
ಮೊದಮೊದಲೆಲ್ಲ ಈ ಮೋಡಗಳೊಳಗೆ ಬರೀ ಕಾವಿಧರಿಸಿ ಕಮಂಡಲ ಹಿಡಿದು ಋಷಿ ಮುನಿಗಳ ಸಮೂಹವೇ ಬಂದಂತಾಗಿ ಭೂ ಲೋಕದವರಿಗೆ ನೀರು ಸಿಂಪಡಿಸಿ ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು- ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ- ತತ್ವ ಚಿಂತನೆಗಳ...
ತಾರೆಯ ಚಿತ್ತಾರದ ಇರುಳಿನ ಹಸೆ ಕನಸಿನ ಆರತಿ ಆನಂದದ ದೆಸೆ ಕಳೆಯುತ ಕೂಡಿರೆ ಕಾಲದ ಉಡಿ ಕಿಸೆ, ನಸುಬೆಳಕಲಿ ಮುತ್ತಿತು ಚಂದ್ರನ ರಾಹು! ಹಗಲುದಯಕೆ ಕೈದಾಳವನುರುಳಿಸಿ, ಇರುಳಿನಳಿವಿಗೆ ರಕ್ತವ ಹೊರಳಿಸಿ, ದುಗುಡದ ಮೋಡದ ಕೆಂಪೆದೆ ಕೆರಳಿಸಿ, ನಸುಬೆಳಕಲಿ...
ಗರ್ಭಗುಡಿಯ ಕತ್ತಲು ಜಡಿದ ಬಾಗಿಲ ಬೀಗ ಶಿವನು ಆಗಿಹನೆ ಅಲ್ಲಿ ಬಂಧಿ ವಿಶ್ವ ಕರ್ತನ ತಂದು ಗುಡಿಯ ಬಂಧನವಿಟ್ಟು ಮೆರೆದ ಮೌಢ್ಯವು ಮನುಜ ಬುದ್ಧಿ ಹಲವು ನಾಮದ ಒಡೆಯ ಸಕಲ ಸೃಷ್ಟಿಯ ಸುಧೆಯ ಹರಿಸುವಾತಗೆ ಬೇಕೆ ಒಂದು ಮನೆಯು ಜೀವ ಜೀವದ ಒಳಗೆ ಹುದುಗಿರುವ ...













