ಏಳು ವಾಹನದ ಗೀಳು ಅಂಟಿತ್ತೊ ! ಬೆಳಿಗ್ಗೆ ಅದನ್ನೇರಿಯೇ ಎಚ್ಚರಾಗಿ ರಾತ್ರಿ ತೂಕಡಿಸಿಯೇ ಕೆಳಕ್ಕಿಳಿಯುವಷ್ಟು ಮೆಚ್ಚಾಗಿ ಕಚ್ಚಿತ್ತು ಯಂತ್ರದ ಹುಚ್ಚು ವ್ಯಾಮೋಹ. ಸದಾ ಒತ್ತಿ ಒತ್ತಿ ಬ್ರೇಕೇ ಕಾಲು, ಹ್ಯಾಂಡಲೇ ತೋಳು ದೀಪವೇ ಕಣ್ಣು,...
ಅಂದು ಇಂದು ಎಂದಿಗೂ ಲೋಕದ ಥರ ಒಂದೇ ಅವತಾರಗಳಳಿದರೂ ಕ್ರಿಸ್ತ ಬುದ್ಧ ಎಳೆದರೂ ಒಂದೆ ಒಂದು ಇಂಚೂ ರಥ ಸರಿಯಲಿಲ್ಲ ಮುಂದೆ. ಅಂಥ ಇಂಥ ರಥವೆ ? ಕೊಂಚ ಕೊರಕಲತ್ತ ಜಾರಿ ತಪ್ಪಿತಷ್ಟೆ ದಾರಿ,...
ತಲೆಯಲ್ಲಿ ನೆರೆ, ಕೆನ್ನೆ ಹಣೆಯಲ್ಲಿ ಹಳೆಯ ಬರೆ ಮೈ ಸುಕ್ಕು, ಉಸಿರಾಟ ಕೊಳವೆ ತುಕ್ಕು ಕಾಲೆರಡು ಕೋಲು, ಕೈ ಬೀಳು, ದೃಷ್ಟಿಯೆ ಹಾಳು ಹೊಸ ವರ್ಷ ಬಾ ಬಂದು ನಮ್ಮನ್ನಾಳು ಬುದ್ಧಿ, ಶ್ರಮ, ಹಣ...
ಮಣ್ಣನ್ನು ಹಿಡಿದೆತ್ತಿ ಮಣ್ಣಲ್ಲಿ ಬಿಡುವಾಗ ಕಣ್ಣು ಮುಚ್ಚುತ್ತೇನೆ ಕೊನೆಯಾಗಲಿ ; ನಡುವೆ ಹತ್ತಿರ ಸುಳಿದು ನೂರು ಕಾಮನ ಬಿಲ್ಲ ಮೀರಿ ಮಿಂಚಿದ ಚಿಗರೆ ಹರಿದೋಡಲಿ ಬಿಟ್ಟ ಕೈಯನು ಸುಟ್ಟ ಕೊರಡೆನಲಿ ವ್ಯಥೆಯಿಲ್ಲ, ಮರ್ತ್ಯಲೋಕದ ಮಿತಿಗೆ...
ನಿನಗೆ ಅರವತ್ತಾಯಿತಾ ಎಂದದ್ದು ‘ಬರೋ ಹೊತ್ತಾಯಿತಾ’ ಎಂದು ಕೇಳಿಸಿ ಸಣ್ಣಗೆ ಬೆಚ್ಚಿದೆ ಒಳಗೆ, ಯಾರು ಕೇಳಿದ್ದು ಹಾಗೆ ? ಜೊತೆಗಿದ್ದ ಅಳಿಯನ ? ಮಗನ ? ಅಥವಾ ಸಿನಿಮಾ ರೇಸು ಕಾರು ಬಾರು ಎಂದು...
ಗಾಳಿ ಕೂಗುತ್ತಿದೆ ಕಡಲು ಮೊರೆಯುತ್ತಿದೆ ಮರ ಗಿಡ ತೋಟ ಗದ್ದೆ ತಲ್ಲಣಿಸಿ ತೂಗಿ ನೆಲಕ್ಕೆ ಒಲೆಯುತ್ತಿದೆ, ಮೇಘದ ಕಪ್ಪು ಸಲಗಗಳ ದಾಳಿಗೆ ಬೆದರಿ ಬೆಳಕು ತುರಾತುರಿ ತಳ ಕಿತ್ತಿದೆ ಚಚ್ಚಿದೆ ಮಳೆ ಬೆಚ್ಚಿದೆ ಇಳೆ...
ಉರುಳಿ ಅರಿವಿನ ಮೋರಿಯಲ್ಲಿ ನರಳುತ್ತಿರುವೆ ಇಲ್ಲಿ ನೆಮ್ಮದಿ ಎಲ್ಲಿ ? ಕೊಳೆತು ನಾರುತ್ತಿರುದ ಹಳೆಯ ಭೂತ ; ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ, ಎರಡು ಗಡಿಗಳ ನಡುವೆ ಒಡೆದು ಬಿದ್ದಿದೆ ರೂಪ....