ಕಟುಕರನೂ ಕರಗಿಸುವ ಹೂ ನಗು, ಹಾಲು ಕೆನ್ನೆ ಪುಟ್ಟ ಹೆಜ್ಜೆಯ ಬೆಳದಿಂಗಳ ಮಗು: ನಕತ್ರದ ಮಿಂಚು, ಸಾಕ್ಷಾತ್ ದೇವರ ಸಂಚು. *****...

ದುಂಡಗೆ ಬಿಳಿಯಾಗಿ ಮುದ್ದುಮುದ್ದಾದ ಗೊಬ್ಬರದ ಹುಳಗಳನ್ನು ನೋಡದವರು ಯಾರು! ಇವು ಹಟ್ಟಿಗೊಬ್ಬರದಲ್ಲಿ ಹುಟ್ಟಿ ಅಲ್ಲೆ ಬೆಳೆಯುತ್ತವೆ. ಕೆಲವೊಮ್ಮೆ ಹಳೆಹುಲ್ಲು ಛಾವಣಿಯಲ್ಲೂ ಕಾಣಿಸುವುದುಂಟು. ಟಪ್ಪನೆ ಕೆಳಕ್ಕೆ ಬಿದ್ದು ವದ್ದಾಡುತ್ತವೆ. ಹೊರಕ್ಕೆ ಬ...

ಇವನು ಆಕಾಶದಾಗೆ ಇರೋ ಅಷ್ಟು ಹೊತ್ತು ಜನರೆಲ್ಲ ಇವನ ತೊತ್ತು ಬೆವರ್‍ ಸುರಿಸುತ್ತಲೇ ಇರ್‍ಬೇಕು ಎಷ್ಟು ಸುರಿಸಿದರೂ ಇನ್ನಷ್ಟು ಮತ್ತಷ್ಟು ಹಿಂಡಿ ಹೀರುವ ಇವನೊಬ್ಬ ಬೆಂಕಿ ನವಾಬ ಯಾವುದೋ ಗುಲಾಮಗಿರಿ ಕಾಲದ ಕೆಂಪು ಮೂತಿ ಸಾಹೇಬ *****...

ಸಾಸಿರ ದಳಕಮಲವೆಂದರೆ, ಸೂಸಿಕೊಂಡಿರುವ ಮನ. ಪವನವೆಂದರೆ, ಎಲ್ಲೆಡೆಯಲ್ಲಿ ಸೂಸಿ ಆಡುವಂಥಾದ್ದು. ಬಿಂದುವೆಂದರೆ, ಆಗುಮಾಡುವಂಥಾದ್ದು. ಈ ಮನಪವನಬಿಂದು, ಮೂರನು ಒಡಗೂಡಿ ನೋಡಲು ಪರಂಜ್ಯೋತಿ ಪ್ರಕಾಶವಾದಂಥ ಬೆಳಗೆ ನೆನ್ ಕಂಗಳ ಮುಂದೆ ನಿಂದಿತ್ತು. ಆ ಮಹ...

ಒಂದು ಹೂವು ಇನ್ನೊಂದು ಮುಳ್ಳು ಒಂದು ಬಾನು ಇನ್ನೊಂದು ಭೂಮಿ ಒಂದು ಹಾಲು ಇನ್ನೊಂದು ಹಾಲಾಹಲ ಒಂದು ಹುಲ್ಲು ಇನ್ನೊಂದು ಕಲ್ಲು ಒಂದು ಅಮರಗಾನ ಇನ್ನೊಂದು ಘೋಷಣ ಒಂದು ರಸಜೇನು ಇನ್ನೊಂದು ಒಣಕಾನು ಒಂದು ತಿಳಿನೀರು ಇನ್ನೊಂದು ಗೊಡಗು ಕೆಸರು ಒಂದು ಕೂಸ...

ವರ್ಷಂ ಪ್ರತಿ ಮೆರೆದು ಮೆರೆದು ಸುಸ್ತಾದ ಚಂದ್ರ ಚುಕ್ಕೆಯರು ಮಳೆಗಾಲದಲ್ಲಿ ಮೋಡಿನ ಕರ್ಟನ್‌ ಎಳೆದು ಬೆಚ್ಚಗೆ ಮಲಗಿಬಿಡುತ್ತಾರೆ ಕುಂಭಕರ್ಣನಂತೆ *****...

ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ ಹೋಗುವೆನು.  ಹಲವು ಭೂಖಂಡಗಳ ನದಿಗಳಲ್ಲಿ ಈಜಾಡುವೆನು.  ಹಲವು ನದಿಗಳ ನೀರು ಕುಡಿಯುವೆನು.  ಏಳು ಸಮುದ್ರಗಳನ್ನು ಹೊಗುವೆನು.  ತಿಮಿಂಗಿಲಗಳನ್ನು ನುಂಗುವೆನು. ನನ್ನ ಮೈಕಾಂತಿಗೆ ನಕ್ಷತ್ರಗಳು ಅಸೂಯೆಗೊಳ್ಳುವು...

ಈಗ ತಾನೆ ನೆತ್ತಿಯ ಮೇಲಿದ್ದ ಸೂರ್ಯ ಸಾಹೇಬರು ಬುತ್ತಿ ಬಿಚ್ಚುವಷ್ಟರಲ್ಲಿ ಎಲ್ಲಿ ಮಾಯವಾದರು? ಮರದ ನೆರಳಲ್ಲಿ ಕುಳಿತ ರೈತ ಯೋಚಿಸಿದ. ಸಾಹೇಬರು ಮೋಡದ ಮರೆಯ ಆಂಟಿ ರೂಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಈಗವರು ಸಿಗುವುದಿಲ್ಲ, ಅವರಿಗೀಗ ಲಂಚ್ ಬ...

ಅಯ್ಯ ನಾನು ಊರ ಮರೆದು ಆಡ ಹೋದರೆ ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು. ಉಷ್ಣ ಊರ್ಧ್ವಕ್ಕೇರಿತ್ತು. ತಲೆ ಎತ್ತಿ ನೋಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....