ಚಂದ್ರನಿಲ್ಲದ ಅಮವಾಸ್ಯೆ ರಾತ್ರೆ
ತಾರೆಗಳು ಆಕಾಶದುದ್ದಗಲ ರಂಗೋಲೆ ಶೃಂಗರಿಸಿ
ರಾತ್ರಿ ಇಡೀ ಒಂದು ಕ್ಷಣವೂ ಕಣ್ಮುಚ್ಚದೆ
ಸೂರ್ಯ ಬಂದಾನೆಂದು
ಎಷ್ಟು ಕಾದರು ಅವನು ಬರಲೇ ಇಲ್ಲ.
ಬೆಳಗಾದ ಮೇಲೆ ಮಹರಾಯ ಬಂದಾಗ,
ಕಣ್ಣು ಬಿಡಲಾಗದ ಗಾಡನಿದ್ದೆಯಲ್ಲಿದ್ದ
ತಾರೆಯರಿಗೋ ಅವನು ಕಾಣಲೇ ಇಲ್ಲ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)