ಮೋಡಿ ಹಲವು ಮಾಯೆ ಹಲವು ಮೋಡಿಕಾರನೊಬ್ಬನೇ ಮಾಯಕಾರನೊಬ್ಬನೇ ಚಿತ್ರ ಹಲವು ಬಣ್ಣ ಹಲವು ಚಿತ್ರಕರನೊಬ್ಬನೇ ಎಂಥ ಚಿತ್ರ ರಚಿಸುತಾನೆ ಬಾನಿನಂಥ ಮೋಡದಂಥ ಬೆಟ್ಟದಂಥ ಕಣಿವೆಯಂಥ ಹೂದೋಟದಂಥ ವನದಂಥ ಸೂರ್‍ಯೋದಯ ಸೂರ್‍ಯಾಸ್ತ ಬೆಳಗು ಬೈಗು ಸಂಧ್ಯೆಯಂಥ ಅದ್ಭು...

ಜಗವೆ ಯಾತ್ರಿಕನಾಗೆ ಚೆಲುವ ದೇವಿಗೆ ಹರಸಿ, ಚೇತನದ ಸೌಂದರ್ಯದೀಪ್ಸಿತವ ಸಲಿಸುವೀ ಪಾತದದ್ಭುತ ಭೀಮಕಾಂತ ಕಮನೀಯತೆಗೆ ಬಗೆ ಸೋತುದಂತಿರಲಿ, ಕಣ್ಣಾಸೆ ಮಿಕ್ಕಿರಲಿ; ಆಲಿಸಾದೊಡೆ, ಕೆಳೆಯ, ನಿನ್ನಾತ್ಮವರಳುವೊಡೆ, ಈ ನದಿಯ ಚಿತ್ರತರ ಭ್ರಗುಪತನ ಘೋಷವನು- ಮ...

ಶಾಂವಽಕ್ಕಿ ಕುಟ್ಟಂದ್ರ ಶರಽಗ್ಹಾಸಿ ಮಲಗ್ಯಾಳ| ಎಬಸಣ್ಣ ನಿನ್ನ ಮಡದೀನ| ಸೂವಯ್ಯಾ ||೧|| ಮಡದೀನ ಎಬಸಿದರ ಅರಸನಿದ್ದಿ ನಾದಾನ| ಎರಡೊಬ್ಬಿ ಮಾಡಿ ಥಳಸವ್ವಾ| ಸೂವಯ್ಯಾ ||೨|| ಎರಡೊಽಬ್ಬಿ ಮಾಡಿದರ ಕರಡಕ್ಕಿನಾದಾವ| ಕರಡಕ್ಕಿ ಜ್ವಾಳ ನುರಿಯಽವ| ಸೂವಯ್ಯ...

ನನ್ನನರಿಯದೆ ನಿನ್ನನರಿಯಲಳವಲ್ಲ, ನನ್ನ ಕಾಣದ ಮುನ್ನ ಕಾಣೆ ನಾ ನಿನ್ನ ನೆಂದು ಸಾರುವುವೈಸೆ ಧರುಮಂಗಳೆಲ್ಲ- ಆದೊಡಾಂ ಕಾಂಬೆನೆಂತರಿವೆನೆಂತೆನ್ನ? ೪ ೨ಕಡೆಮುಗಿಲ್ವರಮೆನಿತೊ ಕಣ್ಣಾಲಿ ದೂರಂ ನೋಡಬಲ್ಲಡೆ, ನೋಡಬಲ್ಲುದೇಂ ತನ್ನ? ಸುರಿಸಬಲ್ಲಡೆ ಸರಿಗೆಯಿ...

ಮುಗಿಲೇರಿದ ಸಿರಿಗನ್ನಡ ಬಾವುಟ ಹಾರಲಿ ಮೊದಲು ಎದೆಯಲ್ಲಿ ಚರಿತೆಯ ಪಡೆದಿಹ ಕನ್ನಡ ರಥಕೆ ಹೊಸ ಹಾದಿಯನು ತೋರುತಲಿ ಮಲಗಿದ ಮನಗಳು ಎಚ್ಚರವಾಗಲಿ ಕನ್ನಡ ಮೈತಾಳಿ ಭವಿಷ್ಯ ಕಾಣದ ನೆಲಜಲ ಕಾಯಲು ಅಭಿಮಾನವ ಚೆಲ್ಲಿ ಎದ್ದಿಹ ಕನ್ನಡ ವಿರೋಧಿ ಸದ್ದನು ಅಡಗಿಸಿ...

ನನ್ನ ಹಾಡಿಗದೊಂದು ನಿಲುವಂಗಿ ಹೊಲಿದೆ ಹಳೆಪುರಾಣವ ಬಳಸಿ ಬುಡದಿಂದ ತುದಿಗೆ, ಹೊಲಿದೆ ಬಣ್ಣದ ಜರಿಕಸೂತಿ ಹೆಣಿಗೆ. ಯಾರೋ ಪೆದ್ದರು ನಿಲುವಂಗಿ ಕದ್ದರು, ತಮ್ಮದೇ ಎನ್ನುವಂತೆ ಅದ ತೊಟ್ಟು ಮೆರೆದರು ಲೋಕದೆದುರು; ಚಿಂತಿಲ್ಲ ಹಾಡೇ, ತೊಡಲಿ ಅವರೇ, ಬೆತ್...

(ದಿವಂಗತ ಗೆ. ಪೇಜಾವರ ಸದಾಶಿವರಾಯರನ್ನು ಕುರಿತು) ಕಡಲ ದಾಂಟುವದೆ ಕಡು ಪಾಪವೆಂದುಸಿರುತಿಹ ಕುರುಡು ನಂಬಿಗೆಯ ಹಿಂತುಳಿದು ಮುಂದಡಿಯಿಟ್ಟೆ ನಾಡ ನಿಲಿಸುವ ಯಂತ್ರವಿದ್ಯೆಯೆಡೆ ಗುರಿಯಿಟ್ಟೆ. ನಾಡ ಹಿರಿಯರ ನೋಟದಂತೆ ನಡೆದಿರಲಹಹ! ಪಡುವಣದ ವಿದ್ಯೆಯೆದೆ...

ಭುವಿಯ ಚೇತನಾಗ್ನಿಯಲ್ಲಿ ಸೂರ್‍ಯ ಬಲಿಯು ನೀಡುವ; ಅಮೃತಗರ್ಭನಾದ ಸೋಮ ಸೋಮರಸವನೂಡುವ. ಅಗಣಿತ ಗ್ರಹ-ತಾರಕಾಳಿ ಮಧುಹೋಮವ ನಡೆಸಿವೆ; ಮೋಡ- ಗುಡುಗು, ಮಿಂಚು-ಸಿಡಿಲು ಉದಧಿಗರ್ಘ್ಯ ಕೊಡುತಿವೆ! ೫ ಸಾಗರ ಹೋತಾರನಾಗಿ ಸೂರ್ಯಗೆ ಬಲಿ ನೀಡುವ; ಸೂರ್ಯನು ದಾತ...

ಅಗಲೆಲ್ಲ ಬೆವರ್ ಅರ್‍ಸಿ ಜೀತ ಕೆರ್‍ಕೊಂಡು ಅಟ್ಟೀಗ್ ನಾ ಬತ್ತಂದ್ರೆ ಮೈ ಕೈ ಮುರ್‍ಕೊಂಡು ಜೋಬೆಲ್ಲ ಜಡ್ತಿ ಮಾಡ್ತೌಳ್ ನನ್ ಎಡ್ತಿ! ೧ ಒಂದ್ ದಪ ತಂದ್ ಜೀತ ಪೂರ ಕೊಟ್ಬುಟ್ಟಿ ಯೆಂಡಕ್ ಒಂಬತ್ ಕಾಸ ಕೇಳ್ದ್ರೆ ಬಾಯ್ಬುಟ್ಟಿ- ಪೊರಕೇನ್ ಎತ್ತಿಡ್ದಿ ಬಡ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...