Home / ಕಟ್ಟು ಆತ್ಮನ ಓಂ ಮಠಾ

Browsing Tag: ಕಟ್ಟು ಆತ್ಮನ ಓಂ ಮಠಾ

ದೂರ ದೂರ ದೂರ ಮುಗಿಲ ದೂರ ದೂರ ನೋಡುವಾ ಆಳ ಆಳ ಆಳ ಕಡಲ ಆಳ ಆಳ ಸೇರುವಾ ದಂಡೆ ಇಲ್ಲ ಬಂಡೆ ಇಲ್ಲ ಆದಿ ಅಂತ ದಾಟುವಾ ನಾದವಿಲ್ಲ ನೋಟವಿಲ್ಲ ಮೌನವೀಣೆ ಮೀಟುವಾ ರಸದ ವಿಶ್ವ ಋತದ ವಿಶ್ವ ಸತ್ಯ ಶಾಂತಿಯನುಪಮಾ ಶಿವನ ಜ್ಯೋತಿ ಶಿವನ ಪ್ರೀತಿ ತಂಪು ತನನ ನಿರ...

ಯೋಗಿ ಯಾಗೈ ಯಾಗ ಹೂಡೈ ವಿಶ್ವಶಾಂತಿಯ ಪೂಜೆಗೆ|| ವಿಷವ ನೀಡಲು ವಿಷವ ಪಡೆಯುವೆ ವಿಷದ ಹೆಂಡವ ಕುಡಿಯುವೆ ರಸವ ನೀಡಿ ರಸವ ಪಡೆಯುವೆ ಸಿಹಿಯ ಸಕ್ಕರೆ ಮೆಲ್ಲುವೆ ಬಿಚ್ಚು ಬಾಗಿಲ ಆತ್ಮ ಬಾಗಿಲ ತೂರು ಶಾಂತಿಯ ಕಿರಣವ ಪ್ರೀತಿ ದಾಂತಿ ಯೋಗ ಕಾಂತಿ ಹರಡು ದೇವ...

ಕುಳಬಾನವ್ವಾ ನಾನು ಕುಳಬಾನ ||ಪ|| ಆ ಕುಳ್ಳು ಈ ಕುಳ್ಳು ಕಾಕುಳ್ಳು ಬೀಕುಳ್ಳು ಕಾಡೆಮ್ಮೆ ಕಾಡೆತ್ತು ಕುಳಬಾನ ತುಂತುಂ ತಂದಾರ ಕುಳ್ರೊಟ್ಟಿ ತಟ್ಟ್ಯಾರ ಒಣಗಾಕಿ ಒಟ್ಟ್ಯಾರ ಕುಳಬಾನ ಹರೆಯದ ಬಾಲ್ಯಾರು ಪುಟಚಂಡು ಚಲುವೇರು ಉಟಸೆರಗು ಕಚ್ಹ್ಯಾಕಿ ಕಟ್ಟ್...

ಮುಳ್ಳು ಮುರಿದು ಎಳ್ಳು ಸುರಿದು ಬೆಳ್ಳಿ ಹೂವು ಮಿನುಗಲಿ ಜಗದ ಭೇರಿ ನೊಗದಿ ಹೇರಿ ಯುಗದ ದೇವಿ ಬಂದಳೊ ಮುಗಿಲ ನಾರಿ ಹಸಿರು ತೂರಿ ಹೂವು ತೇರು ತಂದಳೊ ಹಸಿರಿನೆದೆಯ ಹೂವು ಅರಳಿ ಕಲ್ಪವೃಕ್ಷ ಬೆಳಗಿತು ಹಳದು ಹೋಗಿ ಹೊಸತು ತೀಡಿ ಯುಗದ ಬಳ್ಳಿ ಬೆಳೆಯಿತು...

ಜೋಜೋ ಜೋಜೋ ಜೋಜೀಜಿ ಜೋಜೋ ತಾಯಿಯಿಲ್ಲದ ಕಂದ ಜೋಜೋ ಲಾಲೀ ಲಾಲೀ ಲಾಲೀ ಲಾಲೀ ತಂದೆಯಿಲ್ಲದ ಕಂದ ಜೋಜೋ ಕಮಲದ ಹೂ ನೀನು ಹವಳದ ಕುಡಿ ನೀನು ತುಂತುಂ ತುಂಬಿದಾ ಸುವ್ವಾಲಾಲಿ ಚಂದ್ರಲೋಕದ ಬೆಣ್ಣಿ ಸೂರ್ಯಲೋಕದ ತುಪ್ಪ ಚುಂಚಂ ಚುಂಚುಂ ಚಂದ್ರಲಾಲಿ ನನಸೀರಿ ನ...

(ಮಕ್ಕಳ ಗೀತೆ) ಪಕ್ಕ ತೊಟ್ಟು ಚುಕ್ಕಿಯತ್ತ ಹಕ್ಕಿಯಾಗಿ ಹಾರುವೆ ರಾಮ ಲೋಕ ಹನುಮ ಲೋಕ ದೇವಲೋಕ ಸೇರುವೆ ಜನ್ಮ ಲೋಕ ಜಡದ ಲೋಕ ಪರ್ಣ ಕುಟಿರ ಮಾಡುವೆ ಚಂದ್ರ ಲೋಕ ಸೂರ್ಯ ಲೋಕ ಶಿವನ ಲೋಕ ಸೇರುವೆ ವರ್ಣ ವಿರಸ ವರ್ಗ ವಿರಸ ಜೇನುತುಪ್ಪ ಮಾಡುವೆ ಪ್ರೇಮ ಭಾ...

ಹೂಡುಗಾಡಿ ಬಂಡಿಗಾಡಿ ಸತ್ಯಕಾಯಕ ತೋಟಕೆ || ಬೆವರ ಹೊಳೆಯಲಿ ಜಾರಿ ಈಜದೆ ಖೀರು ಪಾಯಸ ಏತಕೆ ಹೆಂಟೆ ಪೆಂಟೆಯ ಎದೆಯ ಒಡೆಯದೆ ಗಾದಿ ಮಂಚಾ ಯಾತಕೆ ಕಲ್ಲು ಮಣ್ಣಿನ ಹಣ್ಣು ಹುಡಿಯಲಿ ಕಣ್ಣು ಪಟಪಟ ತೋಯಲಿ ಮೈಯ ಕೂದಲ ಕುಳಿಯ ಹೊಂಡದಿ ಬೆಮರು ಚಟಚಟ ಸಿಡಿಯಲಿ ...

ಯಕ್ಕಯ್ಯ ಜೋಗಯ್ಯ ಜಲ್ಲೆಂದು ಬಾರಯ್ಯ ಯಲ್ಲವ್ನ ಸಿಂಗಾರ ಕಾಣಬಾರೊ ಒಳಗಣ್ಣು ಜಮದಗ್ನಿ ಹೊರಗಣ್ಣು ಕಾಳಾಗ್ನಿ ನೋಡಲ್ಲಿ ಕೂಗ್ಯಾನೂ ಪರಸುರಾಮೊ ಯಲ್ಲಾರ ಗುಡ್ಡಕ್ಕ ಯಲ್ಲವ್ನ ಕೊಳ್ಳಕ್ಕ ಉದ್ದುದ್ದ ಉದೊಯೆಂದು ಏರಬಾರೊ ನಲ್ಲಪ್ಪ ನಿಲ್ಲಪ್ಪ ಸಂಗಪ್ಪ ಶಿವನ...

ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ ಶಿವಬಲ್ಲ ಸಿಹಿಬೆಲ್ಲ ಆಗಬೇಕು ಕೆನೆಬೆಲ್ಲ ಕೊಬ್ಬರಿಯ ಎದೆಯನ್ನು ನೀಡಯ್ಯ ರಾವಣನ ರಂಬಾಟ ನಿಲ್ಲಬೇಕು ಕರಿಯ ಬೆಕ್ಕಿನ ಕಣ್ಣು ಗಿಡದ ಮಂಗನ ಕಣ್ಣು ಬೇಲಿಮುಂಗಲಿ ಕಣ್ಣು ನಿಲ್ಲಬೇಕು. ಓ ಅಕ್ಕ ಓ ತಾಯಿ ನನ್ನವ...

ಮೂಲವತನದ ಮೌನ ಲೋಲನೆ ನಿನಗೆ ನಾ ಪಂಚಾಮೃತಂ ಮುಕ್ತಿಧಾಮದ ಮುಗ್ಧಲೀಲನೆ ಕೊಳ್ಳುಕೋ ದಿವ್ಯಾಮೃತಂ ಬಾಯಿ ಗಿಂಡಿಯು ದೇಹ ಹಂಡೆಯು ಆತ್ಮ ಕೆಂಡವ ಹಾಕಿದೆ ಮಾಯ ಕುಳ್ಳಿಗೆ ಮೋಹ ಕಳ್ಳಿಗೆ ಯೋಗ ಕೊಳ್ಳಿಯ ಹಚ್ಚಿದೆ ಕಣ್ಣ ಸುಟ್ಟು ಕೈಯ ಸುಟ್ಟು ನನ್ನ ಸುಟ್ಟು ...

1...5678

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...