ಗೋವೆಯ ಕಡಲಿಂದ ಎದ್ದು ಬಂದ ಜಲದೇವತೆ ನೀ ನೀಲ ಸುನೇತ್ರೀ ಮಿಥಿಲಾ ನಗರದ ವರಪುತ್ರೀ || ಬಂದಿಹೆ ನೀ ಹೊಸ ಬಾಳನರಸಿ ಆಗುವೆ ನೀ ಎನ್ನ ಬಾಳಿನ ಅರಸಿ | ಸ್ವಾಗತ ನಿನಗೀ ಚೆಲುವಿನ ನಾಡಿಗೆ ಕಲೆಗಳ ತೌರಾದ ಕನ್ನಡ ನಾಡಿಗೆ ||೧|| ಕವಿಗಳು ಹಾಡಿದ ಕನಸಿನ ಹಾ...

ಸಂತೋಷದ ಕಡಲಲ್ಲಿ ತೇಲಾಡುತಿರಲು ನಾವು ನಗುವಿನ ಜೊತೆ ಕಣ್ಣೀರು ಬರುತಿರಲು ಅದುವೇ ಆನಂದ ಬಾಷ್ಪ. ದುಃಖದ ಒಡಲಲ್ಲಿ ಒದ್ದಾಡುತಿರಲು ನಾವು ಅಳುವಿನ ಜೊತೆ ಕಣ್ಣೀರು ಬಾರದಿರಲು ಅದುವೇ ಮಡುಗಟ್ಟಿದ ಶೋಕ. *****...

ಎಚ್ಚರಾದ ಎಷ್ಟೋ ಹೊತ್ತಿನ ಮೇಲೆ ತೊಡೆಯಲ್ಲಿ ಜೀವಾಡುವ ಗೊಂಬೆ. ಗಾಜಿನೆರಕ ಹೊಯ್ದು ತೆಗೆದದ್ದೋ? ಸ್ಪಟಿಕದ್ದೋ? ಸ್ಪರ್ಶಕ್ಕೆ ನಿಲುಕದ ಬೆರಗು ಇದೇನಿದು? ಪಕ್ಕೆಗಳೆರಡಕ್ಕೆ ಅಂಟಿಕೊಂಡಂತೆ ಕಂಡೂ ಕಾಣದಂತಾ ಎಳಸು ರೆಕ್ಕೆ? ನೆತ್ತಿಯ ಮೇಲೆ ಕೂದಲೊಂದಿಗೇ...

ಇಂಬಾಗಿ ನಗುನಗುವ ಮುಂಬಿಸಿಲ ಮೋರೆಯಲಿ, ಅಂಬುಜ ಸಖಂ ಬಂದನಂಬರದಲಿ, ತುಂಬಿದ್ದ ಬಲು ಕತ್ತಲೆಂಬ ಕಂಬಳಿ ಕಳಚಿ ಚೆಂಬೆಳಕ ಹಾಸಿನಿಂದುಪ್ಪವಡಿಸಿ. ಸಂಜೆ ನಿದ್ದೆಯನುಳಿದು ರಂಜಿಸುವ ಮೊಗ್ಗುಗಳು ಮಂಜಿಡಿದ ತುಟಿ ತೆರೆದು ನೋಡುತಿಹವು; ಕಂಜಾಪ್ತ! ನಿನ್ನನೀ ...

ದುಡಿದು ಗಳಿಸಿರ್‍ಪನ್ನ ಪಕ್ಕದೊಳಿರ್‍ದು ಬಡತನ ದೂರದೂರದ ಸೂರೆಯುದ್ಯೋಗಿಗೆಲ್ಲ ಸಿರಿತನ ದೈನ್ಯವಲಾ ಎಸೆದ ಬಿಸ್ಕತ್ತಿಗೆಳಸುವ ಶ್ವಾನ ದಂತೆಮ್ಮ ರೈತರ ಪಾಡು ದುಡ್ಡನಾಘ್ರಾಣಿಸುತಿರಲ್ ಧರೆ ಸತ್ತ್ವಗಳಂತೆ ಸೂರೆ ಹೋಗುತಿದೆ ಅಧಿಕ ಇಳುವರಿಗೆ – ವ...

ರಾಜಕಾರಣವೆಂದರೆ ಏನೆಂದುಕೊಂಡಿರಿ ವಿನಾಕಾರಣ ಹೊಡೆದಾಟ ಬಡಿದಾಟ ದೊಂಬರಾಟ ಕಣ್ಣು ಹಾಯಿಸಿ ತಿಹಾಸದತ್ತ ಗದ್ದುಗೆಯೇರಲು ಅನಿವಾರ್ಯ ಕೊಲೆ, ಸುಲಿಗೆ ರಕ್ತಪಾತ ಚಾಣಕ್ಯನ ನೀತಿತಂತ್ರ ಹಣ ಅಧಿಕಾರ ದಾಹಕ್ಕೆ ಮುಗ್ಧ ಪ್ರಾಣಗಳ ಬೆಲೆ ಮಾನವೀಯ ಸಂಬಂಧಗಳು ಬತ್...

೧ ಆಕಳು ಅಂಬಾ ಅನ್ನುತಿದೆ! ಕರುಗಳ ಮುಖಗಳ ನೋಡುತಿದೆ! ಕಂಬನಿಗಳ ಸಲೆ ಸುರಿಸುತಿದೆ! ಹುಲ್ಲನು ಹಾಕಿರಿ ಅನ್ನುತಿದೆ! ೨ ಆಕಳು ಅಂಬಾ! ಅನ್ನುತಿದೆ! ಆಕಾಶದಕಡೆ ನೋಡುತಿದೆ! ಹಿಂಡಿಸಿಕೊಳ್ಳುತ ಹಲುಬುತಿದೆ! ಕಣ್ಣಿಯನುಚ್ಚಲು ಕೋರುತಿದೆ! ೩ ಆಕಳು ಅಂಬಾ!...

ಒಂದು ದೀರ್ಘ ಮಳೆಗಾಲದ ಸಂಜೆ ಹೆದ್ದಾರಿ ಹಾವಿನಂತೆ ಫಳಫಳ ಹೊಳೆಯುತ್ತಲಿದೆ. ಒಂದು ಖಚಿತ ಧ್ವನಿಯಲ್ಲಿ ಕತ್ತಲೆ ನನ್ನ ಕಿಟಕಿಯ ಹಾಯ್ದು ಬಂದಿದೆ. ಮೈ ಕೊರೆಯುವ ಚಳಿಯ ಮಬ್ಬಿನಲಿ ಒಲೆಯು ನೀಲಿ ಜ್ವಾಲೆಯ ಉಗುಳುತ್ತಿದೆ. ಮತ್ತು ಚಹಾ ಕುದಿಯುತ್ತಿದೆ. ಆಗ...

ನಮ್ಮ ದೇಶ ಭಾರತ ನಮ್ಮ ತಾಯಿ ಭಾರತಿ ನಾವು ಬೆಳಗುವೆವು ಅವಳಿಗಾರತಿ ಭಾವೈಕ್ಯಗಾನವೆ ಇವಳ ಕೀರುತಿ ಭರತ ಖಂಡ ನಮ್ಮಖಂಡ ಭೂಗೋಳ ವಿಜ್ಞಾನ ಅಖಂಡ ಚರಿತ್ರೆ ಪರ್‍ವಗಳ ವಿಶ್ವಚೇತನ ಮನ ಮಿಡಿಯುವ ನವನಿಕೇತನ || ಸಹಸ್ರ ವೀರ ಬಾಹುಬಲಿಗಳ ಖಡ್ಗ ವೀರ ಕಲಿಗಳ ತ್...

ಪ್ರಪಂಚವೆಲ್ಲ ಒಂದು ಕನ್ಸು ಪರಮಾತ್ಮ ಸೃಷ್ಟಿಸಿದ ಮಾಯೆ ಜೇಡರ ತಂತುವಿನಂತೆ ಇದರ ರೂಪ ಇದನ್ನು ಆಡಿಸುವಾತ ಮಾತ್ರ ಪರೋಕ್ಷ ನಿಯಮ ಚೌಕಟ್ಟುಗಳೇಕೆ ನಿನಗೆ ನಾಳೆಯ ಚಿಂತೆಗಳೇಕೆ ನಿನಗೆ ಸೃಷ್ಟಿಕರ್ತ ಇದೆಲ್ಲ ಸೃಷ್ಟಿಸಿದಾತ ಅವನಿಗೆ ಶರಣಾದರಾಯ್ತು ಅವನಿಗ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...