ಜಂಗಮವೆ ಜಗತ್ಪಾವನವಯ್ಯ! ಜಂಗಮದ ನೆನಹೆ ಲಿಂಗವಾಯಿತ್ತು. ಅವರ ತನುವೆ ಎನ್ನ ಕಾಯವಾಯಿತ್ತು. ಅವರ ದರ್ಶನವೆನಗೆ ಪರುಷವಾಯಿತ್ತು. ಆ ಪರುಷವಿಡಿದು ಮನ ಲಿಂಗದಲ್ಲಿ ಬೆರಸಿ, ಕನಸು ಕಳವಳಿಕೆ ಹೆಸರುಗೆಟ್ಟು ಹೋದವಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಸತ್ಯಲೋಕ ಬೇರೆ, ನಿತ್ಯಲೋಕ ಬೇರೆ ಎರಡನೂ ಕೂಡಿಸುವ ಅದ್ವೈತಿಯ ಮೂರ್ಖತನ ಬೇಡ ಇಲ್ಲಿ ನೀನು ಸರಿಯಾಗಿ ಬಾಳಬೇಕೆಂದರೆ ಸಿಪ್ಪಿ ಬಣ್ಣ ವಾಸನೆ ಹೊಳಪುಗಳು ಬೇರೆ ರಸ, ಬೀಜ, ಭ್ರೂಣ, ಬೇರುಗಳು ಬೇರೆ ಮಣ್ಣು, ಉಬ್ಬ ತಗ್ಗು, ನೀರಾಟ, ಏರಾಟ, ಭೋರಾಟಗಳು ಬೇರೆ...

ಕೆಂಪುಸಮುದ್ರದ ಕಡಲಿನೊಳಗಿನ ಮೀನುಗಳಿಗೆ ಮುತ್ತಿಟ್ಟ ನೆನಪು, ಮರುಭೂಮಿಯ ಬಿಸಿ ಉಸುಕಿನೊಳಗೆ ಹೆಸರು ಬರೆದು ಓಡಾಡಿದ ನೆನಪು, ಸೊಕ್ಕಿನ ಸೂರ್ಯ ಒರಟು ಕ್ಯಾಕ್ಟಸ್‌ ತರಚಿ ಉರಿಸಿದ ನೆನಪು. ಬುರ್ಕಾದೊಳಗಿನ ಕಥೆ ಕನಸುಗಳು ಹೇಳುವ ಕಣ್ಣುಗಳ ನೆನಪು, ನೈಟ...

ಚಿಟ್ಟೆಗಳನ್ನು ಹಿಡಿಯುವುದಕ್ಕೆ ಮೊದಲು ಒಂದು ಹೂದೋಟ ಬೇಕು, ಹೂದೋಟದಲ್ಲಿ ಹೂವುಗಳು ಬೇಕು, ಹೂವುಗಳಲ್ಲಿ ಚಿಟ್ಟೆಗಳು ಕೂತುಕೊಳ್ಳಬೇಕು. ಈಗ ಹೊರಡಿರಿ ಮೆಲ್ಲನೆ. ಎಷ್ಟು ಮೆಲ್ಲನೆ ಎಂದರೆ ಒಣಗಿದ ಸೊಪ್ಪುಗಳ ಮೇಲೆ ಬೆಕ್ಕು ನಡೆಯುವ ಹಾಗೆ.  ಮುಂದೆ ದೊ...

ಚಂದ್ರನಿಲ್ಲದ ಅಮವಾಸ್ಯೆ ರಾತ್ರೆ ತಾರೆಗಳು ಆಕಾಶದುದ್ದಗಲ ರಂಗೋಲೆ ಶೃಂಗರಿಸಿ ರಾತ್ರಿ ಇಡೀ ಒಂದು ಕ್ಷಣವೂ ಕಣ್ಮುಚ್ಚದೆ ಸೂರ್ಯ ಬಂದಾನೆಂದು ಎಷ್ಟು ಕಾದರು ಅವನು ಬರಲೇ ಇಲ್ಲ. ಬೆಳಗಾದ ಮೇಲೆ ಮಹರಾಯ ಬಂದಾಗ, ಕಣ್ಣು ಬಿಡಲಾಗದ ಗಾಡನಿದ್ದೆಯಲ್ಲಿದ್ದ ತ...

ನಿರ್ಮಳವಾದ ದೇಹದಲ್ಲಿ ಇನ್ನೊಂದು ಕಲ್ಪಿಸಲುಂಟೆ? ಲಿಂಗವಾದ ತನುವಿನೊಳಗೆ ಜಂಗಮದ ನೆನಹಲ್ಲದೆ, ಇನ್ನೊಂದರ ನೆನಹುಂಟೆ? ಪ್ರಸಾದವಾದ ಕಾಯದೊಳಗೆ ತನ್ನ ಪ್ರಾಣಲಿಂಗದ ನೆನಹಲ್ಲದೆ, ಇನ್ನೊಂದರ ನೆನಹುಂಟೆ? ಈ ಸರ್ವಂಗವು ಲಿಂಗವಾಗಿ, ಜಂಗಮವೆ ಪ್ರಾಣವಾಗಿ, ...

ಬರ್ರಿ ಹೀಗೇ ದೇಶಾವರಿ, ಮಾತಾಡಾಣ, ನಿಮ್ಮ ಕಡೆ ಮಳೆ ಬೆಳಿ ಹೆಂಗೆ? ಅಷ್ಟೇ! ಎಲ್ಲಾ ಕಡಿಗೂ ದೇಶಾದಾಗೆಷ್ಟು ಪಾರ್ಟಿಗಳನಾ ಇರಲಿ ನಮ್ಮೂರಗೆಳ್ಡೆ ಪಾರ್ಟಿ ನೋಡ್ರಿ ಎಂದೆಂದಿಗೂ, ನಿಮ್ಮೂರಾನ ಪಾರ್ಟಿಗಳು ಎಷ್ಟು ಮನಿ ಮುರದುವು? ಎಷ್ಟು ಬಣವಿ ಸುಟ್ಟು ಎಷ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....