ಹೃದಯದ ಪ್ರತಿ ಬಡಿತದಲ್ಲೂ ದೇಹದಲ್ಲಿ ಸುತ್ತಿ ತನ್ನೆಡೆಗೆ ಬಂದ ೨೧/೨ ಜೌನ್ಸ್ (೭೦ ಗ್ರಾಂ)ನಷ್ಟು ರಕ್ತವನ್ನು ಪಂಪ್‌ಮಾಡುತ್ತಿರುತ್ತದೆ. ಇದು ಮೋಹ, ಮಧ, ಮಾತ್ಸರ್‍ಯ, ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಪ್ರತಿನಿಮಿಷದಲ್ಲಿ೬ ರಿಂದ ೩೫ ಲೀಟರ್ (೨೦೦ ರಿಂದ ೧೨೦೦ ಜಾನ್ಸ್)ವರೆಗೂ ಏರುಪೇರಾಗಬಹುದು. ಸರಾಸರಿ ಒಂದು ನಿಮಿಷದಲ್ಲಾಗುವ ೭೦ ಬಡಿತದಲ್ಲಿ ಸು ೫೦೦೦ ಗ್ರಾಂ. ೧೫ ಕೆ.ಜಿ.) ಆಗುತ್ತದೆ. ಇದೇ ಲೆಕ್ಕದಲ್ಲಿ ಮುಂದುವರಿದು ನೋಡಿದಾಗ ಒಂದು ವರ್ಷದಲ್ಲಿ ಸು. ೬ ಲಕ್ಷ ೮೦ ಸಾವಿರ ಗ್ರ್ಯಾಮ್ ಅಥವಾ ೩೧ ಲಕ್ಷ ಲೀಟರ್ ನಷ್ಟು ರಕ್ತ ಪಂಪ್ ಆಗಿರುವುದನ್ನು ಕಂಡು ಯಾರೊಬ್ಬರಿಗೂ ಈ ಅದ್ಭುತ ಪಂಪ್ ಬಗ್ಗೆ ಅಶ್ಚರ್‍ಯ ಅನ್ನಿಸದೇ ಇರಲಾರರು. ರಕ್ತ ಹೃದಯದಿಂದ ಕಾಲಿನವರೆಗೆ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿಯೇ ಬರುತ್ತದೆ. ಈ ಅಂಶವನ್ನು ಮೊದಲಿಗೆ ಹೊರಗೆಡವಿದ್ದವರು ವಿಲಿಯಂ ಹಾರ್‍ವೆ (೧೫೭೮-೧೬೭೫) ಆದರೆ ಇವನು ಹೃದಯದ ಬಡಿತದ ಬಗೆಗೆ ತಿಳಿಯಲಾಗದೇ ಹತಾಶನಾಗಿದ್ದ. ರಕ್ತ ಹೃದಯದಿಂದ ತದೇಕವಾಗಿ ಪಂಪ್ ಆಗಿದ್ದರೆ ದೇಹದ ಯಾವುದೇ ಜೀವಕೋಶಗಳನ್ನು ಜೀವಂತವಾಗಿಯೂ ಚುರುಕಾಗಿಯೂ ಇಡಲು ಸಾಧ್ಯವಿಲ್ಲ ಜೀವಕೋಶಗಳ ಉಳುವಿಗೆ ಬೇಕಾದ ಆಮ್ಲಜನಕ ಈ ರಕ್ತದಿಂದ ಒದಗುತ್ತಿರುತ್ತದೆ. ಆಮ್ಲಜನಕ ರಕ್ತ ದೇಹದ ಎಲ್ಲ ಜೀವಕೋಶಗಳಿಗೂ ತಲುಪಿ ಅಲ್ಲಿಂದ ಆಮ್ಲ ಜನಕಕಳೆದುಕೊಂಡ ರಕ್ತಹೃದಯದ ಮೇಲ್ಬಾಗದ ಬಲ ಕವಾಟಿಗೆ ಬರುತ್ತದೆ. ಈ ಭಾಗಕ್ಕೆ ಬಂದ ರಕ್ತ ಬಲ ಶ್ವಾಸಕೋಶಕ್ಕೆ ಪಂಪ್ ಆಗುತ್ತದೆ.
*****
Related Post
ಸಣ್ಣ ಕತೆ
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…