Home / ಕವನ / ಕವಿತೆ

ಕವಿತೆ

ಏಳು ಯುವಕಾ ಸಾಕು ತವಕಾ ವಿಶ್ವ ನಿನ್ನನು ಕೂಗಿದೆ ಏಳು ಏಳೈ ಕೂಗು ಕೇಳೈ ಭೂಮಿ ನಿನ್ನನು ಬೇಡಿದೆ ಎಲ್ಲಿ ಸಾವು ನೋವು ಕತ್ತಲೆ ಅಲ್ಲಿ ಪ್ರೇಮವ ಸುರಿಯುವೆ ಎಲ್ಲಿ ವಂಚನೆ ಸಂಚು ಯಾಚನೆ ಅಲ್ಲಿ ಕೆಂಡವ ಕಾರುವೆ ಹೂವಿಗಿಂತಲು ಹೂವು ನೀನು ಯುಗಕೆ ಜಗಕೆ ಗು...

ಶಿಲಾಮೂರ್ತಿಯಲಿ ದೇವರನು ಕಾಣುವ ಹುಚ್ಚು ಹಂಬಲವೇಕೆ? ಕಣ್ಣಿಗೆ ಕಾಣುವ ದೇವರನು ಅರಿಯದೆ ಕೈಬಿಟ್ಟೆಯೇಕೆ? ಕಲ್ಲಿನಲಿ ಮಣ್ಣಿನಲಿ ಗಾಳಿಯಲ್ಲಿ ನೀರಿನಲ್ಲಿ ಪಶುಪ್ರಾಣಿ ಸಂಕುಲದಲಿ ಪ್ರಕೃತಿಯ ಜೀವಜಂತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಂದರಲ್ಲ...

ಹೂವು ಅರಳಿದ ಮರದ ಕೆಳಗೆ ಕುಳಿತ ಅವಳು ಕನಸಿನ ಅರಮನೆಯ ರಾಜಕುಮಾರಿಯಂತೆ ಮಗಳ ತಬ್ಬಿ ಎದೆಗಪ್ಪಿಕೊಂಡಿದ್ದಾಳೆ. ಆಕಾಶದಲ್ಲಿ ಒಂಟಿ ಹದ್ದು ಹಾರಾಡುತ್ತಿದೆ ಆ ಮಟಮಟ ಮಧ್ಯಾಹ್ನದಲಿ. ನೆರಳ ನೆನಪುಗಳಲಿ ತಣ್ಣ ಮಣ್ಣಲಿ ಸಡಗರದಲ್ಲಿ ಬೆಳಕು ಅರಳುತಿರಲು ಯಾವ...

ಜನನಿ ಜಗನ್ಮಾತೆಯೆ ಜನ್ಮದಾತೆಯೇ ಜಗದಾತ್ರೆಯೆ || ಜ || ನಿನ್ನ ಮಡಿಲಲ್ಲಿರಿಸಿ ನಮ್ಮ ಕಂಬನಿಯನ್ನೊರಿಸಿ ನಿನ್ನ ಅಪ್ಪುಗೆಯಲಿ ನಮ್ಮನು ನಲಿಸುವೆ || ಜ || ಸುಂದರ ಕನಸುಗಳ ನೀಡಿ ಮಲ್ಲಿಗೆಯ ಹಾಸುಗೆಯ ಹಾಸಿ ನಮ್ಮ ನೀ ಜೋಗುಳ ಆಡಿಸುವೆ || ಜ || ನೂರು ...

ದಿನವು ಮುಳುಗಿತು ಬೆಳೆದು ಚಾಚುತ ಇರುಳ ಸಂಜೆಯ ಲಯದಲಿ ಉದ್ದೊ ಉದ್ದಿನ ಹಾದಿ ಮುಗಿದಿದೆ ಸ್ವಲ್ಪ ಉಳಿದಿದೆ ಮಾರ್ಗವು ಇನ್ನು ಒಣ ಒಣ ರಣದ ಭಣಭಣ, ಇನ್ನು ಮೌನಾಶ್ರಯದಲಿ ಬಂತು ಕತ್ತಲು ಗೋಡೆ, ನಡೆ ನಡೆ, ಅದರ ಹಿಂದೆಡೆ ಸ್ವರ್ಗವು. *****...

ಎಂತು ನೀನಿಹೆಯೋ-ಪರಾತ್‌ಪರ ಎಲ್ಲಿರುತಿಹೆಯೋ ? ಎಂತು ನೀನಿಹೆಯೋ ನಿನೆಲ್ಲಿರುತಿಹೆ ನಿನ್ನ ಅಂತವ ತಿಳುಹಿ ನಿಶ್ಚಿಂತನ ಮಾಡೆನ್ನ! ೧ ಅಣುರೇಣು-ತೃಣ- ತೃಟಿಯೊಳು ವ್ಯಾಪಿಸಿದ ನಿನ್ನ ಘನತರ ರೂಪವನರಿತುಕೊಳ್ಳದೆಯೆ…. ಮನಕೆ ಬಂದಂತೆ ಚಿತ್ರಿಸಿ ಪೂ...

ಈ ದೇಶದ ಸಂಸ್ಕೃತಿಯ ಅನ್ಯ ದೇಶದ ಭಾಷೆ ಸಂಸ್ಕೃತಿಯ ಜೊತೆಗೆ| ಅಲ್ಪಾಯುಗಾಯುಷ್ಯ ದೇಶದ ಮುಂದೆ ದೀರ್‍ಘಾ, ಸುದೀರ್‍ಘಾ ಯುಗಾಂತರದ ನಮ್ಮದೇಶವನೆಂದೂ ಹೋಲಿಸದಿರಿ|| ನೂರಾರು ಭಾಷೆ ಸಾವಿರಾರು ಜಾತಿ ಕೋಟಿ ದೇವರುಗಳ ನಾಡು ನುಡಿಯ ಅಂತರಂಗವ ತಿಳಿಯದೆ| ಕೇವ...

ನಮ್ಮೂರಿನ ಕರಿಯ ಕಂಠದೊಳಗಿನ ಕೆಂಡದುರಿಯಲ್ಲಿ ಕೊಂಡ ಹಾಯುವ ಗೆಳೆಯ ಬಯಸುತ್ತಾನೆ ಮನೆಯ ಕನಸುತ್ತಾನೆ ಬೆಳೆಯ- ತೆನ ತೂಗೀತು! ಮನೆ ಮಾಗೀತು ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು? ಆಗಸ್ಟ್ ಹದಿನೈದು ಹರಿಯಿತು ಚಿಂದಿ ಬಾಳಿನ ಬಟ್ಟೆ ಜನವರಿ ಇಪ್...

ಹೈಮವತಿಯೇ ತಾಯಿ- ಬಗೆ ಬಗೆಯ ರೂಪದಲಿ ಭೂಮಿಯೊಳು ತಾ ಬಂದು- ನಲಿಯುವಳು ದೇಹದಲಿ ಅವಳ ಕಿಡಿ ನಮ್ಮೊಳಗೆ ನಲಿಯುತಿದೆ ಒಳಗೊಳಗೆ. ಅವಳೆಮಗ ಹೆತ್ತಬ್ಬೆ- ಆದರೊಂದೇ ಚಿಂತೆ ನರರೆಂಬ ಸೋದರರು- ಪ್ರೇಮ ತೊರೆದವರಂತೆ ಬಲಿಯೀವರೆಮ್ಮನ್ನು ಕೇಳುವವರಾರಿನ್ನು. ಪರ...

ಹಸಿರು ಬಳ್ಳಿ ಛಪ್ಪರ ಕಂಡಾಗ ನೆನಪಗುತ್ತಾಳೆ ನನಗೆ ಅಮ್ಮ ಅವಳೇ ಕಟ್ಟಿದ್ದ ಛಪ್ಪರದ ಮೇಲೆ ಹಾಗಲ, ಹೀರೇ, ಪಡುವಲ ಬಳ್ಳಿ ಕುಂಬಳಕಾಯಿ ಚಳ್ಳವರೆಯ ಹಸಿರು ಮನೆಮುಂದೆ ದಟ್ಟ ಹಸಿರು ಹಂದರ ನೆರಳಿತ್ತು ಮನೆಯ ಹಿಂದೆ ಮುಂದೆ ಬರೀ ಹಸಿರೇ ಹಸಿರಿತ್ತು. ಅಮ್ಮನ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...