ಒಬ್ಬ ಬಾಲುರಾಯರು ಬಹಳಷ್ಟು ಬರೆದಿರೋದು ಸೂರ್ಯನ್ಮೇಲೆ
ಸರಿ, ಆದರೆ ಬಹಳಷ್ಟು ಜನ ಬರಹಗಾರರು ಬರೇದಿರೋದೇನಿದ್ರೂ ನನ್ಮೇಲೆ
ಬರೀ ಪ್ರೇಮ, ಪ್ರಣಯ, ಚಾಂದು, ಚಂದ್ರಾಂತ ಒದ್ದಾಡಿ
ಒದರೋ ಸನಿಮಾದೋರು, ಚಿಲ್ಲರೆ ಕವಿಗಳ ಸಮಾಚಾರಾ
ಅಲ್ರಿ ನಾನು ಹೇಳ್ತಿರೋದು, ಇಲ್ಲಿ ಸ್ವಲ್ಪ ಕೇಳ್ರಿ, ಕುವೆಂಪು
ಮಹಾಕವಿ ಕುವೆಂಪು, ಗೊತ್ತು ತಾನೇ ಹೆಸರೇ ನೋಡಿ ಕೇಳುವುದಕ್ಕೆ
ಎಷ್ಟು ಇಂಪು:
ಅವರ ಕಾವ್ಯದ ವಿಷಯಕ್ಕೆ ಬೇಕಿದ್ರೆ ಬರೋಣ ಮತ್ತೆ
ನನಗೆ ಸರಿಯಾಗಿ ನೆನಪಿಲ್ಲ ಯಾವುದೂಂತ ಇಸವಿ,
ಅವರ ಹಿರೇಮಗ ಹುಟ್ಟಿದಾಗ ಅವನಿಗೆ ಅವರಿಟ್ಟ ಹೆಸರೇನು ಗೊತ್ತೆ?
ಚಾರು ಚಂದ್ರ ಚಕೋರ, ಪೂರ್ಣಚಂದ್ರ ತೇಜಸ್ವಿ.
*****