ರಾತ್ರಿ ಸೂರ್ಯ ಎಲ್ಲಿಗೆ ಹೋಗ್ತಾನೆ? ಅಪ್ಪ ಎಲ್ಲಿಗೆ ಹೋತ್ತಾನೆ? ಅದೆಲ್ಲಾ ಕೇಳ್ಬೇಡಾ ಸುಮ್ಮನೆ ಕಣ್ಮುಚ್ಚಿ ಮಲಕ್ಕೋ ಪುಟ್ಟು ಅದೆಲ್ಲಾ ನಿನಗೆ ಅರ್ಥವಾಗೋದಿಲ್ಲ ನೀನಿನ್ನು ಸಣ್ಣವನು. *****...

ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ ಹುಲಿಕರಡಿಗಳಂತೆ ಹೆದರಿಸಬೇಡಿ ಮರಿಗಿಳಿಯಂತಿವನು ಕತ್ತಿ ಬಡಿಗೆಗಳನಾಡಿಸಬೇಡಿ ಬಳ್ಳಿ ಚಿಗುರಿನಂತಿವನು ಮುಳ್ಳು ಕಲ್ಲುಗಳ ಹರವಬೇಡಿ, ಹೂಪಾದ ಇವನವು ಕೋಲಾಹಲದಲೆಯಪ್ಪಳಿಸಬೇಡಿ ಆಶ್ರಮ ಶಾಂತ...

“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’ safe ಆಗಿ ನನ್ನೂರು ತಲುಪಲು” ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು ವಿಶಾಲ ವಿಹಂಗಮ ನಿಸರ್ಗಕಾಣಲು ಅಷ್ಟೇ ಅಲ್ಲ ಅಗಾಗ ತೂಕಡಿಕೆ...

ಮಗು, ನೀನು ಹುಟ್ಟುವ ಮೊದಲು ನಾನಿನ್ನು ಹಾಲುಗಲ್ಲದ ಹುಡುಗಿ! ಆಡುತ್ತ ಸಂಜೆಯ ನೆರಳಾಗಿ ಬೆಳೆದೆ ದಂಡಗೆ ಮೂಡುವ ಸೂರ್ಯ ನಿಂತು ನೋಡಿ ಬೆರಗಾದ ನಾಚಿ ಕೆಂಪಾದ ಒಂದು ದಿನ ‘ದೊಡ್ಡವಳಾದೆ’ ದೇವರ ಹೆಸರಲ್ಲಿ ‘ದಾಸಿಯಾದೆ’. ಕತ್ತಲಿಗೆ ಸಿಂಗಾರಗೊಂಡು ಪ್ರತ...

ನಿನಗಾಗೇ ಕಾಯುತಿರುವೆ ನೀನಿಲ್ಲದೆ ನೋಯುತಿರುವೆ ಮರಳಿ ಮರಳಿ ಬೇಯುತಿರುವೆ ಓ ಬೆಳಕೇ ಬಾ; ಬೇರಿಲ್ಲದೆ ಹೂವೆಲ್ಲಿದೆ ಹೂವಿಲ್ಲದೆ ಫಲವೆಲ್ಲಿದೆ ನಾನಿರುವೆನೆ ನೀನಿಲ್ಲದೆ ನಿಜದೊಲವೇ ಬಾ. ನಿನ್ನನುಳಿದು ಬಾಳೆ ಬರಿದು ಖಾಲಿ ಮುಗಿಲು ಜಲವೆ ಸುರಿದು ನನಗೇ...

ಹೋಳಿಯ ಹಬ್ಬ ವಿಶಾಲದ ಪದಗಳ ಕೇಳಿರಿ ಜನರೆಲ್ಲಽ| ಬಾಲಕರೆಲ್ಲರೂ ಕೋಲಾಟವ ಪಿಡಿದೇಳುವ ಶೃತಿ ಸೊಲ್ಲಽ||ಪ|| ದಕ್ಷವತೀಶನು ದಕ್ಷಬ್ರಹ್ಮ ತಾ ತನ್ನ ಪ್ರೀತಿ ಸುತೆಯುಽ ಸಾಕ್ಷಾತ್ ವರ ವಿರೂಪಾಕ್ಷನಿಗಿತ್ತ ನುಪೇಕ್ಷದಿ ಸಲಿಸುವೆಯಽ||೧|| ಮನದೊಳರಿದು ದಕ್ಷನ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...