ಛೇ ಇದು ಸೂಳಿಗಾರಿಕೆ
ಛೇ ಇದು ಸೂಳಿಗಾರಿಕೆ ||ಪ||

ಬಾಯೆನುತಲಿ ನೀ ಕರೆದರೆ ಬರಲೋಣ
ನ್ಯಾಯ ಬೆಳಸಿ ನಿಮಗ್ಹೇಳುವದಿದು ||೧||

ಕೆಟ್ಟ ಹೆಂಗಸನಿಟ್ಟುಕೊಂಡವನೆನ್ನ
ಗುಟ್ಟಿನ ಸ್ನೇಹವಮರಿಸಿಟ್ಟ ಬಳಿಕ ಇದು ||೨||

ಚಿತ್ತಗಡಕಿ ಎನ್ನ ಜತ್ತಿನವರ ಕೈ
ಕತ್ತಿ ಕೊಟ್ಟು ಕಡಿದಾಟಕ ಹಚ್ಚುವುದಿದು ||೩||

ಸುಳ್ಳಿನ ಸೂಳೆಯರ ಒಲ್ಲದೆನ್ನ ಮನ
ಮೆಲ್ಲನೆ ಜುಲುಮಿಲೆ ಮೇಲ್ ಬೀಳುವದಿದು ||೪||

ಶಿಶುವಿನಾಳಧೀಶ ಸೇವಕನಾತನ
ರಸಿಕ ಸಖತ್ವದಿ ವಿಷವ ಬೆರಿಸುವುದು ||೫||

*****