ಮಾಡಿದಷ್ಟೂ ಮುಗಿಯದೆ ಬಾಕಿ ಇನ್ನೂ ಉಳಿದಿದೆ ಜೀವನದ ಕೆಲಸ ಅಲ್ಲಿ ಅಷ್ಟು ಇಲ್ಲಿ ಇಷ್ಟು ಅದು ಹಾಗೆ ಇದು ಹೀಗೆ ಯಾವುದೊಂದೂ ಮುಗಿಯದೆ ಜೀವನದ ಕೆಲಸ ಕೊಟ್ಟ ಮಾತುಮಾತಲ್ಲೆ ಹೊರಟ ಕಾರ್ಯ ಹೊರಟಲ್ಲೆ ಇವನ್ನೆಲ್ಲ ಒಟ್ಟು ಸೇರಿಸಿ ರೂಪ ಕೊಡುವುದೆಂದು ಇವಕ್...

ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ ಕುಣಿತ ನನ್ನ ಶಾರದೆಗೆ ಪ್ರೀತಿ ಕರ್‍ನಾಟಕ ಸಂಗೀತ ಇಂದು ಅವಳಿಗೆ ಪ್ರೀತಿ ಕನ್ನ...

ಕೃಷ್ಣನ ಕತೆಯನ್ನು ನಂಬದೇ ಇರುವವರಿಗೂ ನಂಬುವಂತೆ ಮಾಡುವ ಕೆಲವರಿ ರುತ್ತಾರೆ, ಇವರು ಪದ್ಮ ಪತ್ರ ಮಿವಾಂಭಸ, ತಾವರೆ ಎಲೆಯ ಮೇಲಿನ ನೀರು, ಅಂಟಿಯೂ ಅಂಟ ದಿರುವ ಇವರು ಹಿಡಿಯಲೂ ಬಲ್ಲರು ಬಿಡಲೂ ಬಲ್ಲರು, ಎಲ್ಲರೂ ಇವರನ್ನು ಬೈಯಲೂಬಹುದು ಹೊಗಳಲೂ ಬಹುದು...

ಕೊಟ್ಟದ್ದು ಪಾಷಾಣವಲ್ಲ ಪ್ರೀತಿ….. ತುಂಬಿದೆ, ತುಳುಕಿದೆ ತೊರೆದು ಭೀತಿ ಇನ್ನು ಕಾಯಲಾರೆ ನಿನಗಾಗಿ ಸಾಯಲಾರೆ ಒಂದು ಯುಗವೇ ನಮ್ಮಿಬ್ಬರ ನಡುವೆ ಇದ್ದು ಹೋಗಲಿ ಇಲ್ಲ…. ನನಗೇನೂ ಇಲ್ಲ ನಿನ್ನನ್ನು ಕಾಣುವ ಬಯಕೆ ನಾಕು ರಸ್ತೆ ಕೂಡುವಲ್ಲ...

ನರಜನ್ಮ ದೇವರು ಕೊಟ್ಟ ಸದವಕಾಶ ಬಹಳ ಎಚ್ಚರದಿಂದ ಇದನ್ನು ಅನುಸರಿಸು ಬೆಳ್ಳಗಿದ್ದುದೆಲ್ಲ ಹಾಲಲ್ಲ ಮನುಜ ನಿತ್ಯ ನಿನ್ನ ಹೋರಾಟದಲ್ಲಿ ಪಾಪ ಬೀಜ ಮನಸ್ಸು ಒಂದು ಕ್ಷೀರಾಮೃತ ಹಾಗೆ ಅದರಲ್ಲಿ ಶರೀರವೆಂಬ ಮಧು ಬೆರೆಸು ಪರಮಾತ್ಮನೈವೇದ್ಯಕ್ಕೆ ಅರ್ಪಿಸಬೇಕು...

ನಾವನ್ನುತ್ತೇವ ವೇದಾಂತಿಗಳಂತೆ ನಮ್ಮ ಜೀವನದ ಹರಿಕಾರರು ನಾವೇ ಎಂದು, ಬೀಗುತ್ತೇವೆ ಯಾರ ಕೈವಾಡವೂ ಅಲ್ಲಿಲ್ಲ ಎಂದು. ಕಾಣದಿರುವ ಕೈಯದೊಂದು ನಮ್ಮ ಕತ್ತಿಗೆ ದಾರ ಹಾಕಿ ಎಳೆಯುವಾಗ ಅದು ಎಳೆದಂತೆ ನಾವು ಕುಣಿಯುವಾಗ ನಾವನ್ನುತ್ತೇವ ಸ್ಥಿತಪ್ರಜ್ಞರಂತೆ ...

ಒಲಿದ ಮನಗಳ ಮಿಲನಕಿಲ್ಲ ತಡೆ, ಇದೆಯೆನಲು ಒಪ್ಪುವವ ನಾನಲ್ಲ. ಒಲವು ಒಲವೇ ಅಲ್ಲ ಮತ್ತೊಂದಕೆಂದು ಹೊರಳಿದರೆ, ಇಲ್ಲವೆ ಒಂದು ಬದಲಿತೆಂದಿನ್ನೊಂದು ಕದಲಿದರೆ. ಛೆ, ಇಲ್ಲ ಬಿರುಗಾಳಿಯಲ್ಲು ಕಂಪಿಸದೆ ನಿಲ್ಲುವುದು ಅದು ಸ್ಥಿರವಾದ ಜ್ಯೋತಿ, ಕಡಲಲ್ಲಿ ಕುರ...

ಒತ್ತಿಬಹ ಕಷ್ಟಗಳನೆಲ್ಲ ಹಿಂದಿಕ್ಕೆಂದು ಸೌಖ್ಯಸಾಗರದಲ್ಲಿ ಮೀಯಿಸೆಂದು ಬೇಡಿಕೊಳ್ಳುವದಿಲ್ಲ ಎದುರಿಸುವ ಧೈರ್ಯವನು ನೀಡೆಂದು ಬೇಡುವೆನು ಕರುಣಸಿಂಧು ನೋವುಗಳ ಮುಳ್ಳುಗಳು ಎದೆಗೆ ಚುಚ್ಚುತಲಿರಲು ತೆಗೆಯೆಂದು ಬೇಡುವೆನೆ ಓ ಅನಂತ ತಡೆದುಕೊಳ್ಳುವ ಕಸುವ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...