜ್ಯೋತಿಯ ತುಣುಕು
ನಿನ್ನಿಂದಲೆ ಹರಡಲಿ ಮಾನವತೆಯ ಬೆಳಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರಿನ ತೊಟ್ಟಿ
Next post ಅಸಾಧ್ಯ

ಸಣ್ಣ ಕತೆ

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…