
ಮಾಮರದ ಕೊನರೆಲೆ ಅಂಚಿನಲಿ ಮಿನುಗುವ ಸಿಹಿಮಾವು ಒಂದು ನೋಡಿ, ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು- ಬೀಳಿಸಲೆ ಬೇಕು ಎಂದು! ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು ಯೋಚಿಸಿದೆ ತಲೆಯನೆತ್ತಿ; ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ ನೋಡಿ...
ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ, ಸಂದೇಹದಲ್ಲಿ ಮುಳುಗಿ ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೋ, ಹೇಳಿಹೆನು. ಕಾಣಬಾರದ ಘನವ ಹೇಳಬಾರದಾರಿಗೆಯು. ಹೇಳುವುದಕ್ಕೆ ನುಡಿ ಇಲ್ಲ. ನೋಡುವುದುದಕ್ಕೆ ರೂಪಿನ ತೆರಹಿಲ್ಲ. ಇಂತಾ ನಿರೂಪದ ಮಹಾ ಘನದ...
ನಾಲ್ಕು ವರ್ಷದ ಕಾಲ, ನಕ್ಕು ನಲಿದಾಡಿದೆವು ಕೂಡಿ ಕಲಿತೆವು, ಒಡನೆ ಕುಣಿದಾಡುತ ಕಂಡ ಕನಸುಗಳೇನು! ಆಡಿದಾಟಗಳೇನು! ಕೊನೆಯುಂಟೆ, ಮೊದಲುಂಟೆ, ಕನಸೆ ಜೀವ! ಉಗಿಯ ನಿಲ್ದಾಣದಲಿ ನೂರಾರು ಎಡೆಯಿಂದ ಜನರ ಜಂಗುಳಿ ನೆರೆದು ಚಣಗಳೆರಡು ಉರುಳೆ ಹಾದಿಯ ಹಿಡಿದು...
ಎಳೆದೂ, ಎಳೆದೂ ಇರುಳು, ತೂಗಿ ತಡೆದೂ ಬೆಳಗು, ನನ್ನೀ ಕೈಹಿಡಿದವಳು ಹಾಸಿಗೆ ಹಿಡಿದಿರಲು. ಓಡಿಸಲಳವೇ ಚಿಂತೆ, ಬಿಡುವೇ ಬಳಲಿಕೆಗೆ, ನನ್ನೀ ಜೀವದ ಕಣ್ಣು ಹಾಸಿಗೆ ಹಿಡಿದಿರಲು? ಎಳೆದೂ, ಎಳೆದೂ…. ಭರವಸೆ ಒಂದೂ ಇಲ್ಲ; ಅಂಜಿಕೆ ಭಯವೇ ಎಲ್ಲ. ಕಣ್...
ಪಡುವಣ ದಿಗಂತದಲಿ ಅಗ್ನಿದೇವನ ಒಂದು ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ! ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ ದಿನಕರನು ಇಣಿಕಿಣಿಕಿ ಮರೆಸೇರ್ವನೊ! ಎಲ್ಲಿಂದ ಯಾವೆಡೆಗೆ? ಯಾವೂರು ಪೋಗ್ವನೊ ಅಗ್ನಿಯಾ ಚಂಡು ಈ ಕೆಂಬಣ್ಣದೀ; ಪಡುವಣದ ಪ್ರಾಂತದ...
ನಾನೊಂದು ಹಾಳೂರಿಗೆ ಹೋದರೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು. ಹುಲಿಕರಡಿ ಅಡ್ಡಲಾದವು. ಇವ ಕಂಡು ನಾ ಹೆದರಿಕೊಂಡು, ನನ್ನ ಕೈಗೊಂದು ಕಲ್ಲು ತಕ್ಕೊಂಡು ನೋಡುತ್ತ ಬರುತಿರಲು, ಆ ನಾಯಿಗಳು ಓಡಿದವು. ಹುಲಿಕರಡಿಗಳೂ ಅಲ್ಲಿಯೇ ಬಯಲಾದವು. ಆ ಊರು ನಿ...
ಮೋಡ ಬಸಿರಿನೊಳಗೆ ಹೂತಿಟ್ಟ ಬಯಕೆಗಳು ಒಂದೊಂದಾಗಿ ಸುಡುತ್ತ ಬೂದಿಯಾಗುವಾಗ ಫಳಾರನೆ ಹೊಡೆಯುವ ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು ಹನಿ ಹನಿಗುಡುತ್ತ ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ ಹಕ್ಕೆ ಗಟ್ಟಿದ ಮನಸನ್ನು ಮಳೆ ಎಂದರೆ ಪ್ರೀತಿ ನನಗೆ ̵...
ನೆರಳನರಸುವ ಕೂಸು ತನ್ನ ಎಳೆ ಕೈಗಳಲಿ ಅದ ಹಿಡಿದು ತನ್ನೊಡನೆ ಆಟಕುಪಯೋಗಿಸುವ ಎಳೆ ಚಪಲಕೀಡಾಗಿ-ಹಿಗ್ಗಿನಲಿ ಓಡುತಲಿ ಅದರೆಡೆಗೆ ನಡೆದಾಗ, ನೆರಳು ಕೈಗಳ ಹಿಡಿತ ತಪ್ಪಿಸುತ ಜಾರಿರಲು, ಕಣ್ಣೀರ ಕರೆಯುತ್ತ ತಾಯ ಮಡಿಲಲಿ ತನ್ನ ದುಗುಡ ಹರಿಸುವ ಹಾಗೆ, ಸಂತ...













