
ನಿದ್ದೆಯೊಳಿದ್ದೆನೊ ಎಚ್ಚರವಿದ್ದೆನೊ ನನಸೋ ಕನಸೋ ಎಂತರಿವೆ? ವರುಷವೆ ತುಂಬದ ಕೂಸಾಗಿರೆ ನಾ ಎನಗಿದ್ದಿತು ಹಿರಿಯನ ಪರಿವೆ. ಎಳೆಯನ ಮುದ್ದಿಡುತಿದ್ದಳು ತಾಯಿ ತುಟಿಗಿಳಿಯುತ್ತಿರೆ ಕಣ್ಣೀರು. ತುಟಿಜೇನಿನ ಸಿಹಿಗುಪ್ಪಿನ ರುಚಿ ಬರೆ ಆ ರುಚಿಯನು ಬಣ್ಣಿಪ...
ಕವೀಶ್ವರ, ಸುಹೃದ್ವರ, ನಿನ್ನ ಸಿರಿಗನ್ನಡದ ಮಾತಿನೊಳು ಮೂಡುತಿಹ ಭವ್ಯ ಸುಂದರ ಕಾವ್ಯ- ಕೋತು, ನುಡಿಯ ಬೆಡಗು ಹಾಡಿನ ಗುಂಗು ಊಹೆಯ ನವೋನವ್ಯತೆ ಭಾವನೆಯ ಉದಾರತೆ-ಇವಕೆ ಮನಸೋತು ರಸಾರ್ದ್ರಸ್ವಾಂತದಿಂ ಭಾವಿಪೆನು: ಆವ ಬೀಳಾಸೆಯಿಂದಾದಾವ ಶಾಪಕ್ಕೊ ಆವ ದ...
೧ ದೇವರನೆಯದೆ ಕಾವ್ಯದ ರಚನೆಯೆ ನುತಿಯುರಿ ಇಲ್ಲದೆ ಭಾವದ ಪಚನೆಯೆ? ತಪ್ಪಿದನಾದೊಡೆ ತಿದ್ದುವೆನೀಗ ದೇವತೆಯೊಂದನು ನೆನೆ ಮನ ಬೇಗ- ಎನಲೀ ನಗೆಬಗೆಗಿಂಬಾಗುತ್ತ ಬಂದಿತು ಬೆನಕನ ಭಾವನೆಯಿತ್ತ. ಬುದ್ಧಿಯ ನೀಡೈ ಗಣಾಧಿನಾಯಕ ಸಿದ್ಧಿಯ ತೋರೈ ಗಣಾಧಿನಾಯಕ ವಿ...
ಭವದುರ್ಗವಿಪಿನದೊಳು ಗಮ್ಯವರಿಯದೆ ತೊಳಲಿ ಶ್ರಾಂತಿಯಿಂ ಭ್ರಾಂತಿಯಿಂ ಗತಿಗೆಟ್ಟು ಮತಿಗೆಟ್ಟು ಮುಂತನರಿಯದೆ ನಿರಿಹಪರನಾಗಿ, ಅಂದಾರ್ತ ಪ್ಲವಗವಾಹಿನಿ ವಿಂಧ್ಯಕಾನನದಿ ಬಳಿಗೆಟ್ಟು ನಿರೀಹಮಾಗಿ ಋಕ್ಷ ಬಿಲಮುಖದಿ ನಿಂದವೊಲು, ಧರ್ಮಗಹ್ವರ ಮುಖದಿ ಶಂಕಿಸುತ...
ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ||ಪ|| ನನಗಂಟಲು ನೀನಾಗುವೆ ಕಶ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು. ನೀಲದಾಗಸದ ಹರಹೊಳು ಹಾರುತ ಅಂಚೆಯಂತೆ ಮುಗಿಲಂಡನು ಸ...














