ನೋಡದೊ ಸ್ವಾತಂತ್ರ್‍ಯಾಕಾಶದಲಿ ಹಾರುತ್ತಿದೆ ನವ ರಾಷ್ಟ್ರಧ್ವಜವು! ಹಾರಲಿ! ಏರಲಿ! ಈ ಹೊಸ ಬಾವುಟ! ಚಿರ ಬಾಳಲಿ ನವ ಭಾರತ ಕೂಟ! ಹಿಂದೂ ಮುಸ್ಲಿಮ ಸಿಕ್ಕರು ಒಂದು ಹಿಂದೆ ಇಂದು ಮುಂದೆಂದೆಂದೂ- ಇಂತು ಸಾರುತಿದೆ ಈ...
ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು? ಜಾತಿ ಮತ ಪಂಥಗಳ ಭೇದಗಳನೆ ಹಿಡಿದು, ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು, ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ ಸರ್ವಾಧಿಕಾರ ಬರೆ ಸ್ವಾತಂತ್ರ್ಯವೆ? ಬಡವ...
ಎಂದಿನಂತೆಯೆ ಬಂದಿತೇ ನಾಡ ಹಬ್ಬ? ನಮ್ಮ ನಾಯಕರೆಮ್ಮನಾಳುವುದೆ ಹಬ್ಬ! ಅದು ಹೊರತು, ಹಸಿದವನ ಕೈಗಿತ್ತು ಕಬ್ಬ, ‘ಓದಿ ತಣಿ’ ಎಂದಂತೆ ನಾಡಹಬ್ಬ! ಬಣಜಿಗನ ಬೊಕ್ಕಸವು ತುಂಬಿತಿದೆ ಗಿಡಿದು; ಕಾರ್ಮಿಕರು ಕೆರಳಿಹರು ತಮ್ಮ ಕನಸೊಡೆದು; ಕ್ಷಾಮಮಾರಿಯ...
ಬನ್ನಿರಿ ಬಾಲರೆ ನಡೆಯಿರಿ ಗೆಳೆಯರೆ ನಾಡಿನ ಬಿಡುಗಡೆ ಕಾಳೆಗಕೆ ತನ್ನಿರಿ ನಿಮ್ಮ ಕಪ್ಪ ಕಾಣಿಕೆಯ ಭಾರತ ಮಾತೆಯ ಓಲಗಕೆ! ಸತ್ಯದ ಕುದುರೆಯನೆಲ್ಲರು ಹತ್ತಿ ಹಿಡಿದು ಝಳಪಿಸಿರಿ ಅಹಿಂಸೆ ಕತ್ತಿ ತಿರುಗಿಸಿ ಗಿರ್‍ರನೆ ನೂಲುವ ಚರಕ...