
ನೋಡಲ್ಲಿ ತಲೆಬುರುಡೆ ನೆಲದ ಮೇಲಲ್ಲಿ ! ಆಗಿಹುದು ಗೋಲ್ ಚಂಡು ಗೊಲ್ಲ ಬಾಲರಿಗೆಲ್ಲ. ಬೆಳೆದು ಬಾಳಿಹ ಅಸ್ತಿ ಅದೋ ನಾಯ ಬಾಯಲ್ಲಿ ! ಒಲವು ಗೆಲವಿನ ಬಾಳು ಮೂಕವಾಗಿಹುದಲ್ಲ ! ಓ ವೀರ ಕಾಣಿದೋ ಜೀವನಾಂತ್ಯವಿದೆಲ್ಲ ! ಆಗೋ ಆ ಗೋರಿ ಬರಿಯ ಸುಣ್ಣದ ಮಾರಿ !...
ಕೆಳದಿ ಕೇಳೆನ್ನೊಲವಿನಾ ಗಾಥೆಯ ಕಣ್ಣದೀಪ್ತಿಯಿನಿಯನೊಲಿಸಿದಾ ಪರಿಯ ಮೂಡಲದರುಣಗಿರಿ, ಪಡುವಲದ ಶಶಿಶಿಖರ, ಪಂಚ ಭೂತಗಳಲೆಲ್ಲ….. ನನಗೊಲಿದವನ ರೂಹು, ಲತೆ ಲತೆಗಳಲರಲರು, ಸುಮ ಸುಮದ ಘಮದಲ್ಲಿ, ಸೊಗಸ ಕನಸಿನಿನಿಯನ…. ರೂಪ…. ತೇಜರಾ...
ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ. ಗಾಳಿ ಮಳೆ ಚಳಿ...
ಮರಗಳೆಲೆಗಳ ನಡುವೆ ತೂರಿ, ಅಲೆಗಳ ಮೇಲೆ ಬೆಳ್ಳಿಯೆರಕವ ಹೊಯ್ದ ಚಂದಿರನ ಬೆಳಕಿನಲಿ ತೊರೆಯ ಹೃದಯವು ಅರಳಿ, ಚಿಮ್ಮಿ, ಕುಣಿಯುವಹಾಗೆ ಮನಸು ಕುಣಿಯುತಲಿಹುದು ನಿನ್ನ ನುಡಿ ನನಸಿನಲಿ ನಾ ಮುಂದೆ ಸಾಗುತಿರೆ! ಹಿಗ್ಗಿನಲಿ ಕುಣಿಯುತ್ತ, ನಿನ್ನ ಕಂಡೊಡನೆನ್ನ...
ಎಲ್ಲಿ ಹೋದಳು ಕತೀಜ, ನನ್ನ ಮಗಳು ಮೀನು ತರುತ್ತೇನೆಂದು ಹೋದವಳು ಬೇಗನೆ ಬರುವೆ ಎಂದವಳು? ಸಂಜೆಯಾಯಿತು ಕೊನೆಯ ಬಸ್ಸೂ ಹೊರಟು ಹೋಯಿತು ಏನು ನೋಡುತ್ತ ನಿಂತಳೊ ಏನೊ- ಸಂತೆಯ ದೀಪಗಳಲ್ಲಿ ಹೊಳೆಯುವ ಬಣ್ಣದ ಲಂಗ ಪೇಟೆಯವರು ಹಾಕುವಂಥ ಚಪ್ಪಲಿ ಹೊಸ ನಮೂನೆ...













