ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ ೪೭ ಯಾವ ಮಲ್ಲಿಗೆಗಂಪು ಸಂಚೆಗಾಳಿಯ ತಂಪು – ಬೆನ್ನೇರಿ ಹಾಯುತಿದೆ ಹೀಗೆ ಇಂದು? ಯಾವುದೋ ನೆನಪನ್ನು ಹೊತ್ತು, ಹೊಸಿಲಿಗೆ ಬಂದು ಯಾಚಿಸಿದೆ ಬರಲೇನ...

ಹದಿನೆಂಟರ ಬಾನು ಕನಸುಗಳ ಸರಮಾಲೆ ಹೊತ್ತು ಹಾರಿ ಬಂದಿದ್ದಾಳೆ ಹೈದರಾಬಾದಿನಿಂದ ಅರೇಬಿಯಕ್ಕೆ ಅರಬ್ಬನ ದರ್ಬಾರಿನಲ್ಲಿ ರಾಣಿಯಹಾಗಿರಬಹುದೆಂದು ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು ಮರ್ಸಿಡಿಸ್ ಕಾರಿನಲ್ಲಿ ಮೆರೆಯಬಹುದೆಂದು ಕೈಕಾಲಿಗೊಂದೊಂದು ನೌಕರಿ ...

ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ ಮುಖಗಳನ್ನು ಹುಡುಕುತ್ತಾ ಬೆಕ್ಕಸ ಬೆರಗಾಗುತ್ತಾನೆ ತನ್ನದೇ ಮುಖ ಕಂಡ ನಿರ್ಲಿಪ್ತ ಆದರೂ ಹುಚ್ಚು ಪ್ರೇಮಿ! ತಪ್ಪು – ಸರಿಗಳ ಲೆಕ್ಕ ಹಿಡಿದು ತೂಗಲಾರದ ತಕ್ಕಡಿಗಳಿಗೆ ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನ...

ಜಾಣರಾಗಿರೋ ಜನರು ಜಾಣರಾಗಿರೋ ವೋಟು ಬೇಟೆಯಾಟದಲ್ಲಿ ಜಾಣರಾಗಿರೋ ||ಪ|| ನಮ್ಮ ನಿಮ್ಮ ಮಧ್ಯದಲ್ಲಿ ಪಕ್ಷ ಪಾರ್ಟಿ ಭೇದ ಮಾಡಿ ನಮಗೆ ಕುಡಿಸಿ ತಿನಿಸಿ ಟಗರು ಕಾಳಗವನು ಮಾಡಿಸುವರು ನಾವು ನೀವು ಬಡಿದಾಡುತ್ತ ಕಚ್ಚಾಡುವ ಬೆಂಕಿ ಹಚ್ಚಿ ತಾವು ಅದರ ಉರಿಗೆ ...

ನಾನೆಂಬ ಮಬ್ಬಿಳಿದು ನೀಹಬ್ಬುತಿರುವಾಗ ಬಂದ ಗಾಳಿಯಲಿತ್ತು ದಿವ್ಯಗಂಧ ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು ಮೂಡಿದರು ಅಲ್ಲಿಯೇ ಸೂರ್ಯಚಂದ್ರ ಕಾಡಿದರೆ ಏನಂತೆ ಕೂಡಿದರೆ ಏನಂತೆ ಹಾಡುಗಳೆ ಪಾಡಳಿದು ಹೋಗಿಲ್ಲವೇ? ಬಂದು ಸೇರಿದ್ದೆಲ್ಲ ನಂದೆನುವ-ಭ...

ಗಾಂಧಿ ತತ್ವದ ಮೂರು ಮಂಗಗಳು ಧೂಳ ಹಿಡಿದು ಶೋಕೇಸಿನಲಿ ಬಿದ್ದಿವೆ. ‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ ಕ್ಷೇಮ ಸಮಾಚಾರದ ಮಾಮೂಲಿ ಮಾತು ಕಥೆ ಗಾಂಧಿ ತತ್ವದ ಹೊಗಳಿಕೆ ಅವನಲ್ಲಿ ಅವನ (ಆರಾಫತ್) ಹೊಗಳಿಕೆ ನಮ್ಮಲ್ಲಿ ಬಿಸಿಲೇರುತ್ತದೆ ನಾವು ನೆಟ್ಟ ತ...

ಹದ್ದು ಹದ್ದು ಹದ್ದು ಅಣ್ಣ ಸುತ್ತಮುತ್ತಲೂ ರಣಹದ್ದುಗಳ ರಾಜ್ಯವಾಯ್ತು ಎತ್ತೆತ್ತಲೂ ||ಪ|| ರಕ್ತ ಮಾಂಸ ತಿನ್ನುತ್ತಾವೆ ಶಕ್ತಿ ಹೀರಿ ಒಗೆಯುತಾವೆ ಗೊತ್ತೆ ಆಗದಂಥ ರೀತಿ ಕೊಲ್ಲುತಾವೆ ಕೆಂಗಣ್ಣು ಕೆಕ್ಕರಿಸುತ ಕೊಕ್ಕು ತಿಕ್ಕಿ ಡೊಕ್ಕರಿಸುತ ಹೆದರಿಸು...

ಎಲ್ಲಿ ಹಾರಿತು ನನ್ನ ಮುದ್ದು ಹಕ್ಕಿ ಎಲ್ಲಿ ಕೂಗುತಲಿದೆಯೊ ವ್ಯಥೆಗೆ ಸಿಕ್ಕಿ? ಕಣ್ಣು ತಪ್ಪಿಸಿ ಹಾರಿ ಬೇಲಿ ಸಾಲನು ಮೀರಿ ಅಡವಿ ಪಾಲಾಯಿತೋ ದಾರಿ ತಪ್ಪಿ! ಮನೆಯ ಕಾಳನು ತಿಂದು ಬೇಸರಾಗಿ ವನದ ತೆನೆಯನು ತಿನುವ ಚಪಲ ರೇಗಿ ಹೊಸ ಸಂಗ ಬೇಕೆನಿಸಿ ಹಾರಿತ...

“ಮಳೆ ಮಳೆ ಎಂದು ರೈತರು ಆಕಾಶದೆಡೆಗೆ ನೋಡುವಂತೆ ಇಲ್ಲಿಯೆ ಅರಬರು ಪೆಟ್ರೋಲ್ ಪೆಟ್ರೋಲ್ ಎಂದು ಮರುಭೂಮಿ ಆಳ ನೋಡುತ್ತಾರೆ” ರೈತನಿಗೆ ನಲದಾಳ ಸಂಬಂಧವಿಲ್ಲ ಅರಬನಿಗೆ ಆಕಾಶದಾಳಗೊತ್ತಿಲ್ಲ ನಮ್ಮ ರೈತ ದೋ ದೋ ದುಮ್ಮಿಕ್ಕುವ ಮಳೆಗೆ ಹಣ ಕೊ...

ತನ್ನಾಳ ಅಗಲ ಶಕ್ತಿ ತಿಳಿಯದಿವರು ದಡಗಳ ಕಟ್ಟಿ ನನಗೇ ಮಿತಿಯೊಡ್ಡುವರೇ? ತೀರಗಳಾಚೆಯ ಬದುಕಿಗೆ ತೆರೆಯೆಳೆಯುವರೇ? ರೋಷಾವೇಶದಿ ಹೂಂಕರಿಸಿ ಕಡಲು ದೈತ್ಯಾಕಾರದ ತೆರೆಗಳನ್ನೆಬ್ಬಿಸಿ ದಡಕ್ಕೆ ಬಡಿದು ಕಣ್ಣರಳಿಸಿ ಏನಿದೆ ಇಲ್ಲಿ ಬರೀ ರಸ ಹೀರಿ ಒಗೆದ ಕಸ ಬ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....