ಮಾಮರ ತಳಿತಿಹುದೇತಕ್ಕೆ?-
ಕೋಗಿಲೆ ಸರಗೈಯಲಿ ಎಂದು.
ಹೂಗಿಡ ಮಲಗಿಹುದೇತಕ್ಕೆ?-
ತುಂಬಿಯು ಬಂಬಲಿಸಲಿ ಎಂದು
ಪಾರ್ಕೊಳು ಹಚ್ಚನೆ ಹಸುರೇತಕ್ಕೆ?-
ಗರಿಕೆಯ ರಸವನ್ನು ಹೀರುತ್ತ
ಭಾವಾವೇಶವ ಹೊಂದಲಿ ಎಂದೇ
ಕವಿಜನ ನಿಟ್ಟಿಸಿ ಬಾನತ್ತ!
*****
ಮಾಮರ ತಳಿತಿಹುದೇತಕ್ಕೆ?-
ಕೋಗಿಲೆ ಸರಗೈಯಲಿ ಎಂದು.
ಹೂಗಿಡ ಮಲಗಿಹುದೇತಕ್ಕೆ?-
ತುಂಬಿಯು ಬಂಬಲಿಸಲಿ ಎಂದು
ಪಾರ್ಕೊಳು ಹಚ್ಚನೆ ಹಸುರೇತಕ್ಕೆ?-
ಗರಿಕೆಯ ರಸವನ್ನು ಹೀರುತ್ತ
ಭಾವಾವೇಶವ ಹೊಂದಲಿ ಎಂದೇ
ಕವಿಜನ ನಿಟ್ಟಿಸಿ ಬಾನತ್ತ!
*****