ಕಸಕಿಂತ ಕಡೆಯಾಯ್ತೆ ಹೆಣ್ಣು ಜನ್ಮವು ನಿನಗೆ ಈ ಭಾರ ಹೊರಿಸುವುದಕೆ ಲಂಚಕೋರನು ನೀನು ವಂಚನೆಯ ಮಾಡಿರುವೆ ಮೃದುತನದ ಸ್ತ್ರೀವರ್ಗಕೆ ಗಿಡವೆಂದು ಬಗೆದೆಯೋ ಹೆಣ್ಣು ಜನ್ಮದ ಒಡಲ ಫಲಗಳನು ಸೃಜಿಸುವುದಕೆ ಕವಣೆ ಕಲ್ಲೋ ನಿನ್ನ ಮಾನಸವು ಎಲೆ ದೇವ ಈ ಕ್ರಮವೆ ...

ಸಾವಿರ ಬಗಯಲಿ ಸಾಗುತಿದೆ ಸ್ವಾತಂತ್ರ್ಯದ ಲಾಸ್ಯ, ಬಾನು ಬುವಿಯೂ ಬರೆಯುತಿವೆ ಸಿರಿಬೆಳಕಿನ ಭಾಷ್ಯ. ಒಣಗಿದ ಮರದಲಿ ಸಾಗುವ ಚೈತ್ರನ ಚಿಗುರಿನ ದಾಳಿಯಲಿ, ಮುಗಿಲ ಬಾಗಿಲ ಸರಿಸಿ ಸುರಿಯುವಾ ನಿರ್ಮಲ ಧಾರೆಯಲಿ, ಕಾಷ್ಠದ ಸೆರೆಯಲ್ಲಿ ಕುದಿಯುತ ಮರೆಯಲ್ಲಿ ...

ನೀವೂ ಆಗಬೇಕೇ ಒಬ್ಬ ಕೆ.ವಿ.ಸುಬ್ಬಣ್ಣ ಹಾಗಿದ್ದರೆ ನಾಹೇಳೋದನ್ನ ಕೇಳಿ, ಭಾಷಣ, ಬರವಣಿಗೆ, ನಾಟಕ, ಬಣ್ಣ ಗಿಣ್ಣ, ಅವೆಲ್ಲ ಅನಂತರ ಮೊದಲು ರಂಗಿನ ಬಟ್ಟೆಯ ಸಂಚಿಯಿಂದ ಒಂದೊಂದಾಗಿ ತೆಗೆದು ಕೈಯಲ್ಲಿ ಸೇರಿಸಿಕೊಳ್ಳಿ ವೀಳೆದೆಲೆ, ಅಡಿಕೆ, ಒಂದಿಷ್ಟು ಸುಣ...

ಯಾಕೆ ಹಡೀಬೇಕು ಇವರನು ಯಾಕೆ ಹಡೀಬೇಕು || ಹೆತ್ತೂ ಹೊತ್ತು ತೊಳೆದೂ ಬಳಿದೂ ಮುದ್ದಿಸಿ ಹೊದ್ದಿಸಿ ಊಡಿಸಿ ಉಣ್ಣಿಸಿ ಸಾಕೀ ಬೆಳೆಸೀ ನೂಕಿಸಿಕೊಳ್ಳಲು || ಯಾಕೆ ಹೇಳಿದ ಮಾತನು ಕೇಳದೆ ಇದ್ದರು ಹಡೆದವರನ್ನು ಸುಮ್ಮನೆ ಬಿಡದೆ ಗದರಿಸಿ ಬೆದರಿಸಿ ಕುತ್ತಿಗ...

ಎಲ್ಲಿ ಅರಿವಿಗೆ ಇರದೊ ಬೇಲಿ ಎಲ್ಲಿ ಇರದೋ ಭಯದ ದಾಳಿ ಅಂಥ ನೆಲ ಇದೆಯೇನು ಹೇಳಿ? ಸ್ವರ್ಗವನು ಅದರೆದುರು ಹೂಳಿ ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಬೀಸುವುದೋ ನೆಮ್ಮದಿಯ ಗಾಳಿ-ಎಲ್ಲಿ ಸ್ವಾತಂತ್ರ್ಯ ನಗುತಲಿದೆ ಅಲ್ಲಿ ಕಣ್ಣೋ ಹಿಗ್ಗಿನಾ...

ಹಿರಿದು ಯಾವುದೇ ಇರಲಿ-ಅದನು ನರೆಯುವ ದೇಶ ನನ್ನದು, ಎಲ್ಲ ದಿಕ್ಕಿನ ಬೆಳಕಿಗು ಬಾಗಿಲ ತರೆಯುವ ದೇಶ ನನ್ನದು. ತನ್ನದಲ್ಲದ ಅನ್ಯಧರ್ಮಗಳ ಮನ್ನಿಸಿದಾ ನೆಲ ನನ್ನದು, ಸಕಲ ಧರ್ಮಗಳ ಸಾಕಿದ ತಾಯಿ ಸನಾತನ ದೇಶ ನನ್ನದು. ದೇವಾಲಯದ ಗರ್ಭಗೃಹದ ಹಣತೆಯ ಬೆಳಕಿ...

ಆಟವಾಡಿ ಸಾಕಾಯ್ತೆ? ಸರಿ ಸರಿಸಿ ಬಿಡು ಪಕ್ಕಕ್ಕೆ ಹರಿದವು ಮುರಿದವು ಬಣ್ಣ ಮಾಸಿದವು ನುಡಿದ ನನ್ನಿಯ ಮಾತು ಕುಣಿದು ಹಾಡಿದ ಹಾಡು ಹಂಚಿಕೊಂಡ ಹಾಲುಗೆನ್ನೆಯನುಭವ ಕಟ್ಟಿಕೊಂಡ ಹಸಿ ಕನಸು ಇರಲಿ ಮಾಸದಂತೆ ಎಂದಾದರೊಮ್ಮೆ ಎತ್ತಿಕೊಂಡಾಗ ಮಗುವಿನಂತೆ ಮೆತ್...

ಸುತ್ತ ಹಬ್ಬುತಿದೆ ತುಳಸೀ ಪರಿಮಳ ಸಣ್ಣಗೆ ಗೆಜ್ಜೆ ದನಿ, ಕೋಗಿಲೆ ಉಲಿಯೋ ಕೊಳಲೊ ಕಾಣೆ ಮೋಹಕ ಇನಿಯ ದನಿ. ಹಗಲಿನ ಧಗೆಯಲಿ ನೀಲಿಯ ಮುಗಿಲು ಇಣುಕಿ ಹಾಯುವಂತೆ ಯಾರದೊ ನೆರಳೋ ಹೊಂಚಿ ಆಡುತಿದೆ ಗುರುತೇ ಕೊಡದಂತೆ. ಇಲ್ಲೇ ಗಿಡಮರ ಪೊದೆಗಳ ಮರೆಗೆ ತಿಳಿಯದ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....