ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ- ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು, ಶಿಷ್ಯ, ಪ್ರೀತಿಯ ಚಾತಿಗಾರ! ಎಲ್ಲಿರುವೆ ರಸ- ಸಿದ್ಧ ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು ತುಕ್ಕರಿಯದಿದ್ದ ಮೈಕವಚ...

ಅಡುಗೆಯೊಳಿರಲಿ ರುಚಿಗಷ್ಟು ಗಮನ ಜೊತೆ ಗೂಡಿ ದೇಶಕಾಲದೊಳಡಗಿರ್‍ಪಾರೋಗ್ಯ ದೆಡೆಗಿರಲಿ ಸರಿ ಮಿಗಿಲು ನಮನ ತುಡುಗಿನಡುಗೆಗಾರೋಗ್ಯದಡಿಸುಡಲು ಹೂಡಿದೆಲ್ಲ ಸಮಯ ಸಂಪದ ವ್ಯರ್‍ಥ – ವಿಜ್ಞಾನೇಶ್ವರಾ *****...

ಬಾಸೆ ಕಲಿಯದೇ ಮೋಸವಾಯಿತೂ ಇಂಗಲೀಸೂ ಬಿಂಗಲೀಸು || ೧ || ಗೋ ಡೆಗೆ ಇಂಗಲೀಸೂ ಮಾಡಿಗೆ ಇಂಗಲೀಸೂ ಮೋಟರಿಗೆ ಇಂಗಲೀಸೂ ಬ್ಯಾಟ್ರಿಗೆ ಇಂಗಲೀಸೂ || ೨ || ಬಾಸೆ ಕಲಿಯದೇ ಮೋಸವಾಯಿತೂ ಚಕ ಮಾಡವರ ಬಾಜಿಗೆ ಇಂಗಲೀಸೂ || ೩ || ಚಕ ಮಾಡವರ ಬಾಜಿಗೆ ಇಂಗಲೀಸೂ ಇ...

ಧ್ಯಾನ ಧ್ಯಾನ ನಿನ್ನ ದಿವ್ಯಧ್ಯಾನ ನಿನ್ನೊಂದೆ ಸ್ಮರಣಿ ನನ್ನ ಜ್ಞಾನ ಬಣ್ಣ ಬಣ್ಣದ ನೋಟ ಎನಿತೆನಿತು ಬೆಂಕಿ ಕಿಡಿಗಳಾಗಿ ಬಾಳಿನ ಅಜ್ಞಾನ ಹುಡುಕಾಟ ಹುಡುಕಾಟ ನಿತ್ಯವು ಯಾವುದನ್ನು ಪಡೆಯಲೊ ಕಾತರ ಅನೇಕ ಜನುಮಗಳ ಸ್ವಾನುಭವ ಮನಕ್ಕೆ ಅಂತಲೆ ಚಂಚಲ ಅತೀ ...

ದಾನವಹೃತ ಮೇದಿನಿಯಂ ದಂಷ್ಟಾಗ್ರದೊಳಿರಿಸಿ, ಭೂದಾರಂ ಪಾತಾಳವ- ನುಳಿದೆದ್ದನೋ ಎನಿಸಿ, ದೂರದಿಗಂತದೊಳೊಪ್ಪಿದೆ- ರವಿ ಮಂಡಿತ ಶೃಂಗಂ, ನೀಲಾಚಲಮುದ್ದೀಪಿತ ಪೂರ್ವೋದಧಿಸಂಗಂ. ಕನ್ನೆಯ ನಿದ್ದೆಯು ಸಡಿಲಲು ಮುತ್ತಿಟ್ಟನೋ ಧೀರಂ! ಹೊಲ್ಲಳ ಶಾಪಂ ತೊಲಗಿತೊ ಬ...

ಒಂದಂಬು ತಿಂಗಳಿಗಿ ಒಂದೇನ ಬಯಸ್ಯಾಳ| ಅಂಗೈಯಲುಪ್ಪಾ ಎಳೆಹುಣಸಿ ||೧|| ಎರಡಂಬು ತಿಂಗಳಿಗಿ ಎರಡೇನ ಬಯಸ್ಯಾಳ| ಎರಡೆಲಿಗೊಂಡ ಎಳಿಮಾವ ||೨|| ಮೂರಂಬು ತಿಂಗಳಿಗಿ ಮೂರೇನ ಬಯಸ್ಯಾಳ| ಮೂಡಽಲ ದಿಕ್ಕಿಽನ ಮಗಿಮಾವ ||೩|| ನಾಕಂಬು ತಿಂಗಳಿಗಿ ನಾಕೇನ ಬಯಸ್ಯಾ...

ರಾಗ ಭೈರವೀ-ತ್ರಿತಾಲ (‘ಪತಿತೋದ್ಧಾರಿಣಿ ಗಂಗೇ’ ಎಂಬ ಬಂಗಾಳೀ ಹಾಡಿನಂತೆ) ಜಯ ಜಯ ತೌಳವ ತಾಯ ||ಪಲ್ಲ|| ಮಣಿವೆ ತಂದೆತಾಯಂದಿರ ತಾಯೇ, ಭುವನದಿ ತ್ರಿದಿವಚ್ಛಾಯೇ ||ಅನು|| ಭಾರ್ಗವನಂದು ಬಿಸುಡೆ ಕೊಡಲಿಯ ನೀ ಕಡಲೊಡೆದೆಡೆಯಿಂ ಮೂಡಿ, ಭಾ...

ಕನ್ನಡಾಂಬೆ ಎಲ್ಲಿರುವಳೊ ಅಣ್ಣ ಕರ್ನಾಟಕದಲ್ಲಿ ದಿಕ್ಕು ದಿಕ್ಕಲೂ ಹುಡುಕಿದರಲ್ಲ ಕಾಣೆಯಾದಳೆಲ್ಲಿ? ಬೆಂಗಳೂರಲಿ ಸುತ್ತಿ ನೋಡಿದೆ ಕಡತಗಳಲ್ಲಿ ಕಣ್ಣಾಡಿಸಿದೆ ವಿಧಾನಸೌಧ ಮೆಟ್ಟಿಲೇರಿದೆ ಎಲ್ಲು ಕಾಣಲಿಲ್ಲ. ನಾಡಗೌಡ ಆ ಕೆಂಪೇಗೌಡ ಅವನ ಕೂಡ ನಾ ತೋಡಿದೆ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...