ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ನನ್ನ ಮನೆಯ ನೆತ್ತಿಯ ಮೇಲೆ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ ಚಳಿಯಲ್ಲಿ ನಡುಗುತ್ತ ಮಲಗಿದ್ದ ಹಸಿವಿನಿಂದ ಚಡಪಡಿಸುತ್ತಿರುವ ಮಕ್ಕಳಿಗೆ ಹೇಗೆ ಹೇಳಲಿ ನಾನು ನಮ್ಮ ರಂಜಾನಿನ ಉಪವಾಸ ಇನ್ನೂ ಮುಗಿದಿಲ್ಲ...

ಕಣ್ಣ ರೆಪ್ಪೆಯ ಕೆಳಗೆ

ಎಲ್ಲಿಂದ ಬರುತ್ತವೆಯೋ ಹಾಳಾದ ಕಣ್ಣೀರು? ಏಕೆ ಹರಿಯುತ್ತವೆಯೋ ಬಳಬಳನೆ ಸುಮ್ಮನೆ! ಗೋರಿಗಳ ಕೇರಿಯಲ್ಲಿ ಮಸಣ ಸಮಾಧಿಯಲಿ ಅಂತರಂಗದ ಏಕಾಂತ ದೂರದೂರದ ತನಕ ಹಬ್ಬಿರುವ ಮೌನದಲಿ ಕುಟುಕುತ್ತಿದೆ ಗೋರಿಕಲ್ಲು ಗಾಳಿಯಲಿ ಕನಸ ತೂರಿ! ಏಕೆ ಹರಿಯುತ್ತಿದೆ...

ಕವಚ

ಜೋತು ಬಿದ್ದಿದೆ ಮೇಲೆ ಬಣ್ಣ ಬಣ್ಣದ ಕವಚ ಸತ್ತ ಮೌಲ್ಯಗಳ ಹೆಣಭಾರ. ಹೊತ್ತು ಸಾಗಿರುವೆ ಬಹುದೂರ ಹೀಗೇಯೇ ಮರುಮಾತಿಲ್ಲದೆ. ಸನಾತನ ಬೇರುಗಳು ಬಿಳಲುಗಳು ಆಳಕ್ಕಿಳಿದು ಕತ್ತಲೆ ತೊಟ್ಟಿಕ್ಕಿತ್ತು ಹೊತ್ತಿರುವ ಕವಚಕ್ಕೆ ಮೆತ್ತಿದೆ ಬೆವರಿನ ಜಿಡ್ಡು...

ಮಂಡೇಲನ ಬಂಧುಗಳು

ಸೂರ್ಯನಿಗೆ ಛತ್ರಿ ಅಡ್ಡಿ ಹಿಡಿದರೇನಂತೆ? ಸೂರ್ಯ ಹುಟ್ಟಲೇ ಇಲ್ಲವೆ? ಎದೆಯಲ್ಲಿ ಮಾನವ ಕಾವ್ಯ ಕೈಯಲ್ಲಿ ಖಡ್ಗ ಹಿಡಿದರೇನು ಮಾನವೀಯತೆ ಮೊಳಗಲಾರದೆ? ನಾಝಿಗಳ ಜೈಲಿನಲ್ಲಿ ಸರಳು ಬಂದಿಖಾನೆಯಲಿ ಎದೆ ಝಲ್ಲೆನಿಸುವ ವಾಸ್ತವಗಳು ಅನುಭವ ಉಲಿಯುತ್ತಿದ್ದಾರೆ ಮಂಡೇಲನ...

ಬದುಕಿನ ಭಿಕ್ಷೆ

ಲೋಕದಲಿ ಕಷ್ಟಗಳು ಬಂದರೆ ನಿನ್ನ ಮನೆ ಬಾಗಿಲಿಗೇ ಏಕೆ ಬಂದವು ಹೇಳು? ನಿನ್ನ ಕಷ್ಟಗಳೇ ಲೋಕವಲ್ಲ ಹೆರವರ ಕಾಲಿಗೆ ಚುಚ್ಚಿದ ಮುಳ್ಳನೊಮ್ಮೆ ತೆಗೆದಾದರೂ ನೋಡು ಆಗ ಹೇಳು ನಿನಗೆ ಹೇಗನಿಸುತ್ತದೆ? ಖಡ್ಗದಿಂದಾದ ಗಾಯಕ್ಕಿಂತ ನಾಲಿಗೆಯ...

ಯಾರಲ್ಲಿ ಬೇಡಲಿ?

(೧) ನಿನ್ನ ಭಾವಚಿತ್ರದ ಮೇಲೆ ಕಣ್ಣೀರ ಹನಿಗಳೀಗ ಇಲ್ಲ ನಿಜ, ಆದರೆ ಹನಿಗಳ ಕಲೆಗಳು ಖಾಯಂಮ್ಮಾಗಿ ಉಳಿದಿವೆಯಲ್ಲ. ಯಾರೋ ನೋವು ಕೊಟ್ಟರು ಯಾಕೆ ಹೇಳಲಿ ಅವರ ಹೆಸರು? ಯಾರೋ ಪ್ರೀತಿಯಲಿ ವಿಷಬೆರೆಸಿದರು ಯಾಕೆ ಹೇಳಲಿ...

ಪಾಪಿಗಳ ಲೋಕದಲಿ

ಜಾಹಿರಾತು ಕೊಡುತ್ತಾಳೆ ಅವಳು ಇಪ್ಪತ್ತೆರಡು ವರ್ಷದ ಕನ್ಯೆ ಶ್ರೀಮಂತ ಅಮೇರಿಕಾದ ಮಗಳು. “ನನ್ನ ಹೆಸರು ಬ್ರುನೆಟ್ ನನಗೀಗ ಇಪ್ಪತ್ತೆರಡು ವಯಸ್ಸು ಅಮೇರಿಕಾದ ಮಗಳು ನಾನು ನನ್ನ ಕನ್ಯತ್ವ ಪರಿಶುದ್ಧ ಅದಕ್ಕಿದೆ ವೈದ್ಯರ ಪ್ರಮಾಣಪತ್ರ ಯಾರಾದರೂ...

ಧರ್ಮದ ಮುಸುಕಿನೊಳಗಿಂದ

ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ ಮಿಂಚಿನ ವಿದ್ಯುತ್‌ ಹರಿದಾಟ ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ ಬಯಲು ಸೀಮೆಯ ರೊಟ್ಟಿಚಟ್ನಿ ರುಚಿಕಂಡ ಶೇಖನೊಬ್ಬ ಬಂದ ಕತ್ತಲೆ ರಾತ್ರಿಯಲ್ಲಿ ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು ಮುಗಿಸಿಯೇ ಬಿಟ್ಟ ಒಪ್ಪಂದ...

ಬೆಳಕ ಹುಡುಕುತ್ತ

ಸದಾ ಹಸಿರಿನ ಉಸಿರು ಕವಿಯ ಕಾವ್ಯದ ಭೂಮಿ ಆಶೆಗಳಿವೆ, ಕನಸುಗಳಿವೆ ನೂರಾರು ಉಸಿರಾಡಿದರೆ ನನ್ನ ಕಾವ್ಯ ಬದುಕುತ್ತೇನೆ. ಇಲ್ಲಿಯ ಒಂದೊಂದು ವಸ್ತುವಿನಲ್ಲೂ ಗತಮರೆತ ಇತಿಹಾಸ ಹುಡುಕುತ್ತೇನೆ. ಕಾವ್ಯ ಬದುಕಿದರೆ ಉಸಿರಾಡುತ್ತೇನೆ. ವಿಶಾಲ ಭೂಮಿಯ ಮೇಲೆ...

ಅಹಲ್ಯೆಯ ತುಣುಕುಗಳು

ಕೊತ ಕೊತನೆ ಕುದಿದು ಉಕ್ಕುವ ಸಾರಿನಲಿ ಉಪ್ಪು ಹುಳಿ ಖಾರಗಳ ಹದ ಮಾಡಿದ ಹೊದರು ಉಕ್ಕಿ ಬರುವ ನೊರೆಯ ಶಾಪ ವಿಮೋಚಿತ ಗುಳ್ಳೆ ಒಡೆದು ಸ್ರವಿಸಿದ ಕನಸು ಮುಚ್ಚಿದ ಕದ ಬಿಚ್ಚಿದ ಶಾಪ ಮುಕ್ತ...