ಎಂತೂ ನಾನಿರಬೇಕಿದ್ದರೆ

ಎಂತೂ ನಾನಿರಬೇಕಿದ್ದರೆ
ಅಂತಿರಬೇಕೊ ಇಂತಿರಬೇಕೊ
ನಾ ಎಂತಿರಬೇಕೊ

ಕೂತಲಿಂದ ಏಳಲೆ ಬೇಕೊ
ಎದ್ದಮೇಲೆ ಓಡಲೆ ಬೇಕೊ
ಎಡೆತಡೆಗಳ ಮೀರಲೆ ಬೇಕೊ
ಸದಾ ನಡೆಯುತ್ತಿರಬೇಕೊ

ಇನ್ನೊಬ್ಬರು ಕಲಿಸಿದ ಮಾತನು
ಒಪ್ಪಿಸಬೇಕೊ
ಇತರರ ಮಾತಿಗೆ ತಲೆ
ಜಪ್ಪಿಸಬೇಕೊ

ನಗು ಬರದಿದ್ದರು ನಗುತಿರಬೇಕೊ
ಬರುತಿದ್ದರೆ ಹೇಗೋ ತಡಕೊಳ್ಳಬೇಕೊ
ಅಳುವಂತಿದ್ದರೆ ಅಳದಿರಬೇಕೊ
ಮುಖವಾಡ ಗಟ್ಟಿ ಬಿಗಿದಿರಬೇಕೊ

ಕರೆದರೆ ಓಗೊಡಬೇಕೊ
ಸರಿ ಸರಿ ಎಂದು ತಲೆದೂಗಬೇಕೊ
ನಿದ್ದೆ ತೂಗುತಿದ್ದರು ಎಚ್ಚರಬೇಕೊ
ಅದಕೇ ಸ್ವಂತ ಮೈ ಚಿವುಟಬೇಕೊ

ಅಥವಾ ಕ್ರಾಂತಿಕಾರಿಯಾಗಿರಬೇಕೊ
ಬಾಯಲಿ ಹೊಗೆ ಉಗುಳುತಿರಬೇಕೊ
ಜೇಬಲಿ ಸಿಡಿಮದ್ದು ಇಟುಕೊಂಡಿರಬೇಕೊ
ಒಂದಷ್ಟು ಮಂದಿಯ ಕೊಂದಿರಬೇಕೊ

ಚರಿತ್ರೆಯ ಬದಲಾಯಿಸುತೇನೆ
ಎಂದಿರಬೇಕೊ
ಹುತಾತ್ಮತೆಯ ವ್ಯಸನ
ಹಚ್ಚಿರಬೇಕೊ

ತೀವ್ರವಾದದ
ರೊಚ್ಚಿರಬೇಕೊ
ಸುಡುತೇನೆನ್ನುವ
ಕಿಚ್ಚಿರಬೇಕೊ

ಅಂತಿರಬೇಕೊ ಇಂತಿರಬೇಕೊ
ಇರದಾಗುವನಕ ನಾನೆಂತಿರಬೇಕೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಚ್ಚೆ-ಹಕ್ಕು
Next post ಧರ್ಮದ ಮುಸುಕಿನೊಳಗಿಂದ

ಸಣ್ಣ ಕತೆ

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys