ಅಂದ ನೀ ಬೊಗಸೆ ಕಣ್ಣೊಳಗ
ಮಿಂಚುವ ‘ಹೊಂಗನಸು’ಗಳನ್ನು ಕಂಡಿದ್ದಿ
ನಾ ಹಂಗ ನಾ ಹಿಂಗ ಅಂತ
ಮೈ ಅಲ್ಲಾಡಿಸಿದ್ದಿ
ಆದರ ಈಗ್ಯಾಕ ನಿನ್ನ ಬೊಗಸೆ ಕಣ್ಣು
ಸಣ್ಣಾಗಿ ‘ಹೊಗೆ ನನಸಿನ’
ಕಣ್ಣೀರು ಉದುರ್‍ತಾ ಇವೆ ಶಶಿ
ಯಾಕೆ! ಗಂಡ ಬಡ ಪ್ರಾಣಿ ಅಂತಾಽ
ಅತ್ತೆ ದುಬ್ಬಾ ಕೇರೋ ಆನೆ ಅಂತಾಽ
ಹೊಗೆ ನೀರಿನೊಳಗಽ ಮೈ
ಬಿಗಿ ಹಿಡಿದ ಕೊಡಬ್ಯಾಡ
ಸ್ವಲ್ಪ ಮೈ ಮನಸ್ಸ ಝಾಡಿಸಿಕೊಂಡ
ಕಣ್ಣ ಒರೆಸಿಕೊಂಡು
ಹೊರಬಂದು ಅದೇನ ಕಾರಣ
ಅಂತಾ ನನಗ ಹೇಳ್ತಿಯ? ಶಶಿ.
*****


















