ಶಕ್ತಿಯನೆಮಗೀವ ಅನ್ನದೊಳು ನೂರಾರು ತರಹ
ಯುಕ್ತದೊಳಡುಗೆ ಮಾಡಲದುವೆ ಸಾವಿರದಾರು ತರಹ
ಭಕ್ತಿಯೊಳೆಮ್ಮನ್ನವನು ನಾವೆ ಬೆಳೆದೊಡದು ವರಹ
ಸೊಕ್ಕಿನೊಳಲೆವುದನೆ ಉದ್ಯೋಗವೆನೆ ವ್ಯರ್‍ಥವೆಲ್ಲರ ಬರಹ
ರೊಕ್ಕವೆನುತನ್ನಮೂಲವನೆ ಮುಕ್ಕಿರಲೆಲ್ಲೆಡೆ ತ್ರಾಹ – ವಿಜ್ಞಾನೇಶ್ವರಾ
*****