Home / ಕವನ / ಕವಿತೆ

ಕವಿತೆ

ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ! ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ. ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ ಏಳ್ಮಡಿ ಧಾಳಾಧೂಳಿಯ ಏಳ್ಳಣ್ಣದ ಕಿಚ್ಚೇ ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮೇ...

೧ ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ ನೆನಹು ನಿಡುಸುಯಿಲುಗಳ ಕರೆಯುತಿದೆಯೆ? ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ! ೨ ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು – ಆ ಎಳಗಲ್ಲಗಳ ...

ಕೆಟ್ಟು ಒಳ್ಳೆಯವನು ಎಂದೆನಿಸಿಕ್ಕೊಳ್ಳುವುದಕಿಂತ ಪೆಟ್ಟುತಿಂದು ಜಾಣನಾಗುವುದಕ್ಕಿಂತ | ಹಾಗೆಯೇ ಎನ್ನ ಒಳ್ಳೆಯವನೆಂದೆನಿಸು ಛೀ…ಥೂ ಎಂದೆನಿಸದೆ ಎನ್ನ ನೀ ಬೆಳೆಸು|| ಕೆಟ್ಟಮೇಲೆ ಬುದ್ಧಿ ಬರುವುದಕ್ಕಿಂತ ಕೈಸುಟ್ಟಮೇಲೆ ಅರಿವುಮೂಡುವುದಕ್ಕಿಂತ...

ಯಾರ ಜೊತೆ ಆಡಲಿ? ಯಾರ ಜೊತೆ ಮಾತಾಡಲಿ? ಕಾಲಿಟ್ಟ ಕಡೆಯಲ್ಲಿ ಹುಟ್ಟುತಿವೆ ಗೋಡೆಗಳು! ಗೋಡೆಗಳ ತಡಕಿದರೆ ಕಿಟಕಿ ಕಂಡಿಗಳಿಲ್ಲ ಎತ್ತ ಸುತ್ತಿದರೂ ಇಲ್ಲಿ ಬಾಗಿಲುಗಳೇ ಇಲ್ಲ! ಸಾಲು ಗೋಡೆಗಳಲ್ಲಿ ನೋವು ತುಂಬಿದ ನಾವು ಕೂಗಿ ಕರೆದರೂ ಇಲ್ಲಿ ಉತ್ತರವೇ ಇಲ...

ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ ಶಬ್ದ ಮೀರಿದ ಸಂಕಟಗಳ ನುಂಗಿ ದೀರ್ಘ ಬದುಕಿನ ವಿಷಾದಗಳ ಮರೆತು ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ ಸರಹದ್ದುಗಳೇ ಇಲ್...

ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ ನಾಲ್ಕನೆಯ ಮೊಗ ಇದ್ದೇ ಇರುವುದು ಕಾಣುವುದರಾಚೆಗೇ ಕಾಣದುದು ಇರುವುದು ಕಾಣುವುದೆ ಮರೆ ಕಾಣದಿರುವುದಕೆ ಓ ಧರ್ಮಚಕ್ರವೇ ಕೈಹಿಡಿದು ನಡೆಸೆನ್ನನು ಸತ್ಯಮೇವ ಜಯತೆ ಒಂದು ಹಕ್ಕಿಯು ತಿನ್ನುತಿದ್ದರು ಇನ್ನೊಂದು ಹಕ್...

ತಾಯ್‌ ಹೊಟ್ಟಿ ತಂಗಾಲಿ ತಾಯಿರಲಿ ದ್ರೌಪತಿ | ನೀಲಗೊಂಡೇದ ನಿರವೀರ | ಬಾಲನ ಮ್ಯಾಲ | ಶ್ರೀರಾಮರಿದ್ದಾ ರೊಂದಗಲಾದೆ ||೧|| ಎಂದೀಗಿ ಈ ಹಾಡ ಹೊಂದಿಸ್ತಿದ್ದಾರೆಂದು | ಅಂಗಳಕ ಬಂದು ತಿರಗೀನೆ | ಹ್ವಾದವರು | ಹಾಳು ದೇಗುಲದ ಕದವಾಗೆ ||೨|| ಎಂದೀಗಿ ಈ ...

ಬಾಯ ಜೊಲ್ಲ ನೀರಿನಿಂದ ಹಿಡಿದು ಯೋನಿ ದ್ರವಣದವರೆಗೆ ಹರಿವ ಜಲ ಜಲವೂ ವಿಷ ವಿಷ ವಿಷ ಏನಿದು ಅವಳ ಶಾಪವೋ ಗಂಡನಿಂದ ಬಿಡಿಸಿದ್ದಕ್ಕೆ ಈ ಅಜ್ಜಿ ತಾತ ಹದಿಮೂರು ಹೆತ್ತರೂ ಕಚ್ಚಾಡಿದ್ದಕ್ಕೆ ಅವಳು ಒಲೆಯ ಮುಂದೆ ಕೂತು ಹಾಕಿದ ಹಿಡಿ ಶಾಪ. ಇಂದು ಈ ನನ್ನ ಗೆ...

ಕೆಂಪು ಉಡುಪಿನ ಚೆಲುವೆಯ ಕುಡಿ ನೋಟದ ಗಾಳಕೆ ಸಿಲುಕದವರಾರು? ಈ ಬೇರಿಗೆ ಕೆಂಪಂಚಿನ ಸೀರೆ ಸರೆಗು ಸೋಕಿದರು ಸಾಕು ಕೊನರುವುದು ಕೆಂಪು ಅಧರಲಿ ನಗೆ ಮಿಂಚಿದರೆ ಮಲೆನಾಡಿನ ಚಳಿಯಲ್ಲೂ ಮೈ ಬಿಸಿಯೇರತೊಡಗುವುದು ಮನಕ್ಕೊಪ್ಪುವ ರಕ್ತವರ್ಣದ ಧಿರಿಸು ಧರಿಸಿದ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...