ಕಂಡಿದ್ದೇನೆ ನಾನು

ಧರ್‍ಮದ ಠೇಕೇದಾರರಿಂದ
ಭೂಮಿಯ ಮೇಲೆ ದೆವ್ವದ ಕುಣಿತ
ನೋಡಿದ್ದೇನೆ ನಾನು!
ಗುಜರಾತಿನ ನರಮೇಧದಲ್ಲಿ
ಮನುಷ್ಯತ್ವದ ಕತ್ತು
ನಾಚಿಕೆಯಿಂದ ಕೆಳಗಾಗಿದ್ದನ್ನು
ಕಂಡಿದ್ದೇನೆ ನಾನು!
ಧರ್‍ಮ ರಾಜಕೀಯದಲಿ ಅಧರ್‍ಮದ
ಕತ್ತಿ ಝಾಳಪಿಸಿದ ಗುಜರಾತನು
ಕಣ್ಣಾರೆ ಕಂಡಿದ್ದೇನೆ ನಾನು!
ತುಂಬು ಗರ್‍ಭಿಣಿಯ ಹೊಟ್ಟೆಸೀಳಿ
ಹೊರ ತೆಗೆದ ಮಗುವಿಗೆ
ಚುಚ್ಚಿ ಚುಚ್ಚಿ ಸಾಯಿಸಿದ ಪಾತಕಿಗಳನ್ನು
ಕಣ್ಣಾರೆ ಕಂಡಿದ್ದೇನೆ ನಾನು
ಗುಜರಾತಿನ ರಾಜಬೀದಿಗಳಲ್ಲಿ
ಮಾನಿನಿಯ ಮಾನ ಹರಜಾದದ್ದನ್ನು
ಕಂಡಿದ್ದೇನೆ ನಾನು
ಯುವಕ, ಮುದುಕ, ಮಹಿಳೆಯರ
ರಕ್ತದ ಹೊಳೆ ಹರಿಸಿದ್ದನ್ನು
ಕಂಡಿದ್ದೇನೆ ನಾನು
ದೇಶ ವಿಭಜನೆಯಾದಾಗ
ತಾಪಿ, ನರ್‍ಮದೆಯ ಅಲೆಗಳಲ್ಲಿ
ತೇಲಿ ಹೋಗುತ್ತಿರುವ ಹೆಣಗಳನ್ನು
ಕಣ್ಣಾರೆ ಕಂಡಿದ್ದೇನೆ ನಾನು

ಸಾಯುವಾಗಿನ ನೋವಿನ ಆರ್‍ತನಾದ
ರಕ್ಷಕರ ಎದುರಿನಲ್ಲೇ ಬಿಕ್ಕುತ್ತಿರುವ
ಮನುಷ್ಯತ್ವದ ಕಂಡಿದ್ದೇನೆ ನಾನು
ಗುಜರಾತಿನ ಗಲ್ಲಿಗಳಲ್ಲಿ
ಸುಟ್ಟು ಕರಕಲಾಗುತ್ತಿರುವ
ಮನುಷ್ಯತ್ವ ಕಣ್ಣಾರೆ ಕಂಡಿದ್ದೇನೆ ನಾನು.

ಲೋಕವೇ ಕಣ್ಣಾರೆ ಕಂಡಿದೆ
ಗುಜರಾತಿನಲಿ ಕರಗಿ ಹೋದ
ಮಾನವೀಯತೆಯ ಚಿಗುರುಗಳ
ಅವನ ಅಂತ್ಯದ ದಿನಗಳಲಿ
ಕಟಕಟೆಯಲ್ಲಿ ನಿಲ್ಲಿಸಿ ಕೇಳುವೆ
ನಿರಪರಾಧಿಗಳ ರಕ್ತ ಹರಿಸಿದ್ದಕ್ಕೆ
ನಿನಗೆ ದೊರಕಿದ್ದಾದರೂ ಏನು?
ನಿನ್ನ ರಾಮನಿಗೆ ತೋರಿಸುವುದಕೆ
ನಿನಗೆ ಮುಖವಾದರೂ ಇದೆಯೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಕ್ತದ ಚಲನೆ ಮತ್ತು ಹೃದಯದ ಬಡಿತ
Next post ನಿರೀಶ್ವರನನ್ನು ಕುರಿತು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…