
ಮೈಯಾಸರೆಯ ಜೀವ ಗಳಿಗೆಯಿರವಿನದೆನ್ನೆ ಅರಿಷಟ್ಕತಂತ್ರದಿಂ ನಿತ್ಯತೆಯನು ಗೆಲುವುದದು ಜನಜನಿಸಿ ಜಡದೊಡನೆ ಸೆಣಸುತ್ತ ಪ್ರಭುವೆನಿಸಿ ಇಚ್ಛೆಗಳವಡಿಸಿ ಅದನು. ಜೀವದಾಸರೆ ಚಿತ್ತ; ಅದರೊಡನೆಯಳಿವುಳಿವು; ದಿವ್ಯಾನುಭೂತಿಗೂ ಮೂಡು ಮುಳುಗು; ಯಮನಿಯಮಧ್ಯಾನಾದಿ...
ಎಳೆತನದಿನಿ೦ದುವರೆಗೀ ಜಗದ ಬೆರಗ ನಾ- ನಳಿಯದಂತಿರಿಸಿಹವು ವಸ್ತು ವ್ಯಕ್ತಿ ಅಲ್ಪವಿವು ಸಾಮಾನ್ಯವೆನೆ ಪ್ರಕಟಗೈಯುತ್ತ ತಮ್ಮತುಲ ಸುಖದುಃಖವೀವ ಶಕ್ತಿ. ತನಗೆ ತನ್ನರಿವಷ್ಟೆ; ಮಿಕ್ಕುದರ ತಿಳಿವೆಲ್ಲ ಭ್ರಮೆಯೆನಿಸುವೀ ತೋರ್ಕೆಯರಿವರಾರು? ನೆಚ್ಚಿದರ ವಂಚ...
ಕಡಲಿನಾವಿಯನೆತ್ತಿ ತಿರೆಗದನು ಮರೆಮಾಡಿ ಮುಗಿಲ ಮೇಲೆಯೆ ಬೆಳಗುವಿನತೇಜದಂತೆ ಭವಕವಿದ ದುರ್ದಿನದೊಳದರ ಮೇಲಾಡುತಿಹ ರಸದ ತೇಜಕೆ ಜೀವ ಹಂಬಲಿಪುದಿಂತೆ. ಆ ಮುಗಿಲ ಬಿಡಿಸುತಾ ಕಿರಣಗಳಿಗೆಳೆಸೋ೦ಕ ತಂದು ಕತ್ತಲ ಕಳೆವ ಶುಭಕಲ್ಪಗಳನು ಸುಂದರಾಗಮಕಲಿತ ದೇವೋತ್...
“ಚೆಲುವನಾರಾಯಣಾ ಎಂಬುಲಿವು ಕಿವಿಸೋಕೆ ಮಳಮಳನೆ ಕಣ್ಣ ಹನಿಯುದುರುವುದು” ಎಂದ ಸತ್ಯಲೋಕನಿವಾಸಿ ರಸಕಾತರಂ ಮೌನಿ ನನ್ನನುತ್ತರಿಸಲೀ ಭಾವಗಳ ತಂದ. ‘ಹರಿ’ ಎನ್ನೆ ಗರಿಕೆದರಿ ರೆಕ್ಕೆ ಹರಡುವ ಸಂತ- ಚಿತ್ತದನುಕರಣೆಯೊಳು ಹಂಸಗತಿಗೆರೆ...
ಸುಪ್ತಿಯೊಳು ಭವವಿಲ್ಲ ಸ್ವಪ್ನದೊಳು ಋತವಿಲ್ಲ ಜಾಗರದಿ ಋತಜುಷ್ಟ ಭವವೇಳ್ವುದು ಜಾಗರದಿ ರಸದತ್ತ ಕುಡಿವರಿವ ಭವದೊಳಗೆ ಹಿಂಜರಿದು ಋತ ಸತ್ಯಕೆಡೆಗೊಡುವುದು ಭಾವಾವಲಂಬಿಯೀ ಸತ್ಯವೆಂಬಿಹದ ಬೆಲೆ ಸ್ವರ್ಗಾದಿ ಲೋಕಗಳಿಗದುವೆ ತಲವು ಇಂದ್ರಾಗ್ನಿವರುಣರನು ದೇ...
ಮರದೊಳೆಂತೋ ಅಂತೆ ತುಂಬೊಲುಮೆ ಸಂತನೆಡೆ ನಿಶ್ಶಂಕೆಯೊಳು ನೆರೆವ ಹಕ್ಕಿಗಳ ತೆರದಿ ನಿಸ್ತಬ್ಧನೆನ್ನೆಡೆಗೆ ಬಹ ಭೀರುಭಾವಗಳ ಕೆಳೆಯ ನೋನೋಡೆಂದು ಸರಸ ಕೌತುಕದಿ ನುಡಿಬೆರಳ ನೇವರಿಕೆಗಳವಡುವ ಹಲಕೆಲವ- ನಾದರಿಸಿ ತೋರುತಿಹೆ ವೃತ್ತ ವೃತ್ತದೊಳು ಜೀವ ಜೀವದ ನ...
ಇದು ಇನಿತೆ ಎಂಬಂತೆ ಕೊರೆಯಿಲ್ಲವೆಂಬಂತೆ ಕಾಣುವನಿತೇ ಪೂರ್ಣವೆಂಬ ತೆರದಿ ನೆಲದುಬ್ಬಿನೀ ಮಲೆಯ ತಲೆಯ ಗುಡಿ ಮೊನೆಯಿಂದ- ನೆಲವ ಕವಿವೀ ಬಾನ ನೀಲಿಮೆಯ ತಲದಿ ಸೃಷ್ಟಿಯೆಲ್ಲವ ತುಂಬಿ ಹಸರಿಸುವ ನಿಸ್ಸೀಮ ಸದ್ಭಾವಕೇಂದ್ರದೊಳು ವಿಶ್ರಾಂತನಂತೆ ಎಲ್ಲ ಬೆಲೆಗ...
ಹಸಿರಿನೇರುವೆ ಹಗಲ ಬೆಳಕಿನೊಳು ಬೆರೆದಂತೆ ಸಂಜೆಮುಗಿಲಿನ ಮಳಲೊಳೋಲಗಿಸುವಂತೆ ಭೀಷ್ಮ ಜಲಪಾತದೊಳು ಸ್ಥಿರಚಂಚಲೇಂದ್ರಧನು ಎಸೆವ ಪರಿ ಭವದ ಮೇಲಾಡುತಿರುವಂತೆ ಬಣ್ಣ ಬಣ್ಣದಿ ಬೆಳಕ ತಡೆದಿಡುವ ಹೂ ಮರಗ- ಳಲುಗಿನೊಳು ಬಂದು ಸಾರಿದನೆನ್ನುವಂತೆ ಮಲೆಯ ಘನಮೌನ...
ಜಗದೆಲ್ಲ ಜೀವಿಗಳ ಕರ್ಮರಸ ಪಾದಪಂ ಜೀವವಿದು ಮರ್ಮರಿಸುವುಲಿಯೆಲೆಯೊಳು ಆ ಬೆಳಕಿನುಸಿರಾಡಿ ಮೂಲಸತ್ವದ ಹೊಗಳ ತಳೆದು ಕಂಪಿಸುತಿಹುದು ಸಡಗರದೊಳು. ಹರಣವೆ ಹಸಾದವೆನೆ ವಿಶ್ವ ಶಿವಪದವೆನ್ನೆ ನಲವೆಲ್ಲೆ ಗೆಡೆಸಿಹುದು ನಡುಗಡ್ಡೆಯ; ಎಲ್ಲ ತಿಳಿವನು ಕಳೆದು ನ...
ಉಗ್ರನೊಳಗುಗ್ರನ ಶಾಂತನೊಳು ಶಾಂತನ ಉದಾಸೀನನೊಳುದಾಸೀನನನ್ನು ಒಲಿವವರೊಳೆತ್ತುವನ ಹಗೆವವರೊಳಿಳಿಸುವನ ಇಂತೆಲ್ಲಪರಿಯೊಳೂ ಕಾಂಬನನ್ನು ಅದು ಅವನು ಅವಳೆಂಬ ಬಗೆಬಗೆಯ ನೆಲೆಯೊಳಗೆ ಸೊಗದುಕ್ಕಗಳ ನನಗೆ ತೋರುತಿಹನ ಕುರಿತು ಚಿಂತಿಸೆ ಬೆರಗ ತರುವವನ ಎಂತು ನಾ...













