
ನಂಜಿ ರತ್ನ ತೋಟ್ಕ್ ಓಗಿದ್ರು ಒಂದಾರ್ ಮಾತಾಡ್ನಿಲ್ಲ; ಔರ್ಗೊಳ್ ಮಾತಾಡ್ನಿಲ್ಲಾಂತಲ್ಲ- ಆಡೋಕ್ ಮನಸಾಗ್ನಿಲ್ಲ. ೧ ನಂಜಿ ರತ್ನಂಗ್ ತೋರಿದ್ಲೊಂದು ದುಂಬಿ ತಬ್ಬಿದ್ ಊವ! ರತ್ನನ್ ಮನಸಿನ್ ಅಡಗ್ ಸೇರಿತ್ತು ನಂಜಿ ಮನಸಿನ್ ರೇವ! ೨ ಮನಸಿನ್ ಜೋಡಿ ಯೀಣೆ...
ಶಕ್ತಿಯನೆಮಗೀವ ಅನ್ನದೊಳು ನೂರಾರು ತರಹ ಯುಕ್ತದೊಳಡುಗೆ ಮಾಡಲದುವೆ ಸಾವಿರದಾರು ತರಹ ಭಕ್ತಿಯೊಳೆಮ್ಮನ್ನವನು ನಾವೆ ಬೆಳೆದೊಡದು ವರಹ ಸೊಕ್ಕಿನೊಳಲೆವುದನೆ ಉದ್ಯೋಗವೆನೆ ವ್ಯರ್‍ಥವೆಲ್ಲರ ಬರಹ ರೊಕ್ಕವೆನುತನ್ನಮೂಲವನೆ ಮುಕ್ಕಿರಲೆಲ್ಲೆಡೆ ತ್ರಾಹ ̵...
(‘ಹೌದೋ’ ಹಾಕೂ ಕೊಬ್ಬ ಬೇಕಾತೀದು) ತಂದನ್ನೇ ತಾನೋ ತಾನನಂದೇ ನಂದಾನ ತಂದನ್ನೇ ತಾನೋ ತಾನನಾನಾ | || ೧ || ಶ್ವಾಮಿಯ ನೆನದೇನೋ ಭೂಮಿಯ ನೆನದೇನೋ ಶ್ವಾಮಿ ಶಂಕರನಾ ನೆನದೇನೋ || ನೆನದರೆ ಭೂಮಿಯ ತಾಯೇ, ಬಲ್ಲವ್ರೇ ನಿಮ್ಮ ನೆನೆದೇನೋ || ೨ || ಬಲ್ಲವ್ರ...
ಜೀವನದ ಸೊದೆಯ ನಾಮೀನಿಮಿಷ ಸವಿಯದಿರೆ ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು; ರವಿಶಶಿಗಳೋಡುತಿಹರೆಲ್ಲ ಶೂನ್ಯೋದಯಕೆ; ಸಾಗುತಿಹರಕಟ! ಬಾ, ಸೊಗವಡುವ ಬೇಗ. *****...
ಎಂಥ ಗಾಳಿ ಎಷ್ಟೊಂದು ಗಾಳಿ ಬೆಟ್ಟದ ಮೇಲಿಂದ ಬೀಸ್ಯಾವೆ ಗಾಳಿ ಬಯಲ ಮೇಲಿಂದ ಬೀಗ್ಯಾವ ಗಾಳಿ ಎತ್ತರದ ಗಾಳಿ ಉತ್ತರದ ಗಾಳಿ ಉತ್ತರ ಧ್ರುವದಿಂದ ನಿರುತ್ತರ ಗಾಳಿ ಗುಡುಗು ಮಿಂಚುಗಳ ಮುಟ್ಟಿದ ಗಾಳಿ ಸಾಗರದಲೆಗಳ ಅಟ್ಟಿದ ಗಾಳಿ ಸುಳಿಸುಳಿವ ಗಾಳಿ ಸುಳಿಯದ...
ಭವದುರ್ಗವಿಪಿನದೊಳು ಗಮ್ಯವರಿಯದೆ ತೊಳಲಿ ಶ್ರಾಂತಿಯಿಂ ಭ್ರಾಂತಿಯಿಂ ಗತಿಗೆಟ್ಟು ಮತಿಗೆಟ್ಟು ಮುಂತನರಿಯದೆ ನಿರಿಹಪರನಾಗಿ, ಅಂದಾರ್ತ ಪ್ಲವಗವಾಹಿನಿ ವಿಂಧ್ಯಕಾನನದಿ ಬಳಿಗೆಟ್ಟು ನಿರೀಹಮಾಗಿ ಋಕ್ಷ ಬಿಲಮುಖದಿ ನಿಂದವೊಲು, ಧರ್ಮಗಹ್ವರ ಮುಖದಿ ಶಂಕಿಸುತ...
ಧರ್‍ಮದ ಠೇಕೇದಾರರಿಂದ ಭೂಮಿಯ ಮೇಲೆ ದೆವ್ವದ ಕುಣಿತ ನೋಡಿದ್ದೇನೆ ನಾನು! ಗುಜರಾತಿನ ನರಮೇಧದಲ್ಲಿ ಮನುಷ್ಯತ್ವದ ಕತ್ತು ನಾಚಿಕೆಯಿಂದ ಕೆಳಗಾಗಿದ್ದನ್ನು ಕಂಡಿದ್ದೇನೆ ನಾನು! ಧರ್‍ಮ ರಾಜಕೀಯದಲಿ ಅಧರ್‍ಮದ ಕತ್ತಿ ಝಾಳಪಿಸಿದ ಗುಜರಾತನು ಕಣ್ಣಾರೆ ಕಂಡಿ...













